More

    ಕರೋನಾ ಎಫೆಕ್ಟ್​: ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೊಸ ನಿಯಮಗಳು..!

    ದೇವನಹಳ್ಳಿ: ರಾಜ್ಯದಲ್ಲಿ ಕರೋನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದೆಡೆ ನಿರಂತರವಾಗಿ ಹೊಸ ನಿಯಮಗಳನ್ನು ಜಾರಿಗೆ ತಂದು ಜನರಲ್ಲಿ ಸರ್ಕಾರ ಅರಿವು ಮೂಡಿಸುತ್ತಿದೆ. ಇನ್ನೊಂದೆಡೆ ರಾಜ್ಯದ ಅನೇಕ ಭಾಗಗಳಲ್ಲಿ ಮಾಸ್ಕ್​ ಹಾಕದೇ ಜನರು ಓಡಾಡುತ್ತಿದ್ದಾರೆ. ಇದರಿಂದಾಗಿಯೂ ಕರೋನಾ ಭಯ ಜನರಲ್ಲಿ ಹೆಚ್ಚಾಗಿದೆ.

    ಈ ಎಲ್ಲಾ ಘಟನೆಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಇದೀಗ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯಲಿರುವ ಪ್ರಯಾಣಿಕರಿಗೆ ಹೊಸ ನಿಯಮಗಳು ಅನ್ವಯವಾಗಲಿವೆ.

    ಕೋವಿಡ್ ಪಾಸಿಟಿವ್ ಟೆಸ್ಟ್ ವರದಿ ಬರುವವರೆಗೂ ಕಾಯುವ ಅಗತ್ಯವೇ ಇಲ್ಲ. ಇನ್ನು ಕರೋನ ಪಾಸಿಟಿವ್​ಗಾಗಿ ಕಾಯದೇ ಪ್ರಯಾಣಿಕರಲ್ಲಿ ರೋಗ ಲಕ್ಷಣಗಳು ಕಂಡುಬಂದರೂ ಸಹ ಅವರನ್ನು ಆಸ್ಪತ್ರೆಗೆ ಕಳಿಸಲಾಗುತ್ತದೆ. ಇನ್ನು ವಿದೇಶದಿಂದ ಬರುವವರಿಗೆ ರೋಗ ಲಕ್ಷಣಗಳಿದ್ದಲ್ಲಿ, ಅವರನ್ನೂ ಆಸ್ಪತ್ರೆಗೆ ರವಾನೆ ಮಾಡಲಾಗುವುದು,

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅನ್ವಯ ಆಗಿರುವ ಹೊಸ ನಿಯಮಗಳ ಪ್ರಕಾರ ಜ್ವರ, ಕೆಮ್ಮು, ನೆಗಡಿ ಇರೋ ಪ್ರಯಾಣಿಕರನ್ನ ಆಸ್ಪತ್ರೆ ಗೆ ದಾಖಲಿಸಲಾಗುವುದು. ಇಂದಿನಿಂದ ಹೊಸ‌ ನಿಯಮ‌ ಜಾರಿ ಮಾಡಲಾಗಿದೆ. ಕರೋನಾ ಆತಂಕದ ಹಿನ್ನೆಲೆಯಲ್ಲಿ ಕೇಂಪೇಗೌಡ ಏರ್ಪೋರ್ಟ್‌ನಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗಿದೆ.

    ‘ಇಂದಿನಿಂದ ಎರಡು ತಂಡಗಳ ಬದಲು ೪ ತಂಡ ಕಾರ್ಯನಿರ್ವಹಣೆ ಮಾಡಲಿದ್ದು 8 ಮಂದಿ ಆರೋಗ್ಯ ನೀರಿಕ್ಷಕರನ್ನೂ ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ. ರೋಗ ಲಕ್ಷಣ ಇರುವ ಪ್ರಯಾಣಿಕರಿಗೆ ಆಸ್ಪತ್ರೆಗೆ ರವಾನೆ ಮಾಡಲು ಏರ್ಪೋರ್ಟ್​ನಲ್ಲಿ ಎರಡು ಅಂಬ್ಯುಲೆನ್ಸ್ ಕೂಡ ಮೀಸಲು ಇಡಲಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್ ಲತಾ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts