More

    ನೂತನ ತಾಪಂ ಕಟ್ಟಡಕ್ಕೆ ಭೂಮಿ ಪೂಜೆ

    ಕುರುಗೋಡು: ತಾಲೂಕಿನಲ್ಲಿ ತಾಪಂ ಕಚೇರಿಗೆ ಸರಿಯಾದ ಕೊಠಡಿ ಇಲ್ಲದೆ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಾಗಿತ್ತು, ನೂತನ ಕಟ್ಟಡ ಮಂಜೂರಾಗಿ ಭೂಮಿ ಪೂಜೆಗೆ ಚಾಲನೆ ದೊರಕಿರುವುದು ಶ್ಲಾಘನೀಯ ಎಂದು ಶಾಸಕ ಜೆ. ಎನ್. ಗಣೇಶ್ ಹೇಳಿದರು.

    ಇದನ್ನೂ ಓದಿ: ಸಂಕ್ರಾಂತಿಗೆ ನೂತನ ಅಧ್ಯಕ್ಷ

    ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಮಿನಿ ವಿಧಾನಸೌಧ ಕಟ್ಟಡದ ಎದುರುಗಡೆ ಜಿಪಂ ಅನುದಾನದಡಿ ಸುಮಾರು 80ಲಕ್ಷ ವೆಚ್ಚದಲ್ಲಿ ಮಂಜೂರಾದ ನೂತನ ತಾಪಂ ಕಟ್ಟಡದ ಭೂಮಿ ಪೂಜೆಗೆ ಚಾಲನೆ ನೀಡಿ ಮಾತನಾಡಿದರು.

    ತಾಲೂಕಿನಲ್ಲಿ ಸರಿಯಾಗಿ ಇಲಾಖೆಗಳು ಇಲ್ಲದೆ ದೂರದ ಜಿಲ್ಲೆಗಳಿಗೆ ಜನರು ಅಲೆದಾಡಬೇಕಾಗಿತ್ತು, ಈಗ ಹಂತ ಹಂತವಾಗಿ ಇಲಾಖೆಗಳು ನಿರ್ಮಾಣಗೊಳ್ಳುತ್ತಿದ್ದು, ಅಧಿಕಾರಿಗಳಿಗೆ ಹಾಗೂ ಜನರಿಗೆ ಪ್ರಯೋಜನೆ ಆಗಲಿದೆ ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು.

    ಪ್ರಸ್ತುತ ತಾಪಂ ಕಟ್ಟಡದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ಮಾಡುವುದು ಕಷ್ಟಕರವಾಗಿತ್ತು, ಇದನ್ನು ಪರಿಗಣಿಸಿ ಹೊಸ ಕಟ್ಟಡಕ್ಕೆ ಭೂಮಿ ಹುಡುಕಿ ಅನುಮೋದನೆ ತರುವಲ್ಲಿ ಬಹಳಷ್ಟು ಶ್ರಮಪಟ್ಟಿದ್ದೇವೆ, ಇನ್ಮುಂದೆ ಅಧಿಕಾರಿಗಳು ಸುಗಮವಾಗಿ ಕರ್ತವ್ಯ ನಿರ್ವಹಿಸಿ ಜನಪರ ಕೆಲಸ ಮಾಡಬೇಕು ಎಂದರು.

    ಈಗಾಗಲೇ ನೂತನ ತಾಪಂಗೆ ಭೂಮಿ ಖರೀದಿ ಮಾಡಿದ್ದು, ಪಹಣಿಯಲ್ಲಿ ತಾಪಂ ಎಂದು ಹೆಸರು ಸೇರ್ಪಡೆ ಮಾಡಲಾಗಿದೆ ಗುತ್ತಿಗೆದಾರರು ಆದಷ್ಟು ಬೇಗಾ ಕಾಮಗಾರಿ ಕೈಗೆತ್ತುಕೊಂಡು ಅವಧಿ ಒಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

    ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ತಾಪಂ ಇಒಕೆ.ನಿರ್ಮಲಾ, ಬಿಇಒ ಸಿದ್ದಲಿಂಗಮೂರ್ತಿ, ತಾಪಂ ವ್ಯವಸ್ಥಾಪಕ ಅನಿಲ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts