More

    ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಬಿಸಿಸಿಐ ಭರ್ಜರಿ ಕೊಡುಗೆ

    ನವದೆಹಲಿ: ಮುಂಬರುವ ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಗಾಗಿ ಭಾರತದ ಕ್ರೀಡಾಪಟುಗಳಿಗೆ ಬಿಸಿಸಿಐ 10 ಕೋಟಿ ರೂಪಾಯಿ ಧನಸಹಾಯ ಘೋಷಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಒಳಗೊಂಡಂತೆ ನಡೆದ ತುರ್ತು ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ‘ಭಾರತದ ಒಲಿಂಪಿಕ್ ತಂಡಕ್ಕೆ 10 ಕೋಟಿ ರೂ. ನೀಡಲು ಅಪೆಕ್ಸ್ ಕೌನ್ಸಿಲ್ ತೀರ್ಮಾನಿಸಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಬಿಸಿಸಿಐ ಶಕ್ತಿಗೆ ಮಣಿದ ವಿಂಡೀಸ್, ಐಪಿಎಲ್‌ಗೆ ದಾರಿ ಬಿಟ್ಟುಕೊಟ್ಟ ಸಿಪಿಎಲ್

    ‘ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಕ್ರೀಡಾಪಟುಗಳಿಗೆ ಇದು ಸಹಕಾರಿಯಾಗಲಿದೆ. ಕೇಂದ್ರ ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಕ್ರೀಡಾಪಟುಗಳಿಗೆ ಹಣಪಾವತಿ ಕುರಿತು ತೀರ್ಮಾನಿಸಲಿದೆ’ ಎಂದು ಬಿಸಿಸಿಐ ತಿಳಿಸಿದೆ. ಜುಲೈ 23ರಿಂದ ಟೋಕಿಯೊ ಒಲಿಂಪಿಕ್ ನಡೆಯಲಿದೆ.

    ಇದನ್ನೂ ಓದಿ: VIDEO| 14 ಸೆಕೆಂಡ್‌ಗಳಲ್ಲಿ 92 ಮೀಟರ್ ಓಡಿ ಗೋಲು ಸಿಡಿಸಿದ ರೊನಾಲ್ಡೊ!

    ಇದಕ್ಕೂ ಮೊದಲು ಭಾರತದ ಒಲಿಂಪಿಕ್ ತಂಡಕ್ಕೆ ಚೀನಾ ಮೂಲಕ ಲೀ ನಿಂಗ್ ಸಂಸ್ಥೆಯೂ ಕಿಟ್ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಆದರೆ, ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಐಒಎ ಲೀ ನಿಂಗ್ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts