More

    ಲಂಡನ್​ನಲ್ಲಿ ಕರೊನಾ ವಿರುದ್ಧ ಹೋರಾಡುತ್ತಿದ್ದ ಕನ್ನಡಿಗ ಡಾ. ನೀರಜ್ ಪಾಟೀಲ್‌ಗೆ ಸೋಂಕು

    ಬೆಂಗಳೂರು: ಲಂಡನ್‌ನ ಲ್ಯಾಂಬೆತ್ ನಗರದ ಮಾಜಿ ಮೇಯರ್, ಕನ್ನಡಿಗ ಡಾ. ನೀರಜ್ ಪಾಟೀಲ್ ಕರೊನಾ ಸೋಂಕಿಗೆ ಒಳಗಾಗಿದ್ದಾರೆ.

    ಪ್ರಸ್ತುತ ಲಂಡನ್‌ನಲ್ಲಿ ನೆಲೆಸಿರುವ ಅವರು ಸೆಲ್ಫ್ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಸ್ವತಃ ವೈದ್ಯರಾಗಿರುವ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.

    ಭಾರತದಲ್ಲಿರುವ ತಮ್ಮ ಸ್ನೇಹಿತರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿಷಯ ತಿಳಿಸಿರುವ ಅವರು, ‘‘ನಾನು ನಿಯಮಿತವಾಗಿ ಜಿಮ್‌ಗೆ ಹೋಗುತ್ತೇನೆ. ಯಾವಾಗಲೂ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುತ್ತೇನೆ. ಧೂಮಪಾನದ ಚಟ ಇಲ್ಲ. ಶ್ವಾಸಕೋಶ ಮತ್ತು ಹೃದಯಕ್ಕೆ ಸಂಬಂಧಿಸಿದ ಯಾವ ತೊಂದರೆಯೂ ನನಗಿಲ್ಲ. ಹೀಗಿರುವ ನನಗೆ ಕರೊನಾ ಸೋಂಕು ತಗಲುತ್ತದೆ ಎಂದು ನಾನು ಕನಸುಮನಸಿನಲ್ಲೂ ಎಣಿಸಿರಲಿಲ್ಲ’’ ಎಂದು ಹೇಳಿದ್ದಾರೆ.

    ‘‘ಎಲ್ಲೋ ನಾನು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ಎಡವಿದ್ದೇನೆ ಎಂದು ಅನ್ನಿಸುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ, ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವಲ್ಲಿ ಅಥವಾ ರಕ್ಷಣಾ ಕವಚ ಧರಿಸುವಲ್ಲಿ ನನ್ನಿಂದ ತಪ್ಪಾಗಿರಬಹುದು. ಆದರೂ ಆದಷ್ಟು ಬೇಗ ನಾನು ಗುಣ ಹೊಂದಿ, ಮತ್ತೆ ಎಂದಿನಂತೆ ಕೆಲಸಕಾರ್ಯಗಳಲ್ಲಿ ತೊಡಗುತ್ತೇನೆಂಬ ವಿಶ್ವಾಸವಿದೆ’’ ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts