ಬಿಗ್​ಬಾಸ್​ ಮುಂದಿನ ಆವೃತ್ತಿಗೆ ಈಕೆ ಫಿಕ್ಸ್​; ಈ ಸ್ಫರ್ಧಿಗಾಗಿ ಹೆಚ್ಚಾಯ್ತು ಡಿಮ್ಯಾಂಡ್

BBKS 11
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಅಂತಿಮ ಹಂತ ತಲುಪಿದ್ದು, ಫಿನಾಲೆಗೆ ಮೊದಲ ಸಂಚಿಕ ಮುಗಿದಿದ್ದು, ಎರಡನೇ ಸಂಚಿಕೆಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಾರಿಯ ಬಿಗ್​ಬಾಸ್​ ಆವೃತ್ತಿ ಜನರ ಗಮನವನ್ನು ಹೆಚ್ಚು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಫಿನಾಲೆ ಆರಂಭವಾಗಿದ್ದು, ಮೊದಲ ಸಂಚಿಕೆಯಲ್ಲಿ ತುಕಾಲಿ ಸಂತೋಷ್​ ಎಲಿಮಿನೇಟ್​ ಆಗಿ ಮನೆಯಿಂದ ಹೊರ ಬಂದಿದ್ದಾರೆ.

ಬಿಗ್​​ಬಾಸ್ ಮನೆಗೆ ಈ ಒಬ್ಬರು ಸ್ಪರ್ಧಿ ಬರಲೇಬೇಕಂತೆ. ಬಿಗ್​ಬಾಸ್ 10 ಗ್ರ್ಯಾಂಡ್ ಫಿನಾಲೆಗೆ ತಲುಪಿರುವಾಗಲೇ ಮುಂದಿನ ಸೀಸನ್ ಬಗ್ಗೆ ಚರ್ಚೆ ಜೋರಾಗಿದೆ. ಬಿಗ್​ಬಾಸ್ 11ಕ್ಕಾಗಿ ಜನರ ಚರ್ಚೆ ಶುರುವಾಗಿದೆ.

ತಮ್ಮ ಕಾಮಿಡಿ ಟೈಮಿಂಗ್​ನಿಂದಲೇ ಹೆಸರುವಾಸಿಯಾಗಿದ್ದ ತುಕಾಲಿ ಸಂತೋಷ್​ ಬಿಗ್ಬಾಸ್​ ಮನೆಗೆ ಬರುವ ಮುನ್ನ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿ ಶೋ ಮೂಲಕ ಮನೆ ಮಾತಾಗಿದ್ದರು. ಮನೆಯಿಂದ ಹೊರಬಂದರೂ ತುಕಾಲಿ ಸಂತೋಷ್​ ಈ ಒಂದು ವಿಚಾರಕ್ಕೆ ಸದ್ದು ಹೆಚ್ಚು ಸದ್ದು ಮಾಡುತ್ತಿದ್ದು, ನೆಟ್ಟಿಗರು ಶೋ ಪ್ರಸಾರವಾಗುವ ವಾಹಿನಿಗೆ ಮನವಿ ಮಾಡಿದ್ದಾರೆ.

Manasa Santhosh

ಏಕೆಂದರೆ, ತುಕಾಲಿ ಸಂತೋಷ್ ಅವರ ಪತ್ನಿ ಬಿಗ್​ಬಾಸ್ ಮನೆಗೆ ಬರಬೇಕಂತೆ. ಹೌದು, ಬಿಗ್​ಬಾಸ್ ಮನೆಗೆ ಬಂದ ತುಕಾಲಿ ಸಂತೋಷ್ ಅವರ ಪತ್ನಿಯ ಫನ್ನಿ ಮಾತುಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದು ಅವರು ನೆಕ್ಸ್ಟ್ ಮನೆಗೆ ಬರಬೇಕೆಂದು ನೆಟ್ಟಿಗರು ಬಯಸಿದ್ದಾರೆ.ತುಕಾಲಿ ಸಂತೋಷ್ ಅವರ ಪತ್ನಿಯದ್ದು ನೇರ ಮಾತು, ನೇರ ನುಡಿ. ಅವರು ಎಲ್ಲದಕ್ಕೂ ಹಾಸ್ಯದ ಟಚ್ ಕೊಟ್ಟು ತುಂಬಾ ಸರಳವಾಗಿ ಮಾತನಾಡುತ್ತಾರೆ. ಇದೀಗ ಇದೇ ವಿಚಾರವಾಗಿ ಅವರು ಮುಂದಿನ ಸೀಸನ್​ನಲ್ಲಿ ಸ್ಪರ್ಧಿಯಾಗಿ ಬರಬೇಕೆಂದು ಹಲವರು ಆಗ್ರಹಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹಾಗು ನಿನ್ನೆ ಪ್ರಸಾರವಾದ ಗ್ರ್ಯಾಂಡ್​ ಫಿನಾಲೆಯ ಮೊದಲ ಸಂಚಿಕೆಯಲ್ಲಿ ಮಾನಸ ಸಂತೋಷ್​ ಅವರ ಮಾತುಗಳಿಗೆ ಪ್ರೇಕ್ಷಕರು ನಕ್ಕು ಸುಸ್ತಾಗಿದ್ದು, ಅವರ ಮ್ಯಾನರಿಸಂ ಅನ್ನು ಜನ ಕೊಂಡಾಡಿದ್ದಾರೆ. ಈಗಾಗಲೇ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಮಾನಸ ಹಾಗೂ ತುಕಾಲಿ ಸಂತೋಷ್​ ಈಗ ಬಿಗ್​ಬಾಸ್​ ಪ್ರವೇಶಿಸುವ ಮೂಲಕ ಮತ್ತೊಮ್ಮೆ ಮನೆ ಮಾತಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net