More

    ಪ್ರಕೃತಿ ಸಮತೋಲನೆಗೆ ಪ್ರಾಣಿ-ಪಕ್ಷಿಗಳು ಅವಶ್ಯ

    ಮಾನ್ವಿ: ಪಕೃತಿಯಲ್ಲಿ ಸಮಾನತೆ ಮೂಡಲು ವನ್ಯ ಪ್ರಾಣಿ, ಪಕ್ಷಿಗಳು ಅವಶ್ಯ. ಪ್ರಕೃತಿಯಲ್ಲಿನ ಆಹಾರ ಸರಪಳಿಗೆ ದಕ್ಕೆಯಾದಲ್ಲಿ ಪರಿಸರದಲ್ಲಿ ಅಸಮಾನತೆ ಮೂಡುವುದರಿಂದ ಮಾನವ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ರಾಯಚೂರು ವಲಯ ಅರಣ್ಯಾಧಿಕಾರಿ ರಾಜೇಶನಾಯಕ ಹೇಳಿದರು.

    ಇದನ್ನೂ ಓದಿ: ಪ್ರತಿಯೊಬ್ಬರೂ ಪರಿಸರ ಸಮತೋಲನೆ ಕಾಪಾಡಿ : ಶಾಸಕ ವೆಂಕಟರಾವ ನಾಡಗೌಡ ಸಲಹೆ

    ಪಟ್ಟಣದ ಪಕ್ಷಿ ಪ್ರೇಮಿ ಸಲ್ಲಾವುದ್ದಿನ್‌ರವರ ನಿವಾಸದಲ್ಲಿ ಸೋಮವಾರ ವನ್ಯಜೀವಿ ಸಪ್ತಾಹ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪರಿಸರ ವ್ಯವಸ್ಥೆಯಲ್ಲಿ ಪಕ್ಷಿಗಳ ಪಾತ್ರ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಾಡುಗಳನ್ನು ನಾಶ ಮಾಡಿ ಅತಿಕ್ರಮಿಸಿಕೊಳ್ಳುತ್ತಿರುವುದರಿಂದ ವನ್ಯ ಪ್ರಾಣಿಗಳು ಸಹಜವಾದ ವಾಸಸ್ಥನವನ್ನು ಕಳೆದುಕೊಳ್ಳುತ್ತಿವೆ ಎಂದರು.
    ಮನುಷ್ಯನ ವಾಸ ಸ್ಥಾನಗಳಿಗೆ ಬರುತ್ತಿರುವುದರಿಂದ ವನ್ಯಪ್ರಾಣಿ ಹಾಗೂ ಮಾನವರ ನಡುವೆ ಸಂಘರ್ಷ ಉಂಟಾಗುತ್ತಿರುವುದನ್ನು ಕಾಣಬಹುದಾಗಿದೆ ಪ್ರತಿಯೊಬ್ಬರು ಮರಗಳನ್ನು ನೆಟ್ಟು ಪೊಷಣೆ ಮಾಡಿ ಕಾಡು ಉಳಿಸಿ ಎಂದರು.

    ಪಕ್ಷಿ ಪ್ರೇಮಿ ಸಲ್ಲಾವುದ್ದಿನ್ ಮಾತನಾಡಿ, ಭೂಮಿಯ ಮೇಲೆ ಬದುಕುವ ಹಕ್ಕು ಪ್ರತಿ ಜೀವಿಗೂ ಇದೆ. ಅವಗಳು ವಾಸಿಸುವುದಕ್ಕೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಪಕ್ಷಿಗಳ ಅಭಿವೃದ್ದಿಗೆ ಸಹಕಾರ ಮಾಡೋಣ ಎಂದರು. ವನ್ಯ ಜೀವಿ ಛಾಯಗ್ರಾಹಕರಾದ ಜಗನ್ನಾಥ ಚೌದ್ರಿ, ಪಟ್ಟಣದ ಕಿಡ್ ಜೀ ಶಾಲೆಯ ವಿದ್ಯಾರ್ಥಿಗಳು ಹಾಗೂ ಮುಖ್ಯಸ್ಥೆ ಪ್ರೀಯಾಂಕ, ಶಿಕ್ಷಕರಾದ ರೂಪ, ಕಾವ್ಯ, ಪ್ರಶಾಂತಿ, ಶಿಲ್ಪ, ಹರ್ಷ, ಅಲೀಯಾ, ನಂದಿನಿ, ಪೂಜಾ, ನಾಗರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts