More

    ಸಾರ್ಥಕ ಮದುವೆ; ಮದುವೆಯ ದಿನದಂದು ದಲಿತ ಕುಟುಂಬಕ್ಕೆ ಬೆಳಕು ನೀಡಿದ ನವದಂಪತಿ!

    ಉಡುಪಿ: ನವ ವಿವಾಹಿತ ಜೋಡಿಯೊಂದು ತಮ್ಮ ಮದುವೆಯ ದಿನವನ್ನು ನೆನಪಿನಲ್ಲಿರುವಂತೆ ಮಾಡುವ ಸಲುವಾಗಿ ಸಾರ್ಥಕ ಕೆಲಸವೊಂದನ್ನು ಮಾಡಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆಯಲ್ಲಿದ್ದ ದಲಿತ ಕುಟುಂಬವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಾನವವೀಯತೆ ಮೆರೆದಿದ್ದಾರೆ.

    ಇದನ್ನೂ ಓದಿ: ಯಶ್​ ಮಗನ ಹೊಸ ಲುಕ್​! ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

    ಉಡುಪಿ ಜಿಲ್ಲೆಯ ಕನ್ನರ್ಪಾಡಿ ನಿವಾಸಿ ಶರಣ್ ಶೆಟ್ಟಿ, ಮತ್ತು ನವ್ಯ ಶೆಟ್ಟಿ ಈ ವಿಶಿಷ್ಟ ನವದಂಪತಿಗಳು. ದಲಿತ ಸಮುದಾಯದ ಶ್ರೀಮತಿ ಲೀಲಾ ಅವರು ಕಳೆದ 30 ವರ್ಷಗಳಿಂದ ಮನೆಯಲ್ಲಿ ವಿದ್ಯುತ್​ ಇಲ್ಲದೆ ಪರದಾಡುತ್ತಿದ್ದರು. ಇದೀಗ ಈ ಜೋಡಿಯ ಮದುವೆಯ ದಿನದಂದು ಲೀಲಾ ಅವರ ಮನೆಗೆ ಹೊಸ ಬೆಳಕು ಬಂದಿದೆ. ಸ್ವತಃ ದಂಪತಿಗಳೇ ಅವರ ಮನೆಗೆ ಬಂದು ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದ್ದಾರೆ.

    ಇದನ್ನೂ ಓದಿ: VIDEO| ಕರ್ನಾಟಕ ಮೂಲದ ವ್ಯಕ್ತಿಯಿಂದ ಉಳಿಯಿತು ಮುಂಬೈ ಪ್ರಯಾಣಿಕನ ಪ್ರಾಣ! ಪೊಲೀಸ್ ಪೇದೆ ಸಾಹಸ ಹೇಗಿದೆ ನೋಡಿ

    ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಮನೆಗೆ ತಗಲಿದ ವಿದ್ಯುತ್ ಸಂಪರ್ಕದ ಸಂಪೂರ್ಣ ವೆಚ್ಚವನ್ನು ನವದಂಪತಿಗಳು ಆಸರೆ ಚಾರಿಟೇಬಲ್ ಟ್ರಸ್ಟ್​ಗೆ ಹಸ್ತಾಂತರಿಸಿದ್ದಾರೆ. ಉಡುಪಿ ಭಾಷೆಲ್ ಮಿಷನರಿ ಹಾಲಿನಲ್ಲಿ ತಮ್ಮ ಮದುವೆ ಸಂಪ್ರದಾಯ ಮುಗಿದ ತಕ್ಷಣ ನೇರವಾಗಿ ಪೆರಂಪಳ್ಳಿಗೆ ಬಂದು, ಲೀಲಾ ಅವರ ಮನೆಗೆ ಬೆಳಕು ನೀಡಿದ್ದಾರೆ.

    ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

    ‘ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ’ ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts