More

    ಎಂದೂ ಮಾಡಿರದ ಪಾತ್ರ ಮಾಡಲು ಸಜ್ಜಾಗುತ್ತಿದ್ದಾರೆ ನವಾಜುದ್ದೀನ್​ ಸಿದ್ಧೀಕಿ

    ಮುಂಬೈ: ನವಾಜುದ್ದೀನ್​ ಸಿದ್ಧೀಕಿ ಅಂದ ತಕ್ಷಣ ಅವರ ನಟನೆಯ ಸಿನಿಮಾಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಒಂದೊಂದು ಚಿತ್ರದಲ್ಲಿ ಒಂದೊಂದು ರೀತಿಯ ಪಾತ್ರವನ್ನು ನಿಭಾಯಿಸುತ್ತ ವಿಭಿನ್ನತೆಯನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಇದೀಗ ಮತ್ತೊಂದು ಹೊಸ ಪಾತ್ರಪೋಷಣೆಗೆ ನವಾಜ್​ ಸಿದ್ಧರಾಗುತ್ತಿದ್ದಾರೆ.

    ಇದನ್ನೂ ಓದಿ:  ‘ಐದು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್​ ಮಾಡಿದ್ದೇನೆ- ಬೇಕೆಂದಾಗ ಮಗು ಪಡೆಯುವೆ’

    ಹೌದು, ಇಲ್ಲಿಯವರೆಗೂ ನವಾಜುದ್ದೀನ್​ ದೈಹಿಕವಾಗಿ ಬಲಶಾಲಿಯಾಗಿ ಕಾಣಿಸಿಕೊಂಡಿಲ್ಲ. ಇದೀಗ ಉಮೇಶ್​ ಶುಕ್ಲಾ ನಿರ್ದೇಶನ ಮಾಡಲಿರುವ ಸಿನಿಮಾಕ್ಕಾಗಿ ದೇಹವನ್ನು ಹುರಿಗೊಳಿಸಿಕೊಳ್ಳಲಿದ್ದಾರೆ. ಮಾಸ್​ ಅವತಾರದಲ್ಲಿ ಬಾಡಿ ಬಿಲ್ಡ್ ಮಾಡಿಕೊಂಡು ಹಿಂದೆಂದೂ ಕಾಣಿಸದ ರೀತಿಯಲ್ಲಿ ಅವರನ್ನು ತೋರಿಸಲಿದ್ದಾರಂತೆ ನಿರ್ದೇಶಕರು.

    ಶುಕ್ಲಾ ನಿರ್ದೇಶನದ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ನವಾಜುದ್ದೀನ್​ ಎದುರಾಗಲಿದ್ದಾರೆ. ಅಷ್ಟೇ ಅಲ್ಲ, ಆ ಪಾತ್ರ ಅಷ್ಟೇ ಖಡಕ್​ ಆಗಿರುವುದರಿಂದ, ಆ್ಯಕ್ಷನ್​ ಸನ್ನಿವೇಶಗಳೂ ಸಿನಿಮಾದಲ್ಲಿ ಹೆಚ್ಚಿರುವ ಕಾರಣ, ದೇಹವನ್ನು ಹುರಿಗೊಳಿಸಿಕೊಳ್ಳಲಿದ್ದಾರಂತೆ.

    ಇದನ್ನೂ ಓದಿ: ‘ಕೇಸ್ ಹಿಂಪಡೆಯಿರಿ, ಇಲ್ಲದಿದ್ದಲ್ಲಿ ನಾನೂ ಪ್ರಕರಣ ದಾಖಲಿಸುವೆ’; ಅಕ್ಷಯ್​ ವಿರುದ್ಧ ಯೂಟ್ಯೂಬರ್ ಆಕ್ರೋಶ

    ಸದ್ಯಕ್ಕೆ ಕಥೆ ಲಾಕ್​ ಆಗಿದ್ದು, ಇತ್ತ ನವಾಜುದ್ದೀನ್​ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರಂತೆ. ಪಾತ್ರಕ್ಕಾಗಿ ದೇಹವನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದು, 2021ರ ಮಧ್ಯಭಾಗದಲ್ಲಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ‘ದಯಮಾಡಿ ನನ್ನ ಫೋಟೋಗಳನೆಲ್ಲ ಡಿಲಿಟ್ ಮಾಡಿ’; ದಂಗಲ್​ ನಟಿ ಝೈರಾ ವಸೀಮ್​ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts