More

    2022ರ ಅಕ್ಟೋಬರ್​ಗೆ ಹೊಸ ಸಂಸತ್ ಭವನ

    ನವದೆಹಲಿ: ಹೊಸ ಸಂಸತ್ ಭವನದ ಕಾಮಗಾರಿ ಈ ವರ್ಷದ ಡಿಸೆಂಬರ್​ನಲ್ಲಿ ಆರಂಭವಾಗಲಿದ್ದು, 2022ರ ಅಕ್ಟೋಬರ್ ವೇಳೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೊಸ ಭವನದಲ್ಲಿ ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ ಇರಲಿದ್ದು, ಕಾಗದ ರಹಿತ ಸಂವಹನಕ್ಕಾಗಿ ಡಿಜಿಟಲ್ ಮೂಲಸೌಕರ್ಯ ಒಳಗೊಂಡಿರಲಿದೆ. ವಿರಾಮದ ಕೈಸಾಲೆ (ಲೌಂಜ್) ಕಾನ್​ಸ್ಟಿಟ್ಯೂಷನ್ ಹಾಲ್, ಗ್ರಂಥಾಲಯ, ಸಂಸದೀಯ ಸಮಿತಿ ಕೋಣೆಗಳು, ಭೋಜನದ ಹಾಲ್ ಇರಲಿದೆ.

    ವಾಯು ಮತ್ತು ಶಬ್ದ ಮಾಲಿನ್ಯ ತಡೆಯುವಂತಹ ತಂತ್ರಜ್ಞಾನ ಬಳಸಿ ಈ ಕಟ್ಟಡ ನಿರ್ವಣವಾಗಲಿದ್ದು, ಭಾರತದ ಪ್ರಜಾತಂತ್ರ ಪರಂಪರೆಯ ದ್ಯೋತಕವಾದ ಕಾನ್​ಸ್ಟಿಟ್ಯೂಷನ್ ಹಾಲ್ ವಿಸ್ತಾರವಾಗಿರಲಿದೆ. ಸಂವಿಧಾನದ ಮೂಲಪ್ರತಿಯ ಡಿಜಿಟಲ್​ರೂಪವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಹಾಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರಲಿದೆ.

    ಹೊಸ ಕಟ್ಟಡದಲ್ಲಿ ಉಭಯ ಸದನಗಳ ಸಭಾಂಗಣ ಇರಲಿದೆ. ಭವಿಷ್ಯದ ದೃಷ್ಟಿಯಿಂದ 888 ಸದಸ್ಯರಿಗೆ ಆಸನ ಕಲ್ಪಿಸುವಷ್ಟು ವಿಶಾಲತೆಯನ್ನು ಲೋಕಸಭೆ ಹೊಂದಿರಲಿದೆ. ರಾಜ್ಯಸಭೆ 384 ಸದಸ್ಯರು ಆಸೀನರಾಗುವಷ್ಟು ದೊಡ್ಡದಾಗಿರಲಿದೆ. ಹಾಲಿ ಲೋಕಸಭೆಯಲ್ಲಿ 543 ಸದಸ್ಯರಿದ್ದು, ರಾಜ್ಯಸಭೆ 245 ಸದಸ್ಯ ಬಲ ಇದೆ.

    ಹೊಸ ಕಟ್ಟಡ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ಪರಿಶೀಲನಾ ಸಭೆ ನಡೆಸಿದ್ದು, ಕಾಮಗಾರಿ ಗುಣಮಟ್ಟದ್ದಾಗಿರಬೇಕು ಮತ್ತು ಕಾಲಮಿತಿಯಲ್ಲಿ ಮುಗಿಯಬೇಕು ಎಂದು ಸೂಚಿಸಿದ್ದಾರೆ. ಡಿಸೆಂಬರ್​ನಲ್ಲಿ ಶಿಲಾನ್ಯಾಸ ನಡೆಸಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಆದರೆ, ದಿನಾಂಕ ನಿಗದಿಯಾಗಿಲ್ಲ. ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಇನ್ನಿತರ ಗಣ್ಯರನ್ನು ಭೂಮಿಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ.

    93 ವರ್ಷದ ಹಳೇ ಭವನ

    ಈಗಿರುವ ಸಂಸತ್ ಭವನವು (ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್) ಬ್ರಿಟಿಷರ ಕಾಲದಲ್ಲಿ ನಿರ್ವಣವಾಗಿದೆ. ಈ ಕಟ್ಟಡದ ವಿನ್ಯಾಸವನ್ನು ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ಮಾಡಿದ್ದು, 1921ರಲ್ಲಿ ಕಾಮಗಾರಿ ಆರಂಭವಾಗಿ 1927ಕ್ಕೆ ಮುಗಿಯಿತು. ಇದಕ್ಕೆ -ಠಿ; 83 ಲಕ್ಷ ವೆಚ್ಚವಾಗಿತ್ತು. 1927ರ ಜನವರಿ 18ರಂದು ಈ ಕಟ್ಟಡವನ್ನು ಭಾರತದ ವೈಸ್​ರಾಯ್ ಲಾರ್ಡ್ ಇರ್ವಿನ್ ಉದ್ಘಾಟಿಸಿದರು. ಮರುದಿನವೇ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಮೊದಲ ಸಭೆ ನಡೆಯಿತು. 1956ರಲ್ಲಿ ಇನ್ನೆರಡು ಅಂತಸ್ತನ್ನು ನಿರ್ವಿುಸಲಾಯಿತು.

    ಟಾಟಾ ಪ್ರಾಜೆಕ್ಟ್ ಗುತ್ತಿಗೆ

    ಹಾಲಿ ಸಂಸತ್ ಭವನದ ಸಮೀಪದಲ್ಲೇ ಹೊಸ ಸಂಸತ್ ಭವನ ನಿರ್ವಣವಾಗಲಿದ್ದು, ಈ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್  ಲಿಮಿಟೆಡ್ ಪಡೆದುಕೊಂಡಿದೆ.  861.90 ಕೋಟಿ ರೂಪಾಯಿ ವೆಚ್ಚದ ಟೆಂಡರ್ ಇದಾಗಿದೆ. ಈ ಕಾಮಗಾರಿಯು 75ನೇ ಸ್ವಾತಂತ್ರೋತ್ಸವದ (ವಜ್ರ ಮಹೋತ್ಸವ) ಅಂಗವಾಗಿ ಕೈಗೊಂಡಿರುವ ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯ ಭಾಗವಾಗಿದೆ. 3 ಕಿ.ಮೀ. ಉದ್ದದ ರಾಜಪಥ ಮತ್ತು ಅದರ ಇಕ್ಕಲೆಗಳ ಅಭಿವೃದ್ಧಿಯನ್ನು ಹೊಂದಿದ ಸೆಂಟ್ರಲ್ ವಿಸ್ಟಾ ಯೋಜನೆಯನ್ನು 2019ರಲ್ಲಿ ಸರ್ಕಾರ ಘೋಷಿಸಿತು.

    ಕಾಮಗಾರಿಯ ಮೇಲುಸ್ತುವಾರಿಗೆ ಸಮಿತಿ ರಚಿಸಲಾಗುವುದು. ಇದರಲ್ಲಿ ಲೋಕಸಭಾ ಸಚಿವಾಲಯ, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ, ಕೇಂದ್ರ ಲೋಕೋಪಯೋಗಿ ಇಲಾಖೆ, ಎನ್​ಡಿಎಂಸಿ ಹಾಗೂ ಯೋಜನೆಯ ವಿನ್ಯಾಸಕಾರರು ಇರಲಿದ್ದಾರೆ.
    | ಓಂ ಬಿರ್ಲಾ, ಲೋಕಸಭಾ ಸ್ಪೀಕರ್

    ಅಂತರ್ಜಲ ಪೋಲು ತಡೆಯಲು ಸರಿಯಾದ ಕ್ರಮವೇಕೆ ತಗೊಂಡಿಲ್ಲ: ಕೇಂದ್ರವನ್ನು ತರಾಟೆಗೆ ತಗೊಂಡ ಎನ್​ಜಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts