More

    ತ್ರಿಕೋನ ಪ್ರೇಮ ಕಥೆ ‘ನೆನಪು ಮರುಕಳಿಸಿದಾಗ’ …

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ತ್ರಿಕೋನ ಪ್ರೇಮಕಥೆಯ ಟ್ರೆಂಡ್​ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ನಿರ್ದೇಶಕ ದೇವದಾಸ್​, ‘ನೆನಪು ಮರುಕಳಿಸಿದಾಗ’ ಎಂಬ ಚಿತ್ರದ ಮೂಲಕ ತ್ರಿಕೋನ ಪ್ರೇಮಕಥೆಯೊಂದನ್ನು ಹೇಳುವುದಕ್ಕೆ ಹೊರಟಿದ್ದಾರೆ. ಇತ್ತೀಚೆಗೆ ಈ ಚಿತ್ರದ ಲಿರಿಕಲ್​ ವಿಡಿಯೋ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಕನ್ನಡದವರನ್ನು ನೋಡಿದರೆ ಹೊಟ್ಟೆಕಿಚ್ಚು!; ‘ಕೆಜಿಎಫ್’ ಹೊಗಳಿದ ಮಹೇಶ್ ಮಂಜ್ರೇಕರ್

    ಇಲ್ಲಿ ನಾಯಕ ಹಳ್ಳಿಯವನು. ಅವನನ್ನು ಅವನ ಮಾವನ ಮಗಳು ಪ್ರೀತಿಸುತ್ತಿರುತ್ತಾಳೆ. ಪ್ರಾಧ್ಯಾಪಕ ಉದ್ಯೋಗ ಅರಿಸಿ ಬೆಂಗಳೂರಿಗೆ ಬಂದ ಅವನನ್ನು, ಅವನ ಪ್ರಾಧ್ಯಾಪಕರ ಮಗಳು ಪ್ರೀತಿಸುತ್ತಾಳೆ. ಇಬ್ಬರು ಹುಡುಗಿಯರಲ್ಲಿ ಅವನು ಯಾರಿಗೆ ಸಿಗುತ್ತಾನೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.

    ಚಿತ್ರದಲ್ಲಿ ನಾಯಕನಾಗಿ ಬುಲೆಟ್‌ ವಿನೋದ್ ಅಭಿನಯಿಸಿದ್ದು, ನಾಯಕಿಯರಾಗಿ ಸೌಂದರ್ಯ ಗೌಡ ಮತ್ತು ಸೋನಿಶೆಟ್ಟಿ ಇದ್ದಾರೆ. ಸನ್ನಿ ತುಮಕೂರು ವಿಲನ್​ ಆಗಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ಶೋಭರಾಜ್, ಕಿಲ್ಲರ್‌ ವೆಂಕಟೇಶ್, ಮೀಸೆ ಆಂಜನಪ್ಪ, ಚಿಕ್ಕಹೆಜ್ಜಾಜಿ ಮಹದೇವ್, ಮೈಸೂರು ಮಂಜುಳ, ನರಸಿಂಹಯ್ಯ, ಅಶೋಕ್.ಎಂ.ಕಾಳೆ ಮುಂತಾದವರು ಅಭಿನಯಿಸಿದ್ದಾರೆ.

    ಇದನ್ನೂ ಓದಿ: ಬಿಗ್​ಬಾಸ್​ ಕನ್ನಡದ 9ನೇ ಆವೃತ್ತಿಯಲ್ಲಿರಲಿದೆ ಹಲವು ಸರ್ಪ್ರೈಸ್​: ಏನೇನು ಬದಲಾಗಬಹುದು? ಇಲ್ಲಿದೆ ಮಾಹಿತಿ

    ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮೂವೀಸ್ ಲಾಂಛನದಲ್ಲಿ ಡಿ.ಎಸ್. ಕೃಷ್ಣಮೂರ್ತಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಅವರದೇ ‘ನೆನಪು ಮರುಕಳಿಸಿದಾಗ’ ಕಾದಂಬರಿಯನ್ನಾಧರಿಸಿದೆ. ಮೂಲಕಥೆಗೆ ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ ದೇವದಾಸ್​. ಚಿತ್ರದಲ್ಲಿ ಐದು ಹಾಡುಗಳಿದ್ದು, ಅಲೆನ್ ಕ್ಲಾರೆನ್ಸ್ ಕ್ರಾಸ್ತ ಸಂಗೀತ ಸಂಯೋಜಿಸಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಡ್ಯ, ಕೆ.ಎಂ.ದೊಡ್ಡಿ, ಬಿಡದಿ, ಭೈರಮಂಗಲ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

    ತಮನ್ನಾ ಮುಂದೆಯೇ ಬೌನ್ಸರ್ಸ್​ಗಳ ಅನುಚಿತ ವರ್ತನೆ! ಮುಜುಗರಕ್ಕೀಡಾದ ಮಿಲ್ಕಿ ಬ್ಯೂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts