More

    ನೆರೆ ಪೀಡಿತರ ಸಮಸ್ಯೆ ನಿವಾರಿಸಿ

    ಚಿಕ್ಕೋಡಿ: ಕಳೆದ ಬಾರಿ ಮಳೆ ಹಾಗೂ ಪ್ರವಾಹದಿಂದ ಹಾನಿ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಎಸ್.ಎಸ್. ಸಂಪಗಾಂವಿಗೆ ಮನವಿ ಸಲ್ಲಿಸಿದರು.

    ಮಳೆಯಿಂದಾಗಿ ಅನೇಕ ಜನರು ಬೀದಿಗೆ ಬಂದಿದ್ದಾರೆ. ರೈತರಿಗೆ ಸಾಕಷ್ಟು ಹಾನಿಯಾಗಿದೆ. ಸರ್ಕಾರ ಘೋಷಿಸಿದ್ದ 10,000 ರೂ. ಪರಿಹಾರ ಬಂದು ಮುಟ್ಟಿಲ್ಲ. ಬಿದ್ದಿರುವ ಮನೆಗಳ ಸರ್ವೇ ಸರಿಯಾಗಿಲ್ಲ. ಸಂಪೂರ್ಣ ಬಿದ್ದಿರುವ ಮನೆಗಳನ್ನು ಸಿ ಕೆಟಗರಿ ಎಂದು ಪರಿಗಣಿಸಲಾಗಿದೆ. ಇಂತಹ ಲೋಪ ಸರಿಪಡಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಪ್ರಸಕ್ತ ವರ್ಷ ಉತ್ತಮ ಮಳೆ ಆರಂಭಗೊಂಡಿದ್ದರಿಂದ ರೈತರು ಉತ್ಸಾಹದಿಂದ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಆದರೆ, ಕೃಷಿ ಇಲಾಖೆಯಿಂದ ಕಳಪೆ ಬೀಜ ವಿತರಿಸಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕರೊನಾದಿಂದ ಬಳಲಿರುವ ರೈತರಿಗೆ ಕೃಷಿ ಇಲಾಖೆಯಿಂದ ಮೋಸವಾಗಿದೆ.

    ಕೂಡಲೇ ಕೃಷಿ ಇಲಾಖೆಯವರು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಆರ್ಥಿಕ ನೆರವು ಘೋಷಿಸಬೇಕು ಎಂದು ಕೋರಿದರು. ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲೂಕಾಧ್ಯಕ್ಷ ಮಂಜುನಾಥ ಪರಗೌಡಾ, ದಾದು ನರವಡೆ, ಲಕ್ಷ್ಮಣ ಸಿಂಗಾಡೆ, ಸಂಜಯ ಸೂರ್ಯವಂಶಿ, ಅಭಿಷೇಕ ಕರೋಶಿ, ಶಂಕರ ಉಮರಾಣೆ, ಸಂತೋಷ ಕಟ್ಟಿಕರ, ಶೌಕತ ಲಾಟಕರ್, ಸಂತೋಷ ಕಾಂಬಳೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts