More

    ಮನೆಗಾಗಿ ದುಡ್ಡು ಕಟ್ಟಿ ಕಾಯುತ್ತಿರುವ ಜನರಿಗೆ ಆಶಾಕಿರಣ

    ನವದೆಹಲಿ: ಹಣಕಾಸಿನ ತೊಂದರೆಯಿಂದಾಗಿ ಸ್ಥಗಿತಗೊಂಡಿದ್ದ ಗೃಹ ನಿರ್ಮಾಣ ಕಾಮಗಾರಿಗಳಿಗೆ ಸಹಾಯಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿದ್ದ 25 ಸಾವಿರ ಕೋಟಿ ರೂಪಾಯಿ ಹೌಸಿಂಗ್ ಫಂಡ್​ ಇನ್ನೇನು ಫಲ ನೀಡಲಿದೆ. ಮೊದಲನೇ ಕಂತಿನ ಯಶಸ್ಸಿನಲ್ಲಿ ಈ ಫಂಡ್​​ನ ಸಹಾಯದಿಂದ ಅರ್ಧಕ್ಕೇ ನಿಂತ 16 ಹೌಸಿಂಗ್ ಪ್ರಾಜೆಕ್ಟ್​ಗಳು ಬರುವ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, 4,000 ಕ್ಕೂ ಹೆಚ್ಚು ಮನೆಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಸರೆಯಾಗಲಿವೆ.

    2019 ರಲ್ಲಿ ಗೃಹ ನಿರ್ಮಾಣ ಕ್ಷೇತ್ರವು ಎದುರಿಸುತ್ತಿದ್ದ ಆರ್ಥಿಕ ಹೊಡೆತದಿಂದಾಗಿ ದೇಶಾದ್ಯಂತ 456 ಸಾವಿರ ಕೋಟಿ ಮೌಲ್ಯದ ಗೃಹ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೇ ಸ್ಥಗಿತಗೊಂಡಿದ್ದವು. ಒಂದೆಡೆ ಮನೆ ಕೊಳ್ಳುವ ಆಸೆಯಿಂದ ಅವರ ಉಳಿತಾಯವೆಲ್ಲವನ್ನೂ ಠೇವಣಿಯಾಗಿ ಡೆವಲಪರ್​ಗಳಿಗೆ ನೀಡಿದ್ದ ಮನೆ ಖರೀದಿದಾರರು ಕಾಯುತ್ತಿದ್ದರೆ, ಮತ್ತೊಂದೆಡೆ ಯೋಜಿತ ಮಟ್ಟಕ್ಕೆ ಮನೆಗಳು ಬುಕ್​ ಆಗದೆ ಹಣದ ಕೊರತೆ ಎದುರಿಸುತ್ತಿದ್ದ ಡೆವಲಪರ್​ಗಳು ತಮ್ಮ ಹೌಸಿಂಗ್ ಪ್ರಾಜೆಕ್ಟ್​ಗಳನ್ನು ವಿವಿಧ ಹಂತಗಳಲ್ಲಿ ಸ್ಥಗಿತಗೊಳಿಸಿದ್ದರು. ಅದಾಗಲೇ ಸಾಕಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿದ್ದ ಈ ಡೆವಲಪರ್​ಗಳಿಗೆ ಬ್ಯಾಂಕ್​ಗಳು ಕೂಡ ಸಹಾಯ ಮಾಡಲಾಗದೆ ಕೈಚೆಲ್ಲಿದ್ದವು. ಈ ಸಂದಿಗ್ಧ ಸಮಸ್ಯೆಗೆ ಪರಿಹಾರವಾಗಿ, ಪ್ರಧಾನಿ ನರೇಂದ್ರ ಮೋದಿ ನವೆಂಬರ್ 2019 ರಲ್ಲಿ ಸ್ಪೆಷಲ್ ವಿಂಡೋ ಫಾರ್ ಕಂಪ್ಲೀಷನ್ ಆಫ್ ಕನ್​ಸ್ಟ್ರಕ್ಷನ್ ಆಫ್ ಅಫೋರ್ಡಬಲ್ ಅಂಡ್ ಮಿಡ್ ಇನ್​ಕಮ್ ಹೌಸಿಂಗ್ ಪ್ರಾಜೆಕ್ಸ್​ (ಎಸ್​ಡಬ್ಲ್ಯೂಎಎಂಐಹೆಚ್) ಫಂಡ್ ಅನ್ನು ಘೋಷಿಸಿದ್ದರು.

    ಇದನ್ನೂ ಓದಿ: ಐಟಿಐ ಮುಗಿಸಿರುವಿರಾ? ಹಾಗಿದ್ದರೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಟೆಕ್ನಿಷಿಯನ್​ ಹುದ್ದೆಗಳು

    ತ್ವರಿತವಾಗಿ ಕಾರ್ಯ ಆರಂಭಿಸಿದ ಈ ಫಂಡ್​ ಯಶಸ್ಸಿನ ಹಾದಿಯಲ್ಲಿದೆ ಎಂದು ಫಂಡ್​ ನಿರ್ವಾಹಕರಾಗಿರುವ ಎಸ್​ಬಿಐಕ್ಯಾಪ್ ವೆಂಚರ್ಸ್​ ಲಿಮಿಟೆಡ್​ನ ಮುಖ್ಯ ಹೂಡಿಕೆ ಅಧಿಕಾರಿ ಇರ್ಫಾನ್ ಎ.ಕಾಜಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈಗಾಗಲೇ 145 ಬಿಲಿಯನ್ ರೂಪಾಯಿಗಳ ವೆಚ್ಚದಲ್ಲಿ 159 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಒಂದು ಲಕ್ಷ ಮನೆಗಳನ್ನು ಪೂರೈಸುವ ಗುರಿ ಇದೆ. ಇವುಗಳಲ್ಲಿ 47 ಯೋಜನೆಗಳಿಗೆ ಅಂತಿಮ ಅನುಮೋದನೆ ಸಿಕ್ಕಿದ್ದು, ನಿರ್ಮಾಣ ಕಾಮಗಾರಿಗೆ ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಕಾಜಿ ತಿಳಿಸಿದ್ದಾರೆ.

    ಸ್ಥಗಿತಗೊಂಡ ಕಾಮಗಾರಿಗಳಲ್ಲಿ ಶೇ.85 ರಷ್ಟು ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಏಳು ಮಹಾನಗರಗಳಿಗೆ ಸೇರಿವೆ. ಅದರೊಂದಿಗೆ ದೇಶದ ಇತರ ಭಾಗಗಳಲ್ಲಿ ನಿಂತುಹೋಗಿರುವ ಕಾಮಗಾರಿಗಳ ಪರವಾಗಿ ಕೂಡ ಅರ್ಜಿಗಳು ಬರುತ್ತಿವೆ ಎಂದಿರುವ ಕಾಜಿ, ಈ ಫಂಡ್​ನಡಿ 16 ಯೋಜನೆಗಳು ನಿರ್ಮಾಣದ ಅಂತಿಮ ಹಂತ ತಲುಪಿವೆ. ಏಪ್ರಿಲ್ ವೇಳೆಗೆ ಎರಡು ಪ್ರಾಜೆಕ್ಟ್​ಗಳು ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಉಳಿದ 14 ಪ್ರಾಜೆಕ್ಟ್​ಗಳು ಪೂರ್ಣಗೊಳ್ಳಲಿದ್ದು, ಒಟ್ಟು 4,000 ಮನೆಗಳು ಜನರಿಗೆ ಆಸರೆಯಾಗಲಿವೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)

    ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

    ಬಿರಿಯಾನಿ, ಕೇಕ್, ದೋಸೆ, ಚಾಕೋಲೇಟ್ಸ್… ಆಹಾ! 9ರ ಈ ಪೋರ ಏನು ಮಾಡಿದ್ದಾನೆ ನೋಡಿ…

    ಐಪಿಎಲ್ 2021 : ಪಂಜಾಬ್ ಕಿಂಗ್ಸ್ ತಂಡ ಸೇರಿದ ಶಾರುಖ್ ಖಾನ್ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts