More

    ನೂತನ ಜಿಲ್ಲೆ ರಚನೆಗೆ ಸಮಿತಿ ರಚನೆ

    ತಾವರಗೇರಾ: ನೂತನ ಕಿಷ್ಕಿಂಧಾ ಜಿಲ್ಲೆ ರಚನೆಗೆ ಗಂಗಾವತಿಯಲ್ಲಿ ಸಮಿತಿ ರಚಿಸಿದ್ದು, ಈಗಾಗಲೇ ಕಾನೂನು ತಜ್ಞರು ಮತ್ತು ಹಿರಿಯರ ಮಾರ್ಗದರ್ಶನ ಪಡೆದು ಹೆಜ್ಜೆ ಇಡಲಾಗಿದೆ.

    ಇದನ್ನೂ ಓದಿ: ಮಡಿಕೇರಿ ದಸರಾ ಸಮಿತಿ ನಿಯೋಗದಿಂದ ಸಚಿವರ ಭೇಟಿ

    ಆದ್ದರಿಂದ ನೂತನ ಜಿಲ್ಲೆಗೆ ತಾವರಗೇರಾ ಪಟ್ಟಣ ಸೇರ್ಪಡೆ ಮಾಡಿದರೆ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸ್ಥಳೀಯರು ಸಹಕಾರ ನೀಡುವ ಮೂಲಕ ಹೋರಾಟದ ಮುಂದಾಳತ್ವ ಪಡೆಯಬೇಕು ಎಂದು ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಸಂತೋಷ ಕೆಲೋಜಿ ಹೇಳಿದರು.

    ಪಟ್ಟಣದಲ್ಲಿ ಗುರುವಾರ ಸಂಜೆ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು, ತಾವರಗೇರಾ ಪಟ್ಟಣ ತಾಲೂಕು ರಚನೆಗೆ ಎಲ್ಲ ಅರ್ಹತೆ ಹೊಂದಿದೆ.

    ಈಗಾಗಲೇ ಕಂಪ್ಲಿ, ಕಾರಟಗಿ, ಕನಕಗಿರಿ, ಗಂಗಾವತಿ ತಾಲೂಕು ಕಿಷ್ಕಿಂಧಾ ಜಿಲ್ಲೆಗೆ ಸೇರ್ಪಡೆಗೆ ಸಮಾಲೋಚನೆ ಮಾಡಿದ್ದು, ಅದರಂತೆ ತಾವರಗೇರಾವನ್ನು ನೂತನ ಜಿಲ್ಲೆಗೆ ಸೇರ್ಪಡೆಗೆ ಸ್ಥಳೀಯರು ಹೋರಾಟ ಸಮಿತಿ ಮೂಲಕ ಒತ್ತಾಯ ಮಾಡುವ ಕಾರ್ಯ ನಡೆಯಬೇಕಿದೆ.

    ಅದ್ದರಿಂದ ಪ್ರಮುಖರಿಗೆ ಈ ಬಗ್ಗೆ ವಿಚಾರಗಳನ್ನು ತಿಳಿಸಲು ಆಗಮಿಸಲಾಗಿದೆ ಎಂದರು. ತಾಪಂ ಮಾಜಿ ಸದಸ್ಯ ಶೇಖರಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಜೆ ಎಚ್ ಪಾಟೀಲ್ ಮುಖ್ಯಮಂತ್ರಿ ಇದ್ದ ಸಮಯದಲ್ಲಿ ಕೊಪ್ಪಳ ಜಿಲ್ಲೆ ರಚನೆ ಮಾಡಿ ಅನುಕೂಲ ಮಾಡಿದ್ದಾರೆ.

    ಅದರಂತೆ ಕಿಷ್ಕಿಂಧಾ ನೂತನ ಜಿಲ್ಲೆ ರಚನೆ ಮಾಡುವ ಉದ್ದೇಶ ಸರಿ. ಇನ್ನೂ ಒಂದು ವಾರ ಕಾಲಾವಕಾಶ ನೀಡಿದರೆ, ಪಟ್ಟಣದಲ್ಲಿ ಸರಣಿ ಸಭೆ ಮಾಡಿ, ವಿಷಯ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವದು ಎಂದರು.

    ಸಂತೋಷ ಮತ್ತು ಚಂದ್ರಶೇಖರ ವಿಷಯ ಕುರಿತು ಪ್ರಸ್ತಾಪಿಸಿ, ಈಗಾಗಲೇ ಸಿಂಧನೂರು ಜಿಲ್ಲೆ ರಚನೆಗೆ ತಯಾರಿ ನಡೆದಿದ್ದು, ಹೋರಾಟ ಸಮಿತಿ ಮೂಲಕ ತಾವರಗೇರಾ ಪಟ್ಟಣವನ್ನು ನೂತನ ಸಿಂಧನೂರು ಜಿಲ್ಲೆಗೆ ಸೇರ್ಪಡಿಸಲು ಪೋನ್ ಮೂಲಕ ಪ್ರಸ್ತಾಪ ಬಂದಿದೆ.

    ಆದರೆ ಕಿಷ್ಕಿಂಧಾ ಹೋರಾಟ ಸಮಿತಿ ತಂಡವು ಖುದ್ದು ಬೇಟಿ ನೀಡಿದ್ದು, ಕಿಷ್ಕಿಂಧಾ ಜಿಲ್ಲೆಗಾಗಿ ಪ್ರಯತ್ನ ಒಳ್ಳೆಯದು, ಆದರೆ ತಾವರಗೇರಾ ಒಟ್ಟಾರೆಯಾಗಿ ತಾಲೂಕು ರಚನೆ ಮಾಡಿದರೆ ಯಾವ ಜಿಲ್ಲೆಗೆ ಸೇರ್ಪಡಿಸಬೇಕು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅಭಿಪ್ರಾಯ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts