More

    ಸೀತೆ ಪಾತ್ರಕ್ಕೆ ಕರೀನಾ ಅರ್ಹರಲ್ಲ! ಸಂಭಾವನೆ ವಿಚಾರಕ್ಕೆ ಬ್ಯಾನ್ ಬಿಸಿ..

    ಮುಂಬೈ: ಅಲೌಕಿಕ್ ದೇಸಾಯಿ ನಿರ್ದೇಶನದಲ್ಲಿ ಬಾಲಿವುಡ್‌ನಲ್ಲಿ ಸಿದ್ಧವಾಗಲಿರುವ ‘ಸೀತಾ’ ಸಿನಿಮಾ ಇತ್ತೀಚೆಗಷ್ಟೇ ಸಂಭಾವನೆ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದಲ್ಲಿನ ಪ್ರಧಾನ ಪಾತ್ರ ನಿಭಾಯಿಸಲು ಕರೀನಾ ಕಪೂರ್ ಬರೋಬ್ಬರಿ 12 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಕರೀನಾ ಕಪೂರ್ ಅವರನ್ನು ಬ್ಯಾನ್ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ!

    ಇದನ್ನೂ ಓದಿ: ವಿಶ್ವನಾಥನ್​ ಆನಂದ್​ ಜತೆ ಕಿಚ್ಚನ ಚೆಸ್​

    ಇಲ್ಲಿಯವರೆಗೂ ಪ್ರತಿ ಸಿನಿಮಾಕ್ಕೆ 6ರಿಂದ 7 ಕೋಟಿ ಸಂಭಾವನೆ ಪಡೆಯುತ್ತಿದ್ದ ಕರೀನಾ ಕಪೂರ್, ‘ಸೀತಾ’ ಚಿತ್ರಕ್ಕೆ 12 ಕೋಟಿ ಬೇಡಿಕೆ ಇಟ್ಟಿದ್ದಾರಂತೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಗಿಟ್ಟಿಸಿಕೊಳ್ಳುತ್ತಿದ್ದಂತೆ, ‘ಬೈಕಾಟ್ ಕರೀನಾ ಕಪೂರ್’ ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

    ಇದನ್ನೂ ಓದಿ: ದೂರ ಸರಿದ ಧ್ರುವ ದುಬಾರಿ

    ‘ಸೀತೆಯ ಪಾತ್ರಕ್ಕಾಗಿ ಹೆಚ್ಚಿನ ಸಂಭಾವನೆ ಕೇಳುವ ಮೂಲಕ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡುತ್ತಿದ್ದಾರೆ. ಸೀತೆಯ ಪಾತ್ರ ಮಾಡುವ ಯಾವ ಅರ್ಹತೆಯೂ ಕರೀನಾಳಿಗಿಲ್ಲ. ‘ತಾಂಡವ್’ ವೆಬ್‌ಸರಣಿ ಮೂಲಕ ಕರೀನಾ ಪತಿ ಸೈಫ್​ ಅಲಿ ಖಾನ್ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದರು. ಇದೀಗ ಅವರ ಹಾದಿಯಲ್ಲಿ ಕರೀನಾ ಸಾಗುತ್ತಿದ್ದಾರೆ’- ಎಂಬ ರೀತಿಯಲ್ಲಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts