More

    ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು

    ರಾಯಬಾಗ: ರಾಜ್ಯದಲ್ಲಿ ಕರೊನಾ ಭೀತಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ ತರಕಾರಿ, ದಿನಸಿ ಸಾಮಗ್ರಿ ಖರೀದಿಗೆ ಗ್ರಾಹಕರು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದರು.

    ಜಿಲ್ಲಾಡಳಿತ ರೈತರು ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಯಲ್ಲಿ ಮಾರಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಮತ್ತು ಮೂರು ದಿನಗಳ ನಂತರ ಗ್ರಾಹಕರಿಗೆ ಅನುಕೂಲವಾಗಲು ಸಂತೆಗೆ ಅವಕಾಶ ಮಾಡಿ ಕೊಟ್ಟಿದ್ದರಿಂದ ಸಂತೆ ಏರ್ಪಡಿಸಲಾಗಿತ್ತು.

    ಬೆಳಗಿನ 2-3 ಗಂಟೆಗಳ ಕಾಲ ತರಕಾರಿ, ದಿನಸಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ, ಹಳ್ಳಿಯಿಂದ ರೈತರು ತಾವು ಬೆಳೆದ ತರಕಾರಿ ಮಾರಾಟ ಮಾಡಲು ಬೆಳಗಿನ ಜಾವ ಬೇಗನೆ ಸೇರಿದ್ದರು. ಆದರೆ ಗ್ರಾಹಕರು ಮಾತ್ರ ಸಂಯಮದಿಂದ ವರ್ತಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ಖರೀದಿಸುತ್ತಿರುವುದು ಕಂಡುಬಂತು. ನಂತರ ಎಚ್ಚೆತ್ತುಕೊಂಡು ಪಪಂ ಮುಖ್ಯಾಧಿಕಾರಿ ತಾವೇ ಬಡಿಗೆ ಹಿಡಿದು ಜನರನ್ನು ಚದುರಿಸಲು ಪ್ರಯತ್ನಿಸಿದರು. ಪೊಲೀಸರು ಬರುವ ಹೊತ್ತಿಗೆ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳಿತ್ತು.

    ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಮಾತನಾಡಿ, ಪ್ರಾರಂಭದಲ್ಲಿ ಮಾರುಕಟ್ಟೆಯಲ್ಲಿ ಸ್ವಲ್ಪ ಹೊತ್ತು ಗದ್ದಲವಿತ್ತು. ನಂತರ ನಿಯಂತ್ರಣ ಮಾಡಲಾಗಿದೆ. ಅಸಹಾಯಕರಿಗೆ, ನಿರ್ಗತಿಕರಿಗೆ ತಾಲೂಕಿನ ರಾಯಬಾಗ ಮತ್ತು ಕುಡಚಿ ಪಟ್ಟಣದ ಕಲ್ಯಾಣ ಮಂಟಪಗಳಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts