More

    ಅಪಪ್ರಚಾರ ಮಾಡಿದ್ದಕ್ಕೆ ಹೆಂಡತಿಗೆ ನವಾಜುದ್ದೀನ್​ ಏನ್ಮಾಡಿದ್ರು ಗೊತ್ತಾ?

    ಅವ್ರು, ಮಕ್ಳನ್ನ ಸರಿಯಾಗಿ ನೋಡಿಕೊಳ್ತಿಲ್ಲ, ತಿಂಗಳ ನಿರ್ವಹಣೆಗೆ ನಮಗೆ ದುಡ್ಡು ಕೊಡುತ್ತಿಲ್ಲ, ಮಕ್ಕಳ ಶಾಲೆ ಫೀಸು ಕೊಡುತ್ತಿಲ್ಲ …
    ಹೀಗೆ ಇನ್ನೂ ಏನೇನೋ ಆರೋಪಗಳನ್ನು ನವಾಜುದ್ಧೀನ್​ ಸಿದ್ಧೀಕಿ ಮೇಲೆ ಅವರ ಪತ್ನಿ ಆಲಿಯಾ ಮಾಡಿದ್ದರು. ನವಾಜುದ್ದೀನ್​ ದುಡ್ಡು ಕೊಡದೇ ಆಟ ಆಡಿಸುತ್ತಿರುವುದರಿಂದ, ತಾನು ತನ್ನ ಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದಾಗಿ ಆರೋಪ ಮಾಡಿದ್ದರು.

    ಇದನ್ನೂ ಓದಿ: ಇಷ್ಟದ ತಿಂಡಿ, ಜಿಟಿಜಿಟಿ ಮಳೆ ಮತ್ತು ಕಲ್ಪನಾ; ನಟಿ ಹರಿಪ್ರಿಯಾ ಬಾಲ್ಯ ಹೀಗಿತ್ತು …

    ಆಲಿಯಾ ಅವರ ಈ ಆರೋಪಗಳಿಗೆ ನವಾಜುದ್ದೀನ್​ ಇದೀಗ ಪ್ರತ್ಯುತ್ತರ ಕೊಟ್ಟಿದ್ದಾರೆ. ತನ್ನ ಬಗ್ಗೆ ಅಪಪ್ರಚಾರ ಮಾಡಿ, ಮಾನನಷ್ಟ ಮಾಡುತ್ತಿರುವುದಕ್ಕೆ ಅವರಿಗೆ ತಮ್ಮ ಲಾಯರ್​ಗಳ ಮೂಲಕ ನೋಟೀಸ್​ ಕಳುಹಿಸಿದ್ದಾರೆ.

    ಇದಕ್ಕೂ ಮುನ್ನ, ನವಾಜುದ್ದೀನ್​ರಿಂದ ಡೈವೋಸ್​ರ್ ಕೋರಿ, ಅವರು ಪತ್ನಿ ಆಲಿಯಾ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಅಷ್ಟೇ ಅಲ್ಲ, ಮೇ 06ರಂದು ನವಾಜುದ್ದೀನ್​ಗೆ ಕಳುಹಿಸಲಾಗಿತ್ತು. ಮುಂದಿನ ವ್ಯವಹಾರಗಳು ಕೋರ್ಟ್​​ನಲ್ಲಿ ನಡೆಯಬಹುದು ಎಂದುಕೊಂಡರೆ ಸುಳ್ಳಾಯಿತು. ಕ್ರಮೇಣ, ನವಾಜುದ್ದೀನ್​ ಮೇಲೆ ಹಲವು ಆರೋಪಗಳನ್ನು ಆಲಿಯಾ ಹೊರಿಸಿದರು. ನವಾಜುದ್ದೀನ್​, ತಮ್ಮನ್ನೆಲ್ಲಾ ಹೇಗೆ ನಡೆಸಿಕೊಂಡರು ಎಂಬುದನ್ನು ಬಹಿರಂಗಪಡಿಸುತ್ತಾ ಹೋದರು.

    ಇದನ್ನೂ ಓದಿ: ಚೀನಾ ವಿರುದ್ಧ ಸಮರ ಸಾರಿದ ‘ಕ್ವೀನ್​’: ಗಾಂಧೀಜಿಯವರ ಮಾತು ಮರೆತುಬಿಟ್ಟಿರಾ ಎಂದಿದ್ದೇಕೆ ಕಂಗನಾ?

    ಸಾಲದ್ದಕ್ಕೆ ಕೆಲವು ದಿನಗಳ ಹಿಂದೆ, ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ನವಾಜುದ್ದೀನ್​ ನಿರ್ವಹಣೆಗೆ ದುಡ್ಡು ಕೊಡುತ್ತಿಲ್ಲ ಎಂದು ಹೇಳಿದ್ದರು. ಇದರಿಂದಾಗಿ ಮಕ್ಕಳ ಶಾಲೆಯ ಫೀಸು, ಇ.ಎಂ.ಐಗಳನ್ನು ಭರಿಸಲಾಗುತ್ತಿಲ್ಲ ಎಂದು ಆರೋಪ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ನವಾಜುದ್ದೀನ್​ ತಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ, ಆಲಿಯಾಗೆ ನೋಟೀಸ್​ ಕಳುಹಿಸಿದ್ದಾರೆ. ಈ ನೋಟೀಸ್​ಗೆ ಆಲಿಯಾ ಉತ್ತರಿಸಬೇಕಾಗಿದ್ದು, ಏನು ಉತ್ತರ ನೀಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

    ಒಟ್ಟಾರೆ, ನವಾಜುದ್ದೀನ್​ ಮತ್ತು ಆಲಿಯಾ ಡೈವೋಸ್​ರ್ ಪ್ರಕರಣವು, ದಿನಂದಿಂದ ದಿನಕ್ಕೆ ಚಿತ್ರ-ವಿಚಿತ್ರ ತಿರುವುಗಳನ್ನು ಪಡೆಯುತ್ತಿದ್ದು, ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ.

    ವರ್ಮಾ ನಿರ್ದೇಶನದ ಇನ್ನೊಂದು ಸಿನಿಮಾ ಇಂದು ಬಿಡುಗಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts