More

    ಹೊಸ ಸಂಸತ್​ ಭವನದ ಭೂಮಿ ಪೂಜೆಗೆ ಮುಹೂರ್ತ ಫಿಕ್ಸ್​; ಮುಂದಿನ ವರ್ಷದ ಸ್ವಾತಂತ್ರ್ಯೋವಕ್ಕೆ ಸಿದ್ಧ

    ನವದೆಹಲಿ: ಹೊಸದಾಗಿ ನಿರ್ಮಾಣವಾಗಲಿರುವ ಸಂಸತ್​ ಭವನಕ್ಕೆ ಭೂಮಿ ಪೂಜೆ ನಡೆಸುವ ದಿನವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಡಿಸೆಂಬರ್​ 10ರಂದು ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಡೆಸಲಿದ್ದು, 2021ರ ಆಗಸ್ಟ್​ 15ರ ವೇಳೆಗೆ ನೂತನ ಸಂಸತ್​ ಭವನ ಸಿದ್ಧವಿರಲಿದೆ ಎಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಮೀನು ಹಿಡಿಯೋಣ ಬಾರೇ ಎಂದ; ಬರಲೊಪ್ಪದ ಪತ್ನಿಗೆ ಪತಿ ಮಾಡಿದ್ದೇನೆಂದು ತಿಳಿದರೆ ಬೆಚ್ಚಿ ಬೀಳುತ್ತೀರ!

    ಭಾರತದ 75ನೇ ಸ್ವಾತಂತ್ರೋತ್ಸವದ ಸಮಯದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಅಧಿವೇಶನವನ್ನು ನಡೆಸಲಾಗುವುದು. ಈ ಅಧಿವೇಶನ ಹೊಸ ಸಂಸತ್​ ಭವನದಲ್ಲಿಯೇ ನಡೆಯಲಿದೆ. ಡಿಸೆಂಬರ್​ 10ರಂದು ಮಧ್ಯಾಹ್ನ 1 ಗಂಟೆಗೆ ಮೊದಲನೇ ಕಲ್ಲನ್ನಿಟ್ಟು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಕೂಲಿ ಕಾರ್ಮಿಕನಿಂದ ಕೋಟ್ಯಂತರ ರೂಪಾಯಿ ಜಿಎಸ್​ಟಿ ವಂಚನೆ! ಪ್ರಕರಣದ ಹಿಂದಿದೆ ದೊಡ್ಡ ಕಥೆ

    ಹೊಸ ಸಂಸತ್​ ಭವನವು ಈಗಿರುವ ಸಂಸತ್​ ಭವನಕ್ಕಿಂತ 17 ಸಾವಿರ ಚದರ ಮೀಟರ್​ ದೊಡ್ಡದಾಗಿರಲಿದೆ. ಒಟ್ಟು 64,500 ಚದರ ಮೀಟರ್​ನಲ್ಲಿ ಸಂಸತ್​ ನಿರ್ಮಿಸಲಾಗುವುದು. ಲೋಕಸಭೆಯಲ್ಲಿ 888 ಸದಸ್ಯರಿಗೆ ಸೀಟುಗಳನ್ನು ಅಳವಡಿಸಲಾಗುವುದು. ರಾಜ್ಯಸಭೆಯಲ್ಲಿ 326 ಸೀಟುಗಳಿರಲಿವೆ. ಲೋಕಸಭೆಯೊಂದರಲ್ಲೇ 1224 ಜನರಿಗೆ ಕೂರುವ ಅವಕಾಶವಿರಲಿದೆ. ಇದು ಭೂಕಂಪ ನಿರೋಧಕ ಕಟ್ಟಡವಾಗಿರಲಿದೆ. 2000 ಕಾರ್ಮಿಕರು ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಒಟ್ಟು 971 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಸತ್​ ಭವನ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ಆತ್ಮನಿರ್ಭರ ಭಾರತದ ದೇವಸ್ಥಾನ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts