More

    ನಶೆಯಲ್ಲಿ ನೇಪಾಳಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ; ಡಿಜೆ ಹಳ್ಳಿ ಪೊಲೀಸರಿಂದ ನಟೋರಿಯಸ್ ರೌಡಿಶೀಟರ್ ಬಂಧನ!

    ಬೆಂಗಳೂರು: ಕುಡಿದ ಮತ್ತಿನಲ್ಲಿ ನೇಪಾಳಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಗಡಿಪಾರು ಆಗಿದ್ದ ನಟೋರಿಯಸ್ ರೌಡಿ ಶೀಟರ್ ನನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಕಮರ್ಷಿಯಲ್ ಸ್ಟ್ರೀಟ್ ರೌಡಿ ಶೀಟರ್ ಆಗಿರೋ ಅವೇಜ್, ಈ ಹಿಂದೆ ಪೊಲೀಸ್ರು ಅವೇಜ್ ನನ್ನ ಗಡಿಪಾರು ಮಾಡಿದ್ರು. ಆದ್ರೆ ನಿನ್ನೆ ತಡರಾತ್ರಿ ಡಿ.ಜೆ. ಹಳ್ಳಿಯ ಮುನಿಯಪ್ಪ ಬ್ಲಾಕ್ ನಲ್ಲಿ ಕಾಣಿಸಿಕೊಂಡಿದ್ದ ಅವೇಜ್, ಎಣ್ಣೆ ಮತ್ತಲ್ಲಿ ನೇಪಾಳಿ ಕುಟುಂಬ ವಾಸವಿದ್ದ ಮನೆಗೆ ನುಗ್ಗಿದ್ದಾನೆ.

    ಈ ವೇಳೆ ಸಂತ್ರಸ್ತ ಮಹಿಳೆ ಪತಿ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡ್ತಿದ್ದು, ಮಹಿಳೆ ಒಬ್ಬಳೇ ಇದ್ದಾಗ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಮೈ, ಕೈ ಕಚ್ಚಿ ರೌಡಿ ಶೀಟರ್ ಅವೇಜ್ ಕ್ರೌರ್ಯ ಮೆರೆದಿದ್ದಾನೆ. ಸಧ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೌಡಿ ಶೀಟರ್ ಅವೇಜ್ ನನ್ನ ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಪುನೀತ್ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ; ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ, ಕುಟುಂಬಸ್ಥರಿಗೆ ಸಾಂತ್ವಾನ

    ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts