More

    ಸಚಿವರಿಗೆ ಮುಳುವಾಯ್ತು ಸಹೋದ್ಯೋಗಿಯೊಂದಿಗೆ ಸಲ್ಲಾಪ; ಸಂಪುಟ ಸದಸ್ಯನನ್ನೇ ಉಚ್ಚಾಟಿಸಿದ ಪ್ರಧಾನಿ

    ನವದೆಹಲಿ​: ಭಾರತದಲ್ಲಾಗಿದ್ದರೆ ಇದು ಅದ್ಯಾವ ತಿರುವ ತೆಗೆದುಕೊಳ್ಳುತ್ತಿತ್ತೋ? ಏನೋ? ಆದರೆ, ನ್ಯೂಜಿಲೆಂಡ್​ನಲ್ಲಿ ಇದೊಂದು ಅಕ್ಷರಶಃ ಕ್ಷಮಿಸಲಾಗದ ಪ್ರಮಾದವಾಗಿದೆ. ಸಾರ್ವಜನಿಕ ಹುದ್ದೆಯಲ್ಲಿ ಇರುವವರಿಂದ ನಿರೀಕ್ಷಿಸದ ನಡವಳಿಕೆಯಾಗಿದೆ. ಹೀಗಾಗಿ ಸಚಿವಗಿರಿಯನ್ನೇ ಕಳೆದುಕೊಳ್ಳವಂತಾಗಿದೆ.

    ನ್ಯೂಜಿಲೆಂಡ್​ ಪ್ರಧಾನಿ ಜೆಸಿಂದಾ ಆರ್ಡ್​ರ್ನ್​ ಬುಧವಾರ ತನ್ನ ಸಂಪುಟದ ಹಿರಿಯ ಸಹೋದ್ಯೋಗಿಯನ್ನೇ ಮಂತ್ರಿಗಿರಿಯಿಂದ ಕೆಳಗಿಳಿಸಿದ್ದಾರೆ. ಸರ್ಕಾರದ ಮಾಜಿ ಉದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದ ಆರೋಪದಲ್ಲಿ ಅವರನ್ನು ಕೆಳಗಿಳಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

    ಇದನ್ನೂ ಓದಿ; ದೆಹಲಿ ಮಾಂಸದಡ್ಡೆಯ ಕರಾಳತೆ; 12ರ ಬಾಲೆಗೆ ಡ್ರಗ್ಸ್​ ನೀಡಿ ವೇಶ್ಯಾವಾಟಿಕೆ; 6 ವರ್ಷಗಳ ನರಕದ ಬಳಿಕ ಸಿಕ್ತು ನ್ಯಾಯ

    ಇಯಾನ್​ ಲೀಸ್​ ಗ್ಯಾಲ್ಲೋವೇ ನ್ಯೂಜಿಲೆಂಡ್​ನ ವಲಸೆ ವ್ಯವಹಾರಗಳ ಸಚಿವರಾಗಿದ್ದಾರೆ. ಅಧೀನದ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಂದಿಗೆ ಇಯಾನ್​ ಸಂಬಂಧ ಬೆಳೆಸಿದ್ದರು.

    ಸಿಬ್ಬಂದಿಯ ಮೇಲ್ವಿಚಾರಣೆ ಹುದ್ದೆಯಲ್ಲಿದ್ದುಕೊಂಡು ಅವರು ತೋರಿದ ನಡವಳಿಕೆ ಸಚಿವಗಿರಿಗೆ ಒಪ್ಪುವಂಥದ್ದಲ್ಲ. ಜತೆಗೆ, ಕಳೆದ ಒಂದು ವರ್ಷದಿಂದ ಉತ್ತಮ ನಿರ್ಧಾರ ಕೈಗೊಳ್ಳುವಲ್ಲಿ ಎಡವಿದ್ದಾರೆ. ಜತೆಗೆ, ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ಲಸಿಕೆ ಎಲ್ಲೇ ತಯಾರಾಗಲಿ ಖರೀದಿಸುತ್ತಿದೆ ಅಮೆರಿಕ…! 10 ಕೋಟಿ ಡೋಸ್​ಗೆ 14,625 ಕೋಟಿ ರೂ. ಒಪ್ಪಂದ

    ನ್ಯೂಜಿಲೆಂಡ್​ನಲ್ಲಿ ಮುಂಬರುವ ಸೆಪ್ಟಂಬರ್​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಅಂಥದ್ದರಲ್ಲಿ ವಿಪಕ್ಷಗಳು ನೀಡಿದ ದೂರಿನ ಆಧಾರದಲ್ಲಿ ಪ್ರಧಾನಿ ಇಂಥ ನಿರ್ಧಾರ ಕೈಗೊಂಡಿರುವುದು ಅಚ್ಚರಿಯನ್ನೂ ಮೂಡಿಸಿದೆ.

    ವಿಶ್ವಸಂಸ್ಥೆಯಿಂದಲೂ ಮೆಚ್ಚುಗೆ ಪಡೆದ ಕೇರಳದಲ್ಲೇನಾಗ್ತಿದೆ? ಬೆಚ್ಚಿ ಬಿದ್ದಿದ್ದೇಕೆ ದೇವರ ನಾಡು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts