ಸಿನಿಮಾ

ಕೆಲಸದೊಂದಿಗೆ ಆರೋಗ್ಯದ ಕಾಳಜಿಯಿರಲಿ

ಸಿರವಾರ: ನವಲಕಲ್ ಗ್ರಾಮದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್‌ನಿಂದ ನರೇಗಾ ಕೂಲಿಕಾರರಿಗೆ ಸೋಮವಾರ ಆರೋಗ್ಯ ತಪಾಸಣೆ ಶಿಬಿರಕ್ಕೆ ಹಮ್ಮಿಕೊಳ್ಳಲಾಗಿತ್ತು.

ಪಿಡಿಒ ವಿಜಯಕುಮಾರ್ ಮಾತನಾಡಿ, ಕೂಲಿಕಾರರು ಕೆಲಸದ ಜತೆಗೆ ಆರೋಗ್ಯದ ಕಡೆ ಗಮನಹರಿಸಬೇಕು. ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗಿರುವುದರಿಂದ ಸಮರ್ಪಕವಾಗಿ ನೀರು ಕುಡಿಯಬೇಕು ಹಾಗೂ ಅನಗತ್ಯವಾಗಿ ಬಿಸಿಲಿನಲ್ಲಿ ಇರಬಾರದು. ಸರ್ಕಾರದ ಯೋಜನೆಯಡಿ ಸಿಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆಯಬೇಕೆಂದು ತಿಳಿಸಿದರು. ಕೂಲಿಕಾರರಿಗೆ ಉಚಿತವಾಗಿ ರಕ್ತದೊತ್ತಡ, ಮಧುಮೇಹದ ತಪಾಸಣೆ ನಡೆಸಿ ಅವಶ್ಯ ಇರುವವರಿಗೆ ಮಾತ್ರೆಗಳನ್ನು ನೀಡಲಾಯಿತು.

Latest Posts

ಲೈಫ್‌ಸ್ಟೈಲ್