More

    ಉಪಚುನಾವಣೆ ಗೆಲುವಿನ ಸಂಭ್ರಮ; ಮತದಾರರು, ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ ಪ್ರಧಾನಿ

    ನವದೆಹಲಿ: ಬಿಹಾರ ಚುನಾವಣಾ ಗೆಲುವಿನ ಸಂಭ್ರಮದ ನಿಮಿತ್ತ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಹಾಗೇ ಬಿಹಾರದ ಜನತೆಗೆ ಧನ್ಯವಾದ ತಿಳಿಸಿದರು.
    ಈ 21ನೇ ಶತಮಾನದಲ್ಲಿ ಅಭಿವೃದ್ಧಿಯೇ ರಾಷ್ಟ್ರ ರಾಜಕಾರಣದ ಮೂಲಮಂತ್ರ ಎಂದು ಜನರೇ ನಿರ್ಧರಿಸಿದ್ದಾರೆ. ದೇಶದ ಅಭಿವೃದ್ಧಿಗಾಗಿ ಯಾವ ಪಕ್ಷ ನಿರಂತರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯೋ, ಅದನ್ನೇ ಜನರು ಗೆಲ್ಲಿಸುತ್ತಿದ್ದಾರೆ ಎಂದು ಮೋದಿಯವರು ಹೇಳಿದರು.

    ಮಹಿಳಾ ಮತದಾರರನ್ನು ಸೈಲೆಂಟ್​ ಮೆಜಾರಿಟಿ ಎಂದು ಕರೆದ ಪ್ರಧಾನಿಯವರು, ಈ ದೇಶದ ಮಹಿಳೆಯರು ಎಲ್ಲ ರೀತಿಯ ಚುನಾವಣೆಯಲ್ಲೂ ಬಿಜೆಪಿಯನ್ನು ಮೌನವಾಗಿಯೇ ಬೆಂಬಲಿಸುತ್ತಿದ್ದಾರೆ. ಉಜ್ವಲಾ ಯೋಜನೆಯಿಂದ ಹಿಡಿದು, ಗೃಹಕ್ಕೆ ಸಂಬಂಧಪಟ್ಟ ಎಲ್ಲ ಯೋಜನೆಗಳ ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. ಅವರೂ ಸಹ ಎನ್​ಡಿಎಗೇ ಮತ ಹಾಕುತ್ತಿದ್ದಾರೆ. ಬಿಹಾರದ ಈ ಉಪಚುನಾವಣೆಯಲ್ಲೂ ಅದೇ ಪುನರಾವರ್ತನೆಯಾಗಿದೆ ಎಂದರು.

    ಬಿಹಾರವಷ್ಟೇ ಅಲ್ಲದೆ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್​, ಮಧ್ಯಪ್ರದೇಶ್​, ಮಣಿಪುರ ಉಪಚುನಾವಣೆಗಳಲ್ಲೂ ಬಿಜೆಪಿ ಗೆದ್ದಿದ್ದು, ಸ್ಥಳೀಯ ಮುಖಂಡರು ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎನ್ನುತ್ತಿದ್ದಾರೆ. ಅದರಲ್ಲೂ ಬಿಹಾರ ಉಪಚುನಾವಣೆಯಲ್ಲಿ ಜಿದ್ದಾಜಿದ್ದಿ ಹೆಚ್ಚಾಗಿತ್ತು. ಎನ್​ಡಿಎ ವಿರುದ್ಧ ಮಹಾಘಟ್​ಬಂಧನ್​ ರಚಿತವಾಗಿತ್ತು. ಆದರೂ ಸಹ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ 125 ಕ್ಷೇತ್ರಗಳಲ್ಲಿ ಎನ್​ಡಿಎ ಗೆಲುವು ಸಾಧಿಸಿದೆ.

    ಅದರಲ್ಲೂ ಬಿಜೆಪಿ ಪಾಲಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಮುಖ್ಯ ಪ್ರಚಾರಕರಾಗಿದ್ದಾರೆ. ಬಿಹಾರದ ಮೂರು ಹಂತದ ಚುನಾವಣೆ ನಿಮಿತ್ತ ಮೋದಿಯವರು ಒಟ್ಟು 12 ರ್ಯಾಲಿಗಳನ್ನು ನಡೆಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts