More

    ನಾಯಕತ್ವದ ಗುಣ ಬೆಳೆಯಲು ಶಾಲಾ ಸಂಸತ್ ಸಹಕಾರಿ

    ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಉತ್ಸವಾಂಬ ಪ್ರೌಢ ಶಾಲೆಯಲ್ಲಿ ಗುರುವಾರ ಶಾಲಾ ಸಂಸತ್ ರಚನಾ ಪ್ರಕ್ರಿಯೆಗೆ ಚುನಾವಣೆ ನಡೆಯಿತು.

    ಚುನಾವಣೆ ಪ್ರಕ್ರಿಯೆ ಮಕ್ಕಲು ಮಾಹಿತಿ ತಿಳಿದುಕೊಂಡರು

    ಶಾಲಾ ವಿದ್ಯಾರ್ಥಿಗಳು ತಮ್ಮ ಅಭ್ಯರ್ಥಿ ಗೆಲ್ಲಿಸುವ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಕ್ಕಳ ಸಂಸತ್ ಚುನಾವಣೆ ಅಧಿಸೂಚನೆ, ವೇಳಾಪಟ್ಟಿ ಪ್ರಕಟ, ನೀತಿ ಸಂಹಿತೆ ಜಾರಿ, ಮತದಾರರ ಸೇರ್ಪಡೆ ವಿಶೇಷ ಅಭಿಯಾನ, ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂದಕ್ಕೆ ಪಡೆಯುವುದು, ಮತದಾನ ಮಹತ್ವ, ಮತ ಎಣಿಕೆ ಬಗ್ಗೆ ಮಕ್ಕಳು ಮಾಹಿತಿ ತಿಳಿದುಕೊಂಡರು.
    ಶಿಕ್ಷಕ ಸದಾಶಿವ ಮಾತನಾಡಿ, ಶಾಲಾ ಸಾಂಸ್ಕೃತಿಕ, ಕ್ರೀಡಾ, ಶಾಲೆ ಸ್ವಚ್ಛತೆ, ಊಟ ಇತರ ಚಟುವಟಿಕೆಗಳಲ್ಲಿನ ನ್ಯೂನತೆಗಳನ್ನು ವಿದ್ಯಾರ್ಥಿಗಳೇ ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ಚುನಾವಣಾ ಮೂಲಕ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು ಶಾಲಾ ಸಂಸತ್ ಚುನಾವಣೆ ಸಹಕಾರಿಯಾಗುತ್ತದೆ ಎಂದರು.

    ಇದನ್ನೂ ಓದಿ: ಮೇಖಳಿಯಲ್ಲಿ ಶಾಲಾ ಸಂಸತ್ ರಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts