More

    ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಾರ್ಯಾಲಯ

    ಕಾರ್ಕಳ: ಶಿಕ್ಷಣ ಇಲಾಖೆಯ ಮೂರು ವಿಭಾಗಗಳಲ್ಲಿ 1 ಲಕ್ಷ ಕಡತಗಳು ವಿಲೇವಾರಿಗೆ ಬಾಕಿ ಇವೆ. ಅವುಗಳ ಶೀಘ್ರ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.  ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಾರ್ಯಾಲಯ ವತಿಯಿಂದ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಾರ್ಯಾಲಯ ಅಕ್ಷರ ಭವನವನ್ನು ಶುಕ್ರವಾರ ಉದ್ಘಾಟಿಸಿ, ಎಸ್‌ವಿಟಿ ಕಾಲೇಜಿನ ಸಭಾಭವನದಲ್ಲಿ ಆಯೊಜಿಸಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣಸ್ನೇಹಿ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರ ಚಿಂತಿಸಿದೆ. ಸಹಾಯವಾಣಿ ಮೂಲಕ ಶಿಕ್ಷಕರ ಸಮಸ್ಯೆಗಳ ಇತ್ಯರ್ಥಕ್ಕೆ ಸ್ಪಂದನೆ ನೀಡಲಾಗುವುದು. ಶಿಕ್ಷಕರು ಇಲಾಖಾ ಕಚೇರಿಯನ್ನು ಅಲೆದಾಡುವಂತೆ ಮಾಡುವುದನ್ನು ಎಂದಿಗೂ ಸಹಿಸಲಾಗದು. ಶಿಕ್ಷಕರ ಗೋಳಿಗೆ ತಕ್ಷಣ ಸ್ಪಂದಿಸುವಂತಾಗಬೇಕು ಎಂದು ಸಚಿವರು ಇಂಗಿತ ವ್ಯಕ್ತಪಡಿಸಿದರು. ಇಷ್ಟವಿಲ್ಲದ ವರ್ಗಾವಣೆಯಿಂದ ಕಷ್ಟದಿಂದ ಪಾಠ ಮಾಡುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂಬುವುದನ್ನು ಮನಗಂಡಿರುವ ಇಲಾಖೆಯು ಹೊಸ ನೀತಿಯೊಂದನ್ನು ಜಾರಿಗೆ ತರಲು ಮುಂದಾಗಿದೆ ಎಂದರು. ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆಯಿಂದ ಮಿಷನ್ 100, ಉತ್ಕ್ರಾಂತಿ, ಕುಟೀರ ಶಿಕ್ಷಣ ಮೊದಲಾದ ಅದ್ಭುತ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಶಾಸಕ ಸುನೀಲ್‌ಕುಮಾರ್ ಕನಸು ನನಸಾಗಲಿ ಎಂದು ಹಾರೈಸಿದರು.
    ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಮಾತನಾಡಿ, ಸ್ವಚ್ಛ ಕಾರ್ಕಳ ಮತ್ತು ಸ್ವರ್ಣ ಕಾರ್ಕಳ ಕಲ್ಪನೆಯಡಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆಯಿಂದ ಉತ್ತಮ ಸ್ಪಂದನೆ ದೊರೆತಿದೆ. ಕುಟೀರ ಮಾದರಿ ಶಿಕ್ಷಣ, ಗುಬ್ಬಚ್ಚಿ ಸ್ಪೋಕನ್ ಇಂಗ್ಲಿಷ್, ಮಿಷನ್-100 ಕಾರ್ಯಕ್ರಮವನ್ನು ಕಾರ್ಕಳದಲ್ಲಿ ರೂಪಿಸಿದ್ದೇವೆ ಎಂದರು.
    ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ, ತಾಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಜಿಪಂ ಸದಸ್ಯರಾದ ಉದಯ ಎಸ್.ಕೋಟ್ಯಾನ್, ಜ್ಯೋತಿ ಪೂಜಾರಿ, ರೇಷ್ಮಾ ಶೆಟ್ಟಿ, ತಹಸೀಲ್ದಾರ್ ಪುರಂದರ ಹೆಗ್ಡೆ, ಎಸ್‌ವಿಟಿ ವಿದ್ಯಾಸಂಸ್ಥೆಯ ಸಂಚಾಲಕ ಕೆ.ಪಿ.ಶೆಣೈ, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಯಟ್ ಪ್ರಾಂಶುಪಾಲ ವೇದಮೂರ್ತಿ ಉಪಸ್ಥಿತರಿದ್ದರು.
    ಡಿಡಿಪಿಐ ಶೇಷಶಯನ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಪ್ರಸ್ತಾವಿಸಿದರು. ಸಂತೋಷ್ ಶೆಟ್ಟಿ, ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಶೆಟ್ಟಿ ವಂದಿಸಿದರು.

    ಮುಂದಿನ ಪೀಳಿಗೆಗೆ ಹಿಂದೆ ಸಿಗುತ್ತಿದ್ದಂತಹ ಮೌಲ್ಯಾಧಾರಿತ ಶಿಕ್ಷಣ ಅಗತ್ಯ. ಶುದ್ಧ ಮನಸ್ಸಿನಿಂದ ಶಿಕ್ಷಣ ನೀಡಿದಾಗ ಗುಣಮಟ್ಟ ಶಿಕ್ಷಣ ಸಿಗಲು ಸಾಧ್ಯ. ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಸ್ಪಂದನೆ, ಮಕ್ಕಳಿಗೆ ಜೀವನದ ಪಾಠವನ್ನು ತಿಳಿಯಪಡಿಸುವ ಶಿಕ್ಷಣ ನೀಡಬೇಕಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಮ್ಮ ಸಚಿವರು ಬದ್ಧರಾಗಿದ್ದಾರೆ ಎಂಬ ವಿಶ್ವಾಸವಿದೆ.
    – ಎಸ್.ಎಲ್.ಭೋಜೇಗೌಡ, ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts