More

    ಎಂಟು ಭಾರತೀಯರನ್ನು ಕೊಂದ ನೇಪಾಳದ ರೆಸಾರ್ಟ್​ನ ಪರವಾನಗಿ ರದ್ದು ಮಾಡಿದ ಪ್ರವಾಸೋದ್ಯಮ ಇಲಾಖೆ

    ಕಟ್ಮಂಡು: ಕಳೆದ ತಿಂಗಳು ನೇಪಾಳದ ರೆಸಾರ್ಟ್​ ಒಂದರಲ್ಲಿ ಗ್ಯಾಸ್​ ಸೋರಿಕೆಯಿಂದಾಗಿ ಎಂಟು ಜನ ಭಾರತೀಯ ಪ್ರವಾಸಿಗಳು ಮೃತರಾದ ಹಿನ್ನೆಲೆ ನೇಪಾಳದ ಪ್ರವಾಸೋದ್ಯಮ ಇಲಾಖೆಯು ರೆಸಾರ್ಟ್​ನ ಪರವಾನಗಿಯನ್ನು ಮೂರು ತಿಂಗಳ ಮಟ್ಟಿಗೆ ರದ್ದು ಗೊಳಿಸಿದೆ. ಮೂರು ತಿಂಗಳ ನಂತರ ಅಗತ್ಯ ಸುರಕ್ಷಾ ಕ್ರಮಗಳು ರೆಸಾರ್ಟ್​ನಲ್ಲಿದ್ದರೆ ಮಾತ್ರವೇ ಪರವಾನಗಿಯನ್ನು ವಾಪಾಸು ನೀಡುವುದಾಗಿ ತಿಳಿಸಲಾಗಿದೆ.

    ಜನವರಿ ತಿಂಗಳ 21 ನೇ ತಾರೀಖಿನಂದು ಕೇರಳದಿಂದ ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದ 15 ಜನರ ಗುಂಪು ನೇಪಾಳದ ಮಕ್ವಾನ್ಪುರ ಜಿಲ್ಲೆಯಲ್ಲಿರುವ ಎವರೆಸ್ಟ್ ಪನೋರಮಾ ರೆಸಾರ್ಟ್​ ಒಂದರಲ್ಲಿ ರೂಂ ಮಾಡಿಕೊಂಡು ತಂಗಿತ್ತು. ಆದರೆ ಇದ್ದಕ್ಕಿದ್ದಂತೆ ರೂಮಿನಲ್ಲಿದ್ದ ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಎಂಟು ಜನರಿಗೆ ಉಸಿರು ಕಟ್ಟಲು ಆರಂಭಿಸಿತ್ತು. ತಕ್ಷಣವೇ ಅವರನ್ನು ಎಚ್​ಎಎಮ್​ಎಸ್​ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮಾರ್ಗ ಮಧ್ಯವೇ ಮೃತ ಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದ್ದರು. ಪ್ರವಾಸಿಗರಿಗೆ ಉಸಿರು ಕಟ್ಟಲು ರೂಮಿನಲ್ಲಿದ್ದ ಹೀಟರ್​ನಿಂದ ಅನಿಲ ಸೋರಿಕೆಯಾಗಿದ್ದೇ ಕಾರಣ ಎನ್ನಲಾಗಿತ್ತು.

    ಪ್ರವಾಸಿಗರ ದೂರಿನ ಆಧಾರದ ಮೇರೆಗೆ ರೆಸಾರ್ಟ್​ನ ಪರಿಶೀಲನೆಗೆಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಸುರೇಂದ್ರ ಥಾಪಾ ಅವತ ನೇತ್ರತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ವಿಮಾನಯಾನ ಸಚಿವರುಗಳು ಇದ್ದ ಆ ಸಮಿತಿಯು ರೆಸಾರ್ಟ್​ನ ಪರಿಶೀಲನೆ ನಡೆಸಿ, ಅದರಲ್ಲಿರುವ ನ್ಯೂನ್ಯತೆಗಳನ್ನು ಸೂಚಿಸುವಂತಹ ವರದಿಯೊಂದನ್ನು ತಯಾರಿಸಿತ್ತು. ಆ ವರದಿಯ ಆಧಾರದ ಮೇಲೆ ನೇಪಾಳದ ಪ್ರವಾಸೋದ್ಯಮ ಇಲಾಖೆಯು ರೆಸಾರ್ಟ್​ನ ಪರವಾನಗಿಯನ್ನು ರದ್ದು ಮಾಡಿದೆ.

    ಡಿಟಿಒ ನಿಗದಿ ಪಡಿಸಿರುವ ಮಾನದಂಡಗಳನ್ನು ರೆಸಾರ್ಟ್​ ಪಾಲಿಸುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದೀಗ ಪ್ರವಾಸೋದ್ಯಮ ಕಾಯ್ದೆ – 1979ರ ಸೆಕ್ಷನ್​ 15ರ ಪ್ರಕಾರ ರೆಸಾರ್ಟ್​ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು ಮೂರು ತಿಂಗಳ ಒಳಗಾಗಿ ರೆಸಾರ್ಟ್​ ಎಲ್ಲ ಮಾನದಂಡಗಳನ್ನು ಪಾಲಿಸಿದ್ದಾದಲ್ಲಿ ಮಾತ್ರವೇ ಅದಕ್ಕೆ ಪರವಾನಗಿಯನ್ನು ವಾಪಾಸು ನೀಡುವುದಾಗಿ ತಿಳಿಸಲಾಗಿದೆ. ತಪ್ಪಿನ ಅರಿವಾಗಿದೆ ಎಂದಿರುವ ರೆಸಾರ್ಟ್​ನ ಮಾಲೀಕರು ಮೂರು ತಿಂಗಳ ಒಳಗಾಗಿ ತಪ್ಪನ್ನು ತಿದ್ದಿಕೊಂಡು ಅಗತ್ಯ ಸುರಕ್ಷತೆಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts