More

    ಇಂದು ಐದು ಆಯ್ಕೆಗಳು! 195 ಮುಟ್ಟಿತು ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಕಳೆದ ವಾರದವರೆಗೆ ವಿಶ್ವಕಪ್ ಹವಾ ಭರ್ಜರಿಯಾಗಿತ್ತು. ಆದರೆ ಈಗ ಅದು ಮುಗಿದಿದ್ದು, ಭಾರತಕ್ಕೆ ಕ್ರಿಕೆಟ್ ವಿಶ್ವಕಪ್ ಸಿಕ್ಕಿಲ್ಲ ಎಂಬ ಕೊರಗೂ ಇಡೀ ದೇಶಕ್ಕೆ ಕಾಡಿದೆ. ಈ ಬೇಸರದಿಂದ ದೂರವಾಗಲು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಈ ವಾರ ನೋಡಲು ಐದು ಸಿನಿಮಾಗಳ ಆಯ್ಕೆಗಳಿವೆ. ಕಳೆದ ವಾರ ಆರು ಸಿನಿಮಾಗಳು ರಿಲೀಸ್ ಆಗಿದ್ದವು. ಈ ವಾರದ ಸಿನಿಮಾಗಳಿಂದ ಒಟ್ಟು ಈ ವರ್ಷ ತೆರೆಕಂಡ ಚಿತ್ರಗಳ ಸಂಖ್ಯೆ 195 ತಲುಪಿದೆ. ಇಷ್ಟದ ಜಾನರ್ ಸಿನಿಮಾ ನೋಡಿ ಈ ವಾರಾಂತ್ಯವನ್ನು ಕಳೆಯಬಹುದು.

    ಇದನ್ನೂ ಓದಿ : ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್​ ಆಗಲಿರುವ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?

    ಇಂದು ಐದು ಆಯ್ಕೆಗಳು! 195 ಮುಟ್ಟಿತು ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ

    ಕೃಷ್ಣನ ಶುಗರ್ ಫ್ಯಾಕ್ಟರಿ:
    ದೀಪಕ್ ಅರಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ‘ಶುಗರ್ ಫ್ಯಾಕ್ಟರಿ’. ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕರಾಗಿದ್ದು, ಸೋನಲ್ ಮೊಂತೇರೊ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ಮೂವರು ನಟಿಯರು ನಾಯಕಿಯಾಗಿದ್ದಾರೆ. ನಾಯಕ ಕೃಷ್ಣ ಇದೇ ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಕಾಲಕ್ಕೆ ಹೊಂದುವಂತಹ ಪ್ರೇಮ ಕಥಾಹಂದರವಿರುವ ರೊಮ್ಯಾಂಟಿಕ್ ಜಾನರ್‌ನ ಚಿತ್ರವಿದು.ಜತೆಗೆ ಅಭಿ, ಪವನ್ ನಾರಾಯಣ್, ಗೋವಿಂದೇಗೌಡ, ಸೂರಜ್, ರಂಗಾಯಣ ರಘು ಪ್ರಮುಖ ತಾರಾಗಣದಲ್ಲಿದ್ದಾರೆ.

    ಇದನ್ನೂ ಓದಿ : ನಾಯಕಿಯಾದ ಈ ಮೌಂಟ್​ ಕಾರ್ಮೆಲ್​ ಕಾಲೇಜಿನ ಹುಡುಗಿ ; ಹಳ್ಳಿ ಹುಡುಗಿ ಲುಕ್​ನಲ್ಲಿ ಬಿಂದು

    ಇಂದು ಐದು ಆಯ್ಕೆಗಳು! 195 ಮುಟ್ಟಿತು ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ

    ಭಾವನಾತ್ಮಕ ಸ್ವಾತಿಮುತ್ತಿನ ಮಳೆಹನಿಯೇ:
    ರಾಜ್ ಬಿ. ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ಹಾಗೂ ನಟಿ ರಮ್ಯಾ ಚೊಚ್ಚಲ ಬಾರಿಗೆ ನಿರ್ಮಿಸಿರುವ ಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ರಾಜ್‌ಗೆ ‘ಸಕುಟುಂಬ ಸಮೇತ’ ಚಿತ್ರದ ಖ್ಯಾತಿಯ ಸಿರಿ ರವಿಕುಮಾರ್ ಜೋಡಿಯಾಗಿದ್ದಾರೆ. ಸಾವಿನಂಚಿನಲ್ಲಿರುವ ಜನರ ಸುತ್ತ ಸುತ್ತುವ ವಿಭಿನ್ನ ಕಥಾಹಂದರವಿರುವ ಭಾವನಾತ್ಮಕ ಸಿನಿಮಾ. ಪ್ರೀತಿ, ಒಂಟಿತನ, ಭಾವನೆಗಳ ಸುತ್ತ ಕಥೆ ಸುತ್ತುತ್ತದೆ. ರಾಜ್, ಸಿರಿ ಜತೆ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮಾ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಪ್ರವೀಣ್ ಶ್ರಿಯಾನ್ ಛಾಯಾಗ್ರಹಣ ಹಾಗೂ ಸಂಕಲನ, ಮಿಧುನ್ ಮುಕುಂದನ್ ಸಂಗೀತವಿರಲಿದೆ. .

    ಇದನ್ನೂ ಓದಿ : BBKS10: ‘ಹೋಗೋಲೆ ಅಂತೆಲ್ಲಾ ಮಾತಾಡಬೇಡಿ’!; ಜೋರಾಗ್ತಿದೆಯಾ ಕಾರ್ತಿಕ್​ ಧ್ವನಿ?

    ಇಂದು ಐದು ಆಯ್ಕೆಗಳು! 195 ಮುಟ್ಟಿತು ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ

    ಇನ್ನೂ ಮೂರು ಸಿನಿಮಾಗಳು:
    ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಭಿಷೇಕ್ ಅಂಬರೀಷ್, ರಚಿತಾ ರಾಮ್, ಪ್ರಿಯಾಂಕಾ ಮುಖ್ಯ ಭೂಮಿಕೆಯಲ್ಲಿರುವ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿರುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಬ್ಯಾಡ್ ಮ್ಯಾನರ್ಸ್‌’. ಚಿಕ್ಕಣ್ಣ ರಾಮಕೃಷ್ಣಯ್ಯ ನಿರ್ದೇಶನದ ಆರ್ಯನ್ ಹರ್ಷ, ದಿಯಾ ಆಶ್ಲೇಷ್, ರಕ್ಷಿತಾ ಕೆರೆಮನೆ ಅಭಿನಯದ ‘ಎಲೆಕ್ಟ್ರಾನಿಕ್ ಸಿಟಿ’. ಸಂಜಯ್ ಎಚ್ ಆ್ಯಕ್ಷನ್-ಕಟ್ ಹೇಳಿರುವ ಹದಿಹರೆಯದ ಮಕ್ಕಳ ಶಾಲಾ ದಿನಗಳ ತುಂಟಾಟಗಳ ಕುರಿತ ‘ಸ್ಕೂಲ್ ಡೇಸ್’.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts