More

    ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ಖಾತೆಯ ‘ಪಾಸ್​ವರ್ಡ್​’ ಬಹಿರಂಗ ಪಡಿಸಿದ ಸಾಧಕ ಮಹಿಳೆ ಸ್ನೇಹಾ ಮೋಹನ್​ ದಾಸ್​…!

    ನವದೆಹಲಿ: ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಇಂದು ಏಳು ಮಹಿಳೆಯರಿಗಾಗಿ ಬಿಟ್ಟುಕೊಟ್ಟಿದ್ದಾರೆ.

    ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಿಂದ ನರೇಂದ್ರ ಮೋದಿಯವರು ಲಾಗ್ ಔಟ್​ ಆಗಿದ್ದಾರೆ. ಇವತ್ತು ಇಡೀ ದಿನ ಸಾಧಕ ಮಹಿಳೆಯರು ನನ್ನ ಸೋಷಿಯಲ್ ಮೀಡಿಯಾ ಖಾತೆಗಳನ್ನು ಉಪಯೋಗಿಸಿಕೊಂಡು ತಮ್ಮ ಜೀವನದ ಸಾಧನೆಯ ಪಯಣವನ್ನು ದೇಶದ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿ, ಖಾತೆಗಳಿಂದ ಹೊರಹೋಗಿದ್ದಾರೆ.

    ಅದರಂತೆಯೇ ಮೋದಿಯವರ ಸಾಮಾಜಿಕ ಜಾಲತಾಣಗಳನ್ನು ಮೊದಲಿಗೆ ಬಳಸಿಕೊಂಡಿದ್ದು ಚೆನ್ನೈ ಮೂಲದ ಸ್ನೇಹಾ ಮೋಹನ್​ ದಾಸ್​. ಇವರು ಫುಡ್​ಬ್ಯಾಂಕ್​ ಇಂಡಿಯಾದ ಸಂಸ್ಥಾಪಕಿಯಾಗಿದ್ದು, ಹಸಿವಿನ ವಿರುದ್ಧ ನಿರಂತರವಾಗಿ ಹೋರಾಡುತ್ತಿದ್ದಾರೆ. ತಮ್ಮ ಹೋರಾಟದ ಯಶೋಗಾಥೆಯನ್ನು ಮೋದಿಯವರ ಫೇಸ್​ಬುಕ್, ಟ್ವಿಟರ್​ ಮೂಲಕ ಹಂಚಿಕೊಂಡ ಸ್ನೇಹಾ, ಉಳ್ಳವರು, ಇಲ್ಲದವರಿಗೆ ಕೊಡಿ. ದಿನದಲ್ಲಿ ಒಬ್ಬ ಹಸಿದ ವ್ಯಕ್ತಿಯ ಹೊಟ್ಟೆಯನ್ನಾದರೂ ತುಂಬಿಸಿ ಎಂದು ಜನರನ್ನು ಒತ್ತಾಯಿಸಿದ್ದಾರೆ.

    ಹೀಗಿರುವಾಗ ಸೋಷಿಯಲ್​ ಮೀಡಿಯಾ ಬಳಕೆದಾರನೋರ್ವ ಟ್ವಿಟರ್​ನಲ್ಲಿ ಕಾಮೆಂಟ್ ಮಾಡುವ ಮೂಲಕ, ನಮಗೂ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ಪಾಸ್​ವರ್ಡ್​ ಕೊಡಿ ಎಂದು ಸ್ನೇಹಾ ಅವರನ್ನು ಕೇಳಿದ್ದ. ಆ ಟ್ವೀಟ್​​ಗೆ ಮೋದಿಯವರ ಟ್ವಿಟರ್ ಖಾತೆಯಿಂದ ಬಂದ ಪ್ರತಿಕ್ರಿಯೆಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ. ತುಂಬ ಮಂದಿ ಅದನ್ನು ಇಷ್ಟಪಟ್ಟಿದ್ದಾರೆ.

    ಆತ ಟ್ವೀಟ್ ಮಾಡಿದ ಸಮಯದಲ್ಲಿ ಸ್ನೇಹಾ ಮೋಹನ್​ ದಾಸ್ ಅವರೇ ನರೇಂದ್ರ ಮೋದಿಯವರ ಖಾತೆಯನ್ನು ಬಳಸುತ್ತಿದ್ದರು. ಅವರು ತುಂಬ ಚುರುಕುತನದಿಂದ ಕೊಟ್ಟ ಉತ್ತರ ಇದೀಗ ವೈರಲ್ ಆಗುತ್ತಿದೆ.

    ‘New India…’ Try logging in (ನ್ಯೂ ಇಂಡಿಯಾ ಎಂಬುದು ಪಾಸ್​ವರ್ಡ್​…ಇದನ್ನು ಬಳಸಿ ಲಾಗ್​ ಇನ್​ ಆಗಲು ಪ್ರಯತ್ನಿಸಿ) ಎಂದು ಖಡಕ್​ ಆಗಿ, ಶಾರ್ಪ್​ ಆಗಿ ಉತ್ತರ ನೀಡಿದ್ದಾರೆ. 

    ಹಾಗಂತ ಇದೇನೂ ನಿಜವಾದ ಪಾಸ್​ವರ್ಡ್​ ಅಲ್ಲವೇ ಅಲ್ಲ. ಆ ವ್ಯಕ್ತಿ ಕಾಲೆಳೆದಿದ್ದಕ್ಕೆ, ಸೂಕ್ತ ಉತ್ತರ ಕೊಟ್ಟ ಸ್ನೇಹಾ ಅವರನ್ನು ನೆಟ್ಟಿಗರು ಕಾಮೆಂಟ್ ಮೂಲಕ ಹೊಗಳುತ್ತಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts