More

    ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯಲು ಆಗ್ರಹ

    ದಾವಣಗೆರೆ : ಹರಿಹರ ತಾಲೂಕಿನ ಹಿರೇ ಹಾಲಿವಾಣ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಏಳೂರು ಕರಿಯಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಆಗ್ರಹಿಸಿದರು.
     ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ರೆಯಲ್ಲಿ ಮೂರನೇ ದಿನ ಕೋಣ ಸೇರಿ ವಿವಿಧ ಪ್ರಾಣಿಗಳ ಬಲಿಗೆ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಬೇಕು ಎಂದು ಒತ್ತಾಯಿಸಿದರು.
     ರಾಜ್ಯದಲ್ಲಿ ಕೋಣ ಬಲಿ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಹದಿಮೂರು ವರ್ಷಗಳ ಒಳಗಿನ ಕೋಣ ಬಲಿ ನೀಡುವಂತೆಯೆ ಇಲ್ಲ. ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ ತಿದ್ದುಪಡಿ ಪ್ರಕಾರ ಯಾವುದೆ ಮನೆಗಳ ಮುಂದೆಯೂ ಕೋಣ ಬಲಿ ನಡೆಯುವಂತಿಲ್ಲ ಎಂದು ತಿಳಿಸಿದರು.
     ದೇವಾಲಯಗಳು ವಧಾಲಯಗಳಾಗಬಾರದು. ಹಾಲಿವಾಣ ಗ್ರಾಮದ ಜನರು ಸಾತ್ವಿಕವಾಗಿ ಪೂಜೆ ಮಾಡಬೇಕು. ಭಕ್ತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಹಿಂಸಾ ಪ್ರಾಣಿದಯಾ ಆಧ್ಯಾತ್ಮಿಕ ಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts