More

    ಮಾಧ್ಯಮ ವರದಿಗೆ ಸಿಡಿಮಿಡಿಗೊಂಡು ಸ್ಯಾಂಡಲ್​ವುಡ್​ ಕರಾಳ ಮುಖ ಬಿಚ್ಚಿಟ್ಟ ಜಗ್ಗೇಶ್​!

    ಬೆಂಗಳೂರು: ದರ್ಶನ್​ ಅಭಿಮಾನಿಗಳ ಜತೆ ನಡೆದ ಘರ್ಷಣೆ ಸಂಬಂಧ ಖಾಸಗಿ ಪತ್ರಿಕೆ ಹಾಗೂ ಮಾಧ್ಯಮ ಒಂದರ ವರದಿಯ ಮೇಲೆ ಆಕ್ರೋಶಗೊಂಡಿರುವ ನವರಸನಾಯಕ ಜಗ್ಗೇಶ್​ ಟ್ವೀಟ್​ ಮೂಲಕ ಭಾರಿ ಆಕ್ರೋಶ ಹೊರಹಾಕಿದ್ದಾರೆ.

    ನಿನ್ನೆ ಬನ್ನೂರಿನಲ್ಲಿ ದರ್ಶನ್​ ಅಭಿಮಾನಿಗಳ ಜತೆಯಲ್ಲಿ ನಡೆದಂತಹ ಘಟನೆ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನಾನೇಕೆ ಹಿಂದೆ-ಮುಂದೆ ಮಾತನಾಡಲಿ, ನಾನೊಬ್ಬ ಆರ್​ಎಸ್​ಎಸ್​ ಕಾರ್ಯಕರ್ತನಾಗಿದ್ದು, ನಮ್ಮ ಅಂಶಗಳು ಏನೇನು ಇದೆಯೋ ಅದರ ಬಗ್ಗೆ ಮಾತನಾಡಬೇಕಿರುವುದು ನನ್ನ ಧರ್ಮ. ನಮ್ಮ ಪತ್ರಿಕೆ ಬಗ್ಗೆ ಮಾತನಾಡಿದಾಗ ಸ್ವಾಭಾವಿಕವಾಗಿ ಬೇರೆಯವರ ಮನಸ್ಸಿಗೆ ನೋವಾಗಬಹುದು.

    ಇದನ್ನೂ ಓದಿರಿ: ನಂಗೆ ಬಿಟ್ಟು ನೀನ್ಯಾಕೆ ಬಂದ್ಯಲೆ… ನಾ ಬಂದ್ರೆ ನಿಂಗೆ ಏನಾಯ್ತಲೇ… ಇಬ್ಬರು ಚಾಲಕರ ಜಗಳದಲ್ಲಿ ಬಸ್ಸಾಯ್ತು ಸೀಜ್​!

    ನಾನು ಸಿನಿಮಾ ರಂಗದಲ್ಲಿ ಸುಮಾರು 40 ವರ್ಷ ಕೆಲಸ ಮಾಡಿದ್ದೇನೆ. ಬಹುತೇಕ ಎಲ್ಲ ಮಾಧ್ಯಮ ಮಿತ್ರರಿಗೆ ನಾನೇನು ಎಂದು ಗೊತ್ತಿದೆ. ಆದರೆ, ಒಂದು ವಿಚಾರವನ್ನು ಇಟ್ಟುಕೊಂಡು ನನ್ನ ತೇಜೋವಧೆ ಮಾಡಲಾಗುತ್ತಿದೆ. ನಾನೇನು ದರೋಡೆ ಅಥವಾ ಕಳ್ಳತನ ಮಾಡಿದ್ದೀನಾ? ಅಥವಾ ಯಾರಿಗಾದ್ರೂ ಹೆದರುಕೊಂಡು ಬಚ್ಚಿಟ್ಟುಕೊಂಡಿದ್ದೀನಾ? ನಿನ್ನೆ ನನ್ನ ಬಳಿ ಬಂದ ಹುಡುಗರ ಹತ್ತಿರ ಅವರ ಮುಂದೆಯೇ ಕುಳಿತು ಮಾತನಾಡಿದ್ದೇನೆ. ನಾನೇನು ಓಡಿ ಹೋಗಲಿಲ್ಲ. ನಿನ್ನೆ ರಾತ್ರಿಯು ಸಹ ಅವರೆಲ್ಲ ನನ್ನ ಬಳಿ ಬಂದು ಮಾತನಾಡಿದ್ದಾರೆ.

    ಯಾವುದೋ ಒಂದು ವಿಚಾರ ಇಟ್ಟುಕೊಂಡು ಜಗ್ಗೇಶ್​ಗೆ ಅಪಮಾನ ಮಾಡಿಬಿಟ್ಟೆವು ಅಂದುಕೊಂಡರೆ ಅದರಿಂದ ನನಗೆ ಯಾವ ನಷ್ಟವೂ ಇಲ್ಲ. ನಾನೇನು ಯಾರಿಗೂ ವಂಚನೆ, ಕೊಲೆ, ದರೋಡೆ ಮಾಡುವಂತಹ ಮಾತುಗಳನ್ನು ಆಡಲಿಲ್ಲ. ಕನ್ನಡಕ್ಕೆ ದ್ರೋಹ ಎಸಗುವಂತಹ ಮಾತುಗಳನ್ನು ಆಡಲಿಲ್ಲ. ನಾನು ಖಾಸಗಿಯಾಗಿ ಮಾತನಾಡಿದ ವಿಚಾರವನ್ನು ಸಾರ್ವಜನಿಕವಾಗಿ ಪ್ರಚಾರ ಮಾಡುವ ಒಂದು ಕುತಂತ್ರ ವ್ಯವಸ್ಥೆ ಇದೆ ಎಂದ ಮಾತ್ರಕ್ಕೆ ನಾನು ಹೆದರಿ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ.

    ನಾನು ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಿದಾಗ ನೀವು ಬಕೆಟ್​ ಹಿಡಿಯುತ್ತಿದ್ದೀರಲ್ಲ ಅವರ್ಯಾರು ಹುಟ್ಟಿರಲಿಲ್ಲ. 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು. ರಾಜ್​ಕುಮಾರ್​, ವಿಷ್ಣುವರ್ಧನ್​, ಅಂಬರೀಷ್​, ಪ್ರಭಾಕರ್​, ಶಂಕರ್​ನಾಗ್​ ಮತ್ತು ಅನಂತ್​ನಾಗ್​ ಜತೆ ಹೆಜ್ಜೆ ಹಾಕಿದವನು ನಾನು. ಅವರೊಂದಿಗೆ ನಕ್ಕು, ನಲಿದು, ಅತ್ತು ಬದುಕಿದವನು ನಾನು. ನಾನಿಂದು ಈ ಜಾಗದಲ್ಲಿ ನಿಂತಿದ್ದೇನೆಂದರೆ ನಿಮ್ಮಿಂದ ಅಲ್ಲ. ಕನ್ನಡಿಗರಿಂದ, ಅವರ ಪ್ರೀತಿಯಿಂದ. ಇಂದಿನವರೆಗೂ ನನ್ನ ಎಡಗಾಲು ಸಹ ಬೇರೆ ಭಾಷೆಗೆ ಇಟ್ಟಿಲ್ಲ. ಯಾವ ಭಾಷೆಯನ್ನು ಕಟ್ಟಿಕೊಂಡ ಏನು ಆಗಬೇಕಿಲ್ಲ.

    ಮಾಧ್ಯಮ ಅಂದರೆ ತಂದೆ ಸಮಾನದಲ್ಲಿರಬೇಕು. ನಮ್ಮ ತಪ್ಪುಗಳನ್ನು ತಿದ್ದಬೇಕು. ಇಲ್ಲಸಲ್ಲದನ್ನು ಹೇಳಬಾರದು. ನಿನ್ನೆ ನನಗೆ ಯಾರಾದರೂ ಹೊಡೆಯಲು ಬಂದಿದ್ದರಾ? ಕರ್ನಾಟಕದಲ್ಲಿ ಯಾರಿಗಾದರೂ ನನ್ನ ಮೈ ಮುಟ್ಟಲು ಆಗುತ್ತಾ? ಏನು ಮಾತಾಡ್ತೀರಾ ನೀವು ಎಂದು ಕಿಡಿಕಾರಿದು.

    ಇದನ್ನೂ ಓದಿರಿ: ಡಿಮಾರ್ಟ್​ನಿಂದ ಮನೆಗೆ ಮರಳಿದ ಮಹಿಳೆಗೆ ಶಾಕ್​: ಪತಿಯ ಸ್ಥಿತಿ ಕಂಡು ಕುಸಿದುಬಿದ್ದ ಪತ್ನಿ!

    ಯಾವ ಒಬ್ಬ ನಟ, ಅವನ ಅಭಿಮಾನಿಗಳು ನನ್ನತ್ರ ಬರುವುದಕ್ಕೆ ಸಾಧ್ಯವಿಲ್ಲ. ಇವತ್ತಿಗೂ ಹೇಳುತ್ತಿದ್ದೇನೆ ನನ್ನ ಪಾಡಿಗೆ ನನ್ನನ್ನು ಬಿಡಿ ಹೇಗೋ ಕನ್ನಡ ಕೆಲಸ ಮಾಡಿಕೊಂಡು ಹೋಗುತ್ತೇನೆಂದರು. ಅಲ್ಲದೆ, ಇಂದು ಕನ್ನಡ ಸಿನಿಮಾ ಕತೆ ಏನಾಗಿದೆ ಗೊತ್ತಾ ನಿಮಗೆ, ಒಬ್ಬ ನಟನ ಸಿನಿಮಾ ಹಿಟ್​ ಆಯ್ತು ಅಂದ್ರೆ ಇನ್ನೊಬ್ಬ ನಟ ಇನ್ನೊಂದು ಹುನ್ನಾರ ಮಾಡ್ತಾನೆ. ನಾವು ಒಗ್ಗಟ್ಟಾಗಿ ಬೆಳೆಯೋಣ, ನಾವು ಕನ್ನಡದವರು, ನಮ್ಮ ಸಿನಿಮಾ ಎಂಬ ಭಾವನೆ ಯಾರಲ್ಲೂ ಬಂದಿಲ್ಲ. ನಾನೊಬ್ಬನೆ ಬೆಳೆಯಬೇಕು. ನಾನೊಬ್ಬನೆ ಉದ್ದಾರವಾಗಬೇಕು. ಇನ್ನು ಯಾರು ಬರಬಾರದು ಎಂಬ ಸ್ಥಿತಿ ಬರುತ್ತಿದೆ. ಮುಂದೆ ಒಂದು ದಿನ ಈ ಸ್ಥಿತಿ ರಾಜಕೀಯದಲ್ಲಿರುವಂತೆಯೇ ಸಿನಿಮಾ ರೌಡಿಸಂಗೆ ಕಾರಣವಾಗುತ್ತದೆ ಎಂದು ಜಗ್ಗೇಶ್​ ಅಸಮಾಧಾನ ಹೊರಹಾಕಿದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts