More

    ‘ಮಹಾರಾಷ್ಟ್ರದಲ್ಲಿ ಹೆಚ್ಚಾಗ್ತಿದೆ ‘ಲವ್​ ಜಿಹಾದ್​’ ಕೇಸ್​ಗಳು’!

    ನವದೆಹಲಿ: ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ಕೇಸ್​ಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ಮಹಿಳೆಯರ ಮೇಲಿನ ಇತರೆ ದೌರ್ಜನ್ಯಗಳೂ ಮಿತಿಮೀರುತ್ತಿವೆ ಎಂಬ ಕಾರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಂಗಳವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ಆಯೋಗ ತಿಳಿಸಿದೆ.

    ಒಮ್ಮತದ ಅಂತರ್ ಧರ್ಮೀಯ ವಿವಾಹಕ್ಕೂ ಲವ್​ ಜಿಹಾದ್​ಗೂ ನಡುವಿನ ವ್ಯತ್ಯಾಸದ ಬಗ್ಗೆ ಗಮನಸೆಳೆದ ಅವರು, ಲವ್​ ಜಿಹಾದ್​ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳಾ ಸುರಕ್ಷತೆ ಕುರಿತು ಚರ್ಚಿಸಿದ ಅವರು, ರಾಜ್ಯದಲ್ಲಿ ಒನ್​ ಸ್ಟಾಪ್ ಸೆಂಟರ್​ಗಳನ್ನು ಮುಚ್ಚಿರುವ ಬಗ್ಗೆ ಹಾಗೂ ಕೋವಿಡ್ ಸೆಂಟರ್​ಗಳಲ್ಲಿ ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ, ಶೋಷಣೆ ನಡೆಯುತ್ತಿರುವ ಬಗ್ಗೆ ಗಮನ ಸೆಳೆದರು.

    ಇದನ್ನೂ ಓದಿ: ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ರೆಫರೆಂಡಂ: ಸುಪ್ರೀಂ ಕೋರ್ಟ್ ನಿರ್ದೇಶನ

    ರಾಜ್ಯದಲ್ಲಿ ಮಹಿಳಾ ಆಯೋಗ ಇದ್ದರೂ ಅದಕ್ಕೆ ಮುಖ್ಯಸ್ಥರಿಲ್ಲ. ಇದರಿಂದಾಗಿ ಬಹಳ ತೊಂದರೆಯಾಗಿದೆ. ಶೀಘ್ರವೇ ಖಾಲಿ ಇರುವ ಸ್ಥಾನವನ್ನು ಭರ್ತಿ ಮಾಡಬೇಕು. ರಾಜ್ಯದಲ್ಲಿ ಮುಖ್ಯಸ್ಥರಿಲ್ಲದ ಕಾರಣ 4,000 ದಷ್ಟು ದೂರುಗಳು ಇತ್ಯರ್ಥವಾಗದೇ ಹಾಗೆಯೇ ಉಳಿದುಕೊಂಡಿವೆ. ಮುಖ್ಯಸ್ಥರ ನೇಮಕವಾಗುವ ತನಕ ರಾಷ್ಟ್ರೀಯ ಮಹಿಳಾ ಆಯೋಗದ ಒಬ್ಬರು ಸದಸ್ಯರು ಇಲ್ಲಿಗೆ ತಿಂಗಳಿಗೊಮ್ಮೆ ಆಗಮಿಸಿ ಮಹಿಳಾ ಸುರಕ್ಷೆಯ ವಿಚಾರಗಳನ್ನು ದೂರು, ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ರಾಜ್ಯಪಾಲರಿಗೆ ತಿಳಿಸಿರುವುದಾಗಿ ಆಯೋಗ ಹೇಳಿದೆ. (ಏಜೆನ್ಸೀಸ್)

    ದೇಶದ ಮೊದಲ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್​ಗೆ ಶಂಕುಸ್ಥಾಪನೆ ನೆರವೇರಿಸಿದ್ರು ಸಚಿವ ಗಡ್ಕರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts