More

    ಮುಂಬೈ ಫಸ್ಟ್ ಸ್ಟಾಪ್ ಎಂದು ಚೆನ್ನೈನಿಂದ ಹೊರಟ ಟೀಮ್ ಹೇಳಿದ್ಯಾಕೆ..!

    ಚೆನ್ನೈ: ಭಾರತ ತಂಡದ ಜೂನ್​ 2 ರಂದು ಇಂಗ್ಲೆಂಡ್​ ಪ್ರವಾಸಕ್ಕೆ ಹೊರಡುವ ಸಿದ್ಧತೆಯಲ್ಲಿದೆ. ಇಂಗ್ಲೆಂಡ್​ಗೆ ತೆರಳುವುದಕ್ಕೂ ಮುನ್ನ ಭಾರತ ತಂಡದ ಆಟಗಾರರು ತವರಿನಲ್ಲೇ 14 ದಿನಗಳ ಕಾಲ ಕ್ವಾರಂಟೈನಲ್ಲಿ ಇರಬೇಕಾಗಿದೆ. ಹೀಗಾಗಿ ಮುಂಬೈ ನಗರದ ಆಟಗಾರರು, ಕೋವಿಡ್​ನಿಂದ ಚೇತರಿಸಿಕೊಂಡಿರುವ ಕರ್ನಾಟಕದ ಪ್ರಸಿದ್ಧ ಕೃಷ್ಣ ಹಾಗೂ ವೃದ್ಧಿಮಾನ್​ ಸಾಹ ಹೊರತುಪಡಿಸಿ ಉಳಿದ ಎಲ್ಲ ಆಟಗಾರರು ಬುಧವಾರ ಮುಂಬೈಗೆ ಆಗಮಿಸಿದರು. ಚೆನ್ನೈ, ಹೈದರಾಬಾದ್​ ಹಾಗೂ ನವದೆಹಲಿಯಿಂದ ಮೂರು ತಂಡಗಳಾಗಿ ಮುಂಬೈಗೆ ಆಗಮಿಸಿದವು. ಪುರುಷರ ತಂಡದೊಂದಿಗೆ ಮಹಿಳಾ ತಂಡ ಕೂಡ ಲಂಡನ್​ಗೆ ಒಟ್ಟಿಗೆ ತೆರಳುತ್ತಿರುವುದರಿಂದ ಮಹಿಳಾ ಆಟಗಾತಿರ್ಯರು ಮುಂಬೈಗೆ ಆಗಮಿಸಿದರು. ಕನ್ನಡಿಗರಾದ ಕೆಎಲ್​ ರಾಹುಲ್​, ಮಯಾಂಕ್​ ಅಗರ್ವಾಲ್​, ಆರ್​.ಅಶ್ವಿನ್​, ವಾಷಿಂಗ್ಟನ್​ ಸುಂದರ್​, ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್​ ಒಂದೇ ವಿಮಾನದಲ್ಲಿ ಮುಂಬೈನತ್ತ ಹೊರಟರು.

    ಇದನ್ನೂ ಓದಿ: ಬ್ರಿಟನ್​ಗೆ ತೆರಳಲು ಮಗನಿಗೆ ವೀಸಾ ಕೇಳಿದ ಸ್ಟಾರ್​ ಟೆನಿಸ್​ ಪಟು ಸಾನಿಯಾ ಮಿರ್ಜಾ

    ಆಟಗಾರರು ಮುಂಬೈಗೆ ತೆರಳುತ್ತಿರುವ ಫೋಟೋವನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಪ್ರಕಟಿಸಿದೆ. ಇಂಗ್ಲೆಂಡ್​ಗೆ ತೆರಳುವುದಕ್ಕೂ ಮುನ್ನ ಸ್ಟಾಪ್ ​ಎಂದು ಬರೆಯಲಾಗಿದೆ. ಮುಂಬೈ ಆಟಗಾರರಾದ ರೋಹಿತ್​ ಶರ್ಮ, ಅಜಿಂಕ್ಯ ರಹಾನೆ ಮೇ 24 ರಂದು ತಂಡ ಕೂಡಿಕೊಳ್ಳಲಿದ್ದು, ಅವರೊಂದಿಗೆ ಪ್ರಸಿದ್ಧ ಕೃಷ್ಣ ಹಾಗೂ ವೃದ್ಧಿಮಾನ್​ ಸಾಹ ಕೂಡ ಅಂದೇ ತಂಡ ಸೇರಲಿದ್ದಾರೆ.

    ಇದನ್ನೂ ಓದಿ: ವೆಸ್ಟ್​ ಇಂಡೀಸ್​ ತಂಡಕ್ಕೆ ಕ್ರಿಸ್​ ಗೇಲ್​, ಆಂಡ್ರೆ ರಸೆಲ್​, ಹೆಟ್ಮೆಯರ್​ ವಾಪಸ್​…,

    ಜೂನ್​ 2 ರಂದು ಇಂಗ್ಲೆಂಡ್​ಗೆ ತೆರಳಲಿರುವ ಭಾರತ ತಂಡಗಳು ಅಲ್ಲಿಯೂ 10 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಲಿವೆ. ಬಳಿಕ ಭಾರತ ಪುರುಷರ ತಂಡ ಜೂನ್​ 18 ರಿಂದ ಸೌಥಾಂಪ್ಟನ್​ನಲ್ಲಿ ನ್ಯೂಜಿಲೆಂಡ್​ ತಂಡವನ್ನು ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದಲ್ಲಿ ಎದುರಿಸಲಿದೆ. ಬಳಿಕ ಇಂಗ್ಲೆಂಡ್​ ಎದುರು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಇದೇ ವೇಳೆ ಭಾರತ ಮಹಿಳಾ ತಂಡ ಕೂಡ 7 ವರ್ಷಗಳ ಬಳಿಕ ಟೆಸ್ಟ್​ ಪಂದ್ಯವನ್ನಾಡಲಿದೆ. ಬಳಿಕ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯಲ್ಲಿ ಆಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts