More

    ಮಂಕಿಪಾಕ್ಸ್ ತಡೆಗೆ ಹೊಸ ಮಾರ್ಗಸೂಚಿ ಹೊರಡಿಸಿದ ಬಿಬಿಎಂಪಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆತಂಕ ಮೂಡಿಸಿರುವ ಮಂಕಿಪಾಕ್ಸ್ ನಿರ್ವಹಣೆಗೆ ಬಿಬಿಎಂಪಿ ಸೋಮವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದಾದ್ಯಂತ ಮಂಕಿಪಾಕ್ಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಪಬ್ಲಿಕ್ ಹೆಲ್ತ್ ಎಮರ್ಜೆನ್ಸಿ ಎಂದು ಘೋಷಿಸಿದೆ.

    ಹೀಗಾಗಿ ಈ ವೈರಸ್ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ನಗರದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ಸುತ್ತೋಲೆ ಪ್ರಕಟಿಸಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯ ಎಲ್ಲ 8 ವಲಯಗಳಲ್ಲಿ ಅಂದಾಜು 1.3 ಕೋಟಿ ಜನಸಂಖ್ಯೆ ಇದ್ದಾರೆ. ಸಾರ್ವಜನಿಕರ ಸ್ಥಳದಲ್ಲಿ ಸೋಂಕು ಹರಡದಂತೆ ಮುಖ್ಯ ಆರೋಗ್ಯಾಧಿಕಾರಿ, ಜಿಲ್ಲಾ ಕಣ್ಗಾವಲು ಅಧಿಕಾರಿಗಳು ಹಾಗೂ ಎಲ್ಲ ವಲಯದ ಆರೋಗ್ಯ ಅಧಿಕಾರಿಗಳು ನಿಗಾ ವಹಿಸಬೇಕು. ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್, ಬಸ್ ನಿಲ್ದಾಣ ಸೇರಿ ಮುಂತಾದ ಪ್ರದೇಶಗಳಲ್ಲಿ ಸ್ಕ್ರೀನಿಂಗ್ ತಂಡ ನೇಮಿಸಬೇಕು. ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಮಂಕಿಪಾಕ್ಸ್ ಲಕ್ಷಣವಿದ್ದರೆ ತಪಾಸಣೆ ನಡೆಸುವ ಮೂಲಕ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

    ಅಲ್ಲದೆ, ಸೋಂಕು ದೃಢಪಟ್ಟರೆ 21 ದಿನಗಳ ಕಾಲ ಐಸೋಲೇಷನ್ ಮಾಡಬೇಕು. ಪ್ರತಿ ನಿತ್ಯ ರೋಗಿಗಳ ಮೇಲೆ ನಿಗಾ ವಹಿಸಬೇಕು. ಸೋಂಕಿತರ ಸಂಪರ್ಕಕ್ಕೆ ಬಂದಿರುವ ಜನರನ್ನು ಪತ್ತೆ ಹಚ್ಚಬೇಕು, ವರದಿ ಬರುವವರಿಗೂ ಆರೈಕೆ ಮಾಡಬೇಕು, ಚರ್ಮ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆಚ್ಚಿನ ನಿಗಾವಹಿಸಬೇಕು, ಮಂಕಿಪಾಕ್ಸ್ ಬಗ್ಗೆ ಸಾರ್ವಜನಿಕರ ಸ್ಥಳಗಳಲ್ಲಿ ಅರಿವು ಮೂಡಿಸಬೇಕು, ಪ್ರತಿ ನಿತ್ಯ ಕೇಸ್‌ಗಳ ವರದಿ, ಸ್ಯಾಂಪ್‌ಗಳ ರವಾನೆ, ದೃಢಪಟ್ಟ ಕೇಸ್‌ಗಳು, ಐಸೋಲೇಷನ್ ಮಾಡಿರುವುದು ಮತ್ತು ರೋಗಿಗಳ ಚಿಕಿತ್ಸೆ ಕುರಿತು ವರದಿ ರಚಿಸಬೇಕು ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.

    ನಾಳೆ ‘ವಿಜಯಾನಂದ’ ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

    ಪ್ರಿಯಕರನ ಜತೆಗಿದ್ದ ಯುವತಿ ಮೇಲೆ ಅತ್ಯಾಚಾರ; ಕೊಲೆ ಸುದ್ದಿ ಭರಾಟೆಯಲ್ಲಿ ತಡವಾಗಿ ಬೆಳಕಿಗೆ ಬಂದ ರೇಪ್​ ಕೇಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts