More

    ಟೋಕಿಯೊ ಒಲಿಂಪಿಕ್ಸ್‌ಗೆ ತೃತೀಯ ಲಿಂಗಿ ಅರ್ಹತೆ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ವೇಟ್‌ಲಿಫ್ಟರ್ ಲೌರೆಲ್ ಹುಬಾರ್ಡ್ ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಸೂಪರ್ ಹೇವಿವೇಟ್ ವಿಭಾಗದಲ್ಲಿ 43 ವರ್ಷದ ವೇಟ್‌ಲಿಫ್ಟರ್ ಒಟ್ಟಾರೆ 628 ಪೌಂಡ್ಸ್ (185ಕೆಜಿ) ಭಾರ ಎತ್ತುವ ಮೂಲಕ ಟೋಕಿಯೊಗೆ ಟಿಕೆಟ್ ಗಿಟ್ಟಿಸಿಕೊಂಡರು. ಪ್ರತಿಷ್ಠಿತ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡ ಮೊದಲ ತೃತೀಯ ಲಿಂಗ್ ಸ್ಪರ್ಧಿ ಎನಿಸಿಕೊಂಡರು. ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಅತಿಹಿರಿಯ ವೇಟ್‌ಲಿಫ್ಟರ್ ಎನಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ: ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಬಿಸಿಸಿಐ ಭರ್ಜರಿ ಕೊಡುಗೆ

    ಟೋಕಿಯೊದಲ್ಲಿ ಲೌರೆಲ್ ಹುಬಾರ್ಡ್ ಅವರಿಗೆ ಮಹಿಳಾ ವಿಭಾಗದಲ್ಲಿ 4ನೇ ಶ್ರೇಯಾಂಕ ದಕ್ಕಲಿದೆ. ಹುಬಾರ್ಡ್, 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ, 2019ರ ಫೆಸಿಫಿಕ್ ಕ್ರೀಡಾಕೂಟದಲ್ಲಿ ಸ್ವರ್ಣ ಜಯಿಸಿದ್ದರು. ಅಲ್ಲದೆ, 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದರೂ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ‘ಕಾಮನ್ವೆಲ್ತ್ ಗೇಮ್ಸ್ ವೇಳೆ ನನ್ನ ತೋಳು ಮುರಿದಿತ್ತು. ಇದರಿಂದ ನನ್ನ ವೃತ್ತಿ ಜೀವನವೇ ಅಂತ್ಯಗೊಂಡಿತ್ತು ಎಂದು ಭಾವಿಸಿದ್ದೆ, ಕಳೆದ 18 ತಿಂಗಳಿಂದ ಸತತವಾಗಿ ಶ್ರಮಹಾಕಿದ್ದೇನೆ. ಇದರ ಫಲ​ ಇಂದು ದಕ್ಕಿದೆ’ ಎಂದು ಲೌರೆಲ್ ಹುಬಾರ್ಡ್ ತಿಳಿಸಿದ್ದಾರೆ.

    ಇದನ್ನೂ ಓದಿ:ರೋಹಿತ್ ಶರ್ಮ ಸ್ಪೈ ಮಾಡುತ್ತಿದ್ದಾರೆ ಎಂದ ಪತ್ನಿ ರಿತಿಜಾ

    ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಲೌರೆಲ್ ಹುಬಾರ್ಡ್, 300 ಕೆಜಿ (661 ಪೌಂಡ್ಸ್) ತೂಕ ಎತ್ತಿದ್ದರು. ತೃತೀಯ ಲಿಂಗಿಗಳು ಒಲಿಂಪಿಕ್ಸ್‌ಗೆ ಸ್ಪರ್ಧಿಸಲು ಬೇಕಾದ ಅರ್ಹತೆ ಹಾಗೂ ಮಾನದಂಡಗಳನ್ನು 8 ವರ್ಷಗಳ ಹಿಂದೆಯೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಯಮದಂತೆ ಹುಬಾರ್ಡ್ ಪೂರೈಸಿದ್ದರು.

    ಡಬ್ಲ್ಯುಟಿಸಿ ಫೈನಲ್‌ಗೆ ಬೆಂಬಿಡದ ಮಳೆ, 4ನೇ ದಿನದಾಟವೂ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts