More

    ಬಿಹಾರದಲ್ಲಿ ಮಿತ್ರಪಕ್ಷಗಳನ್ನು ಒಟ್ಟಾಗಿ ಕರೆದೊಯ್ಯಲಿದೆ ಬಿಜೆಪಿ: ಸುಳಿವು ನೀಡಿದ್ರು ಅಧ್ಯಕ್ಷ ಜೆಪಿ ನಡ್ಡಾ

    ನವದೆಹಲಿ: ಬಿಹಾರದಲ್ಲಿ ಎನ್​ಡಿಎ ಮಿತ್ರ ಪಕ್ಷಗಳ ನಾಯಕರು ಪರಸ್ಪರ ದೋಷಾರೋಪಣೆ, ಭಿನ್ನಮತಗಳನ್ನು ವ್ಯಕ್ತಪಡಿಸುತ್ತಿದ್ದಾಗ್ಯೂ, ಎನ್​ಡಿಎ ನೇತೃತ್ವವಹಿಸಿಕೊಂಡಿರುವ ಬಿಜೆಪಿ ಭಿನ್ನಮತ ಶಮನಗೊಳಿಸುವ ವಿಶ್ವಾಸದಲ್ಲಿದೆ. ಬಿಹಾರದಲ್ಲಿ ಸಮೀಪಿಸುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್​ (ಎನ್​ಡಿಎ)ನ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಸ್ಪರ್ಧಿಸಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸ್ಪಷ್ಟಪಡಿಸಿದ್ದಾರೆ.

    ಬಿಹಾರದ ಬಿಜೆಪಿ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ನಡ್ಡಾ, ಭಿನ್ನಮತಗಳು ಇರುವುದು ಸಹಜ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಎನ್​ಡಿಎ ಮಿತ್ರಪಕ್ಷಗಳೆಲ್ಲವೂ ಒಟ್ಟಾಗಿಯೆ ಚುನಾವಣೆ ಎದುರಿಸೋಣ. ಚುನಾವಣಾ ಆಯೋಗ ಚುನಾವಣೆ ಯಾವಾಗ ನಡೆಸಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಅದಕ್ಕೂ ಮೊದಲು ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕರೊನಾ ವೈರಸ್ ಸಂಕಷ್ಟದಲ್ಲಿ ಜನರಿಗೆ ಸ್ಪಂದಿಸುವ ಕೆಲಸವನ್ನು ಮುಂದುವರಿಸಬೇಕು ಎಂದರು.

    ಇದನ್ನೂ ಓದಿ: ‘ರಬ್ಬರ್ ಸ್ಟ್ಯಾಂಪ್ ಸಿಎಂ’ ಆಗಿದ್ದೆ ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ: ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ!

    ರಾಜ್ಯ ಸರ್ಕಾರದ ಆಡಳಿತಾವಧಿ ಅಕ್ಟೋಬರ್​-ನವೆಂಬರ್​ಗೆ ಮುಗಿಯಲಿದ್ದು, ಕೋವಿಡ್ -19 ಸೋಂಕು ದಿನೇದಿನೆ ಹೆಚ್ಚುತ್ತಿರುವ ಕಾರಣ ಚುನಾವಣೆ ಮುಂದೂಡಬೇಕು ಎಂಬ ಬೇಡಿಕೆ ರಾಜಕೀಯ ಪಕ್ಷಗಳ ನಾಯಕರು ಮುಂದಿಟ್ಟಿದ್ದಾರೆ. ವಿಪಕ್ಷ ಸ್ಥಾನದಲ್ಲಿರುವ ಆರ್​ಜೆಡಿ ಮತ್ತು ಬಿಜೆಪಿಯ ಮಿತ್ರ ಪಕ್ಷಗಳಲ್ಲಿ ಒಂದಾದ ಲೋಕ ಜನಶಕ್ತಿ ಪಕ್ಷಗಳ ನಾಯಕರು ಚುನಾವಣೆ ಮುಂದೂಡಬೇಕೆಂಬ ಬೇಡಿಕೆ ಇಟ್ಟವರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಜೆ.ಪಿ.ನಡ್ಡಾ ಅವರು ಚುನಾವಣೆ ಯಾವಾಗ ನಡೆಸಬೇಕು ಎಂಬ ನಿರ್ಣಯವನ್ನು ಚುನಾವಣಾ ಆಯೋಗ ತೆಗೆದುಕೊಳ್ಳುತ್ತದೆ. ಅದು ಆಯೋಗದ ವಿವೇಚನೆಗೆ ಬಿಟ್ಟ ವಿಚಾರ ಎಂದರು. (ಏಜೆನ್ಸೀಸ್)

    ಭಾರತದ ಮೇಲೆ ಜೈವಿಕಾಸ್ತ್ರ: ಪಾಕ್-ಚೀನಾ ನಡುವೆ ಮೂರು ವರ್ಷದ ರಹಸ್ಯ ಒಪ್ಪಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts