More

    MATINEE MOVIE REVIEW: ಥ್ರಿಲ್ಲರ್​ ಕಥೆಯಲ್ಲಿ ಹಾರರ್​ ಟ್ವಿಸ್ಟ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು:


    ಶ್ರೀಮಂತ ಮನೆತನದ ಯುವಕ ಅರುಣನ (ನೀನಾಸಂ ಸತೀಶ್​) ತಾಯಿ ನಿಧನ ಹೊಂದುತ್ತಾರೆ. ಅದೇ ನೋವಿನಲ್ಲಿ ಆತ ಹೊರಪ್ರಪಂಚದಿಂದ ಅಂತರ ಕಾಯ್ದುಕೊಳ್ಳುತ್ತಾನೆ. ಗರ್ಲ್​್ರೆಂಡ್​ ಅಕ್ಷರಾಗೂ (ರಚಿತಾ) ಏನು ಮಾಡಬೇಕೆಂದು ತೋಚುವುದಿಲ್ಲ. ಆ ಸಮಯದಲ್ಲಿ ಮತ್ತೆ ಆತನಲ್ಲಿ ಜೀವನೋತ್ಸಾಹ ತುಂಬಲು ಹಳೆಯ ಗೆಳಯರು ಜತೆಯಾಗುತ್ತಾರೆ. ಆದರೆ, ಆ ಗೆಳೆಯರು ಅರುಣ ಜೀವನಕ್ಕೆ ಬರಲು ಕಾರಣ ಬೇರೆಯೇ ಇರುತ್ತದೆ. ಅದು ತಿಳಿಯುವಷ್ಟರಲ್ಲಿ ಅರುಣನ ಬಂಗಲೆಯಲ್ಲಿ ಅತಿಮಾನುಷ ಶಕ್ತಿಗಳ ಅನಾವರಣವಾಗುತ್ತದೆ. ಮತ್ತೊಂದೆಡೆ ಚಿತ್ರಳ (ಅದಿತಿ ಪ್ರಭುದೇವ) ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ಪೊಲೀಸ್​ ದೂರು ನೀಡುತ್ತಾರೆ. ಹಾಗಾದರೆ ಈ ಚಿತ್ರ ಯಾರು? ಆಕೆಗೂ ಅರುಣನಿಗೂ ಏನು ಸಂಬಂಧ? ಗೆಳೆಯರು ಮತ್ತೆ ಅರುಣನ ಜತೆಯಾಗಲು ಕಾರಣವೇನು? ನಿಜವಾಗಲೂ ಆ ಮನೆಯಲ್ಲಿ ದೆವ್ವಗಳಿವೆಯಾ? ಹೀಗೆ ಹಲವು ಪ್ರಶ್ನೆಗಳಿಗೆ “ಮ್ಯಾಟ್ನಿ’ಯಲ್ಲಿ ಉತ್ತರ ನೀಡುತ್ತಾ ಸಾಗುತ್ತಾರೆ ನಿರ್ದೇಶಕ ಮನೋಹರ್​ ಕಾಂಪಲ್ಲಿ.

    MATINEE MOVIE REVIEW: ಥ್ರಿಲ್ಲರ್​ ಕಥೆಯಲ್ಲಿ ಹಾರರ್​ ಟ್ವಿಸ್ಟ್​


    “ಅಯೋಗ್ಯ’ ಚಿತ್ರದ ಬಳಿಕ ನೀನಾಸಂ ಸತೀಶ್​ ಮತ್ತು ರಚಿತಾ ರಾಮ್​ ನಟಿಸಿರುವ ಸಿನಿಮಾ “ಮ್ಯಾಟ್ನಿ’. “ಅಯೋಗ್ಯ’ ಗ್ರಾಮೀಣ ಸೊಗಡಿನ ರೊಮ್ಯಾಂಟಿಕ್​ ಸ್ಟೋರಿಯಾದರೆ, “ಮ್ಯಾಟ್ನಿ’ ಥ್ರಿಲ್ಲರ್​ ಜಾನರ್​ ಸಿನಿಮಾ. ಹೀಗಾಗಿಯೇ ಈ ಜೋಡಿಯನ್ನು ಹೊಸ ಪಾತ್ರಗಳಲ್ಲಿ ನೋಡಲು ಚಂದವೆನಿಸುತ್ತದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಸತೀಶ್​ ಗಮನ ಸೆಳೆಯುತ್ತಾರೆ. ಗೆಳೆಯರಾಗಿ ನಾಗಭೂಷಣ, ಶಿವರಾಜ್​ ಕೆ.ಆರ್​. ಪೇಟೆ, ದಿಗಂತ್​ ಮತ್ತು ಪೂರ್ಣ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಲ್ಲಲ್ಲಿ ನಗಿಸುತ್ತಾ, ಹೆದರಿಸುತ್ತಾ ಸಾಗುವ “ಮ್ಯಾಟ್ನಿ’ ಸಂಭಾಷಣೆಯಿಂದಲೂ ಗಮನ ಸೆಳೆಯುತ್ತದೆ. ಎಲೆಕ್ಷನ್​ ಬಿಜಿ, ಬೇಸಗೆಯ ಬಿಸಿಯ ನಡುವೆ ಐಪಿಎಲ್​ ಕ್ರಿಕೆಟ್​ನಿಂದ ಬ್ರೇಕ್​ ಪಡೆಯಲಿಚ್ಛಿಸುವ ಥ್ರಿಲ್ಲರ್​ ಸಿನಿಮಾಪ್ರಿಯರಿಗೆ “ಮ್ಯಾಟ್ನಿ’ ಉತ್ತಮ ಆಯ್ಕೆ.

    MATINEE MOVIE REVIEW: ಥ್ರಿಲ್ಲರ್​ ಕಥೆಯಲ್ಲಿ ಹಾರರ್​ ಟ್ವಿಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts