More

    ಮೇಖಳಿಯಲ್ಲಿ ಶಾಲಾ ಸಂಸತ್ ರಚನೆ

    ಮೇಖಳಿ: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚನೆಯ ಚುನಾವಣೆ ಪ್ರಕ್ರಿಯೆ ಗುರುವಾರ ಜರುಗಿತು. ಚುನಾವಣಾ ಆಯೋಗದ ಮಾದರಿಯಲ್ಲಿ ವಿದ್ಯಾರ್ಥಿನಿಯರು ಮತ ಚಲಾಯಿಸಲು ಅನುಕೂಲವಾಗುವಂತೆ ಮಾಡಿದ್ದ ಸಖಿ ಮತಗಟ್ಟೆ ಗಮನ ಸೆಳೆಯಿತು. ಇದು ಮಹಿಳಾ ಮತದಾನದ ಮಹತ್ವ ಬಿಂಬಿಸಿತು. ಪ್ರಭಾರಿ ಮುಖ್ಯ ಶಿಕ್ಷಕಿ
    ವೀರಶ್ರೀ ಸಮಾಜೆ ರಿಬ್ಬನ್ ಕತ್ತರಿಸುವ ಮೂಲಕ ಮತದಾನಕ್ಕೆ ಚಾಲನೆ ನೀಡಿದರು. ಚಿತ್ರಕಲಾ ಶಿಕ್ಷಕಿ ಸರಸ್ವತಿ ಪತ್ತಾರ ಚಿತ್ರ ಬಿಡಿಸುವ ಮೂಲಕ ಸಖಿ ಮತಗಟ್ಟೆ ಆಕರ್ಷಕಗೊಳಿಸಿದರು. ವಿದ್ಯಾರ್ಥಿಗಳು ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಿ ಸಂತಸಪಟ್ಟರು. ಎಸ್.ಬಿ. ಭಜಂತ್ರಿ, ಎಸ್.ಜಿ. ಖೋತ, ಎಂ.ಕೆ. ಹಮ್ಮನ್ನವರ,
    ಯು.ಡಿ. ಖೋತ, ಎಂ.ಎಚ್. ಪಾಟೀಲ, ಎಂ.ಬಿ. ಶಿಂಧೆ, ಆರತಿ ಕಾಂಬಳೆ, ಸುನಿತಾ ನಾಯಿಕ, ಆನ್ನಪೂರ್ಣಾ ಅಳಗೋಡಿ, ಸರಸ್ವತಿ ಅಲಕನೂರೆ, ಮಾಲತಿ ಪರಾಂಜಪೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts