More

    ಭಾರತ ತಂಡಕ್ಕೆ ಕೋಚ್ ಆಗಲಿದ್ದಾರೆಯೇ ಕನ್ನಡಿಗ ರಾಹುಲ್?

    ನವದೆಹಲಿ: ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖ್ಯಸ್ಥ ಹಾಗೂ ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​, ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡಕ್ಕೆ ಕೋಚ್​ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ. ಈ ಕುರಿತು ಬಿಸಿಸಿಐನಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಎನ್​ಸಿಎ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕ ರಾಹುಲ್​ ದ್ರಾವಿಡ್​ ಭಾರತ ಎ ಹಾಗೂ 19 ವಯೋಮಿತಿ ತಂಡದೊಂದಿಗೆ ಪ್ರವಾಸ ಕೈಗೊಳ್ಳುವುದನ್ನು ನಿಲ್ಲಿಸಿದ್ದರು. ತಂಡದ ಮುಖ್ಯಕೋಚ್​ ರವಿ ಶಾಸ್ತ್ರಿ ಇಂಗ್ಲೆಂಡ್​ ಪ್ರವಾಸದಲ್ಲಿರುವ ಕಾರಣ ಭಾರತದ ಮತ್ತೊಂದು ತಂಡಕ್ಕೆ ಎರಡನೇ ಸ್ಥರದ ಕೋಚ್​ ನೇಮಿಸಲು ಬಿಸಿಸಿಐ ಒಲವು ತೋರಿತ್ತು. ರಾಹುಲ್​ ದ್ರಾವಿಡ್​ ತಂಡದೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಮುಂಬೈ ಫಸ್ಟ್ ಸ್ಟಾಪ್ ಎಂದು ಚೆನ್ನೈನಿಂದ ಹೊರಟ ಟೀಮ್ ಹೇಳಿದ್ಯಾಕೆ..!

    ಎನ್​ಸಿಎಯಲ್ಲಿ ಬೌಲಿಂಗ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿರುವ ಪರಾಸ್​ ಮಾಂಬ್ರೆ ತಂಡದ ಸಹಾಯಕ ಸಿಬ್ಬಂದಿ ಬಳಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಶ್ರೀಲಂಕಾದಲ್ಲಿ ಮುಂದಿನ ಜುಲೈನಲ್ಲಿ ಭಾರತ ತಂಡ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡುವ ಸಾಧ್ಯತೆಗಳಿದ್ದು, ಟೂನಿರ್ಯ ವೇಳಾಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

    ಇದನ್ನೂ ಓದಿ: ಬ್ರಿಟನ್​ಗೆ ತೆರಳಲು ಮಗನಿಗೆ ವೀಸಾ ಕೇಳಿದ ಸ್ಟಾರ್​ ಟೆನಿಸ್​ ಪಟು ಸಾನಿಯಾ ಮಿರ್ಜಾ

    ಬಹುತೇಕ ಸ್ಟಾರ್​ ಹಾಗೂ ಅನುಭವಿ ಆಟಗಾರರು ಇಂಗ್ಲೆಂಡ್​ ಪ್ರವಾಸದಲ್ಲಿರುವ ಕಾರಣ ಲಂಕಾ ಪ್ರವಾಸಕ್ಕೆ ಯುವಕರಿಗೆ ಹೆಚ್ಚು ಅವಕಾಶ ನೀಡುವ ಸಾಧ್ಯತೆಗಳಿವೆ. ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ, ಅನುಭವಿ ಶಿಖರ್​ ಧವನ್​ ಹಾಗೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡರೆ ಶ್ರೇಯಸ್​ ಅಯ್ಯರ್​, ಈ ಮೂವರಲ್ಲಿ ಒಬ್ಬರಿಗೆ ನಾಯಕತ್ವ ಒಲಿಯುವ ಸಾಧ್ಯತೆಗಳಿವೆ.

    ಕೋವಿಡ್​ನಿಂದ ವೇಗಿ ಪ್ರಸಿದ್ಧ ಕೃಷ್ಣ ಗುಣಮುಖ, ಇಂಗ್ಲೆಂಡ್​ ಪ್ರವಾಸಕ್ಕೆ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts