More

    20 ವರ್ಷದ ಯುವತಿಯನ್ನು ಸ್ಕ್ರೂಡ್ರೈವರ್​ನಿಂದ 51 ಬಾರಿ ಚುಚ್ಚಿ ಕೊಂದ ಕಿರಾತಕ..!

    ಛತ್ತೀಸ್​ಗಢ: ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ 20 ವರ್ಷದ ಮಹಿಳೆಯನ್ನು 51 ಬಾರಿ ಸ್ಕ್ರೂಡ್ರೈವರ್‌ನಿಂದ ಇರಿದು ಕೊಂದಿದ್ದಾನೆ. ಯಾರಿಗೂ ಕಿರುಚಾಟದ ಸದ್ದು ಕೇಳಿಸಬಾರದು ಎಂದು ಬಾಯಿಯನ್ನು ದಿಂಬಿನಿಂದ ಮುಚ್ಚಿದ್ದಾನೆ ಈ ಕಿರಾತಕ!

    ಡಿಸೆಂಬರ್ 24 ರಂದು ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಅಲ್ಲಿಗೆ ಬಂದಾಗ ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇದ್ದಳು. ಆಕೆಯ ಕಿರುಚಾಡದಂತೆ ಆಕೆಯ ಬಾಯಿಯನ್ನು ದಿಂಬಿನಿಂದ ಮುಚ್ಚಿ ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದಿದ್ದಾನೆ.

    ನಂತರ ಮನೆಗೆ ಬಂದಾಗ ಸಂತ್ರಸ್ತೆಯ ಸಹೋದರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹೋದರಿಯನ್ನು ಕಂಡಿದ್ದಾರೆ. ಜಶ್ಪುರ್ ಜಿಲ್ಲೆಯ ಆರೋಪಿ, ಮೂರು ವರ್ಷಗಳ ಹಿಂದೆ ಸಂತ್ರಸ್ತೆಯೊಂದಿಗೆ ಪ್ರಯಾಣಿಕ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಆಗ ಮೃತ ಯುವತಿ ಅದರಲ್ಲಿ ಪ್ರಯಾಣಿಸುತ್ತಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಕೋರ್ಬಾ ಜಿಲ್ಲೆ) ವಿಶ್ವದೀಪಕ್ ತ್ರಿಪಾಠಿ ತಿಳಿಸಿದ್ದಾರೆ.

    ಘಟನೆಯ ಬಗ್ಗೆ ತನಿಖೆ ಇನ್ನೂ ನಡೆಯುತ್ತಿದ್ದು ಕೊಲೆಯ ಹಿಂದಿನ ಉದ್ದೇಶ ಏನು ಎಂಬಬುವುದು ಇನ್ನಷ್ಟೇ ತಿಳಿದು ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts