More

    ‘ಕರೊನಿಲ್’​ನಿಂದ ಕರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ನಾವು ಹೇಳೇ ಇಲ್ಲ; ಪತಂಜಲಿ ಯೂ ಟರ್ನ್​

    ನವದೆಹಲಿ: ಪತಂಜಲಿ ಸಂಸ್ಥೆ ಕರೊನಾ ವೈರಸ್​ಗೆ ಔಷಧಿ ಕಂಡು ಹಿಡಿದಿದ್ದು, ಜೂ.23ರಂದು ಕರೊನಿಲ್​ ಕಿಟ್ ಬಿಡುಗಡೆ ಮಾಡಿದ್ದು, ಕೇವಲ 7 ದಿನಗಳಲ್ಲಿ ಸೋಂಕಿನಿಂದ ಗುಣಮುಖರಾಗಬಹುದು ಎಂದು ಹೇಳಿದ್ದೆಲ್ಲ ದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

    ಅಲ್ಲದೆ ಕೇಂದ್ರ ಸರ್ಕಾರ ಆಯುಷ್​ ಇಲಾಖೆ ಈ ಔಷಧಿಯಿಂದ ಅಂತರ ಕಾಯ್ದುಕೊಂಡು , ಕರೊನಿಲ್ ಕಿಟ್​ನ ಕ್ಲಿನಿಕಲ್​ ಟೆಸ್ಟ್​ನ ಎಲ್ಲ ದಾಖಲೆಗಳನ್ನೂ ಕಳಿಸಿ, ಅಲ್ಲಿಯವರೆಗೂ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಡಕ್​ ಸೂಚನೆ ನೀಡಿತ್ತು. ಅದಾದ ಬಳಿಕ ಬಾಬಾ ರಾಮ್ ದೇವ್​, ಪತಂಜಲಿ ಸಂಸ್ಥೆಯ ಸಿಇಒ ಸೇರಿ ಒಟ್ಟು ಐವರ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ.

    ಆದರೆ ಈಗ..ಪತಂಜಲಿ ಸಂಸ್ಥೆ ಸಂಪೂರ್ಣ ಯೂ ಟರ್ನ್​ ತೆಗೆದುಕೊಂಡಿದೆ. ಕರೊನಿಲ್​ ಕಿಟ್​ಗೆ ಸಂಬಂಧಪಟ್ಟಂತೆ ಉತ್ತರಾಖಂಡ ಔಷಧಿ ಇಲಾಖೆ ಪತಂಜಲಿ ಸಂಸ್ಥೆಗೆ ನೀಡಿದ್ದ ನೋಟಿಸ್​ಗೆ ಉತ್ತರಿಸಿದ ಸಿಇಒ ಆಚಾರ್ಯ ಬಾಲಕೃಷ್ಣ ಅವರು, ಕರೊನಿಲ್​​ನಿಂದ ಕರೊನಾ ಸೋಂಕು ಕಡಿಮೆಯಾಗುತ್ತದೆ ಎಂದು ನಾವು ಯಾವತ್ತೂ ಹೇಳಿಲ್ಲ. ನಾವು ಕರೊನಾ ಸೋಂಕಿಗೆ ಔಷಧಿ ಕಂಡು ಹಿಡಿದಿದ್ದೇವೆ. ಅದನ್ನು ಕ್ಲಿನಿಕಲ್​ ಟ್ರಯಲ್​​ಗೆ ಒಳಪಡಿಸಿದ್ದೇವೆ. ಆಗ ಕೆಲವು ಕರೊನಾ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದಷ್ಟೇ ಹೇಳಿದ್ದೇವೆ. ಅದರಲ್ಲಿ ಗೊಂದಲ ಬೇಡ ಎಂದು ಉತ್ತರಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts