More

    ಗಂಗೂಲಿ ಭಾರತೀಯ ಕ್ರಿಕೆಟ್‌ನ ಬದಲಾವಣೆಯ ಹರಿಕಾರ ಎಂದ ಹುಸೇನ್

    ಚೆನ್ನೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಕೆಲ ದಿನಗಳಲ್ಲೇ ಸೌರವ್ ಗಂಗೂಲಿ ವಿಶ್ವ ಕ್ರಿಕೆಟ್ ಆಡಳಿತದ ಗಮನಸೆಳೆಯುತ್ತಿದ್ದಾರೆ. ಗಂಗೂಲಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಧ್ಯಕ್ಷರಾಗಬೇಕೆಂಬ ಕೂಗು ಕೂಡ ಕೇಳಿ ಬರುತ್ತಿದೆ. ಭಾರತ ತಂಡದ ನಾಯಕನಾಗಿದ್ದ ವೇಳೆ ಗಂಗೂಲಿ ಕೆಲವೊಂದು ಕಠಿಣ ಕ್ರಮಗಳ ಮೂಲಕ ಗಮನಸೆಳೆದಿದ್ದರು. ಇದೀಗ ಇಂಗ್ಲೆಂಡ್ ಮಾಜಿ ನಾಯಕ ನಾಸೀರ್ ಹುಸೇನ್ ಕೂಡ ಗಂಗೂಲಿ ನಾಯಕತ್ವ ಗುಣಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ಬದಲಾವಣೆಯ ಹರಿಕಾರ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಚೀನಾ ಕಂಪನಿಗಳಿಗೆ ಬಿಸಿಸಿಐ ಹೊಸ ಪ್ರಾಯೋಜಕತ್ವ ನೀಡಲ್ಲ

    ಎರಡು ದೇಶಗಳ ತಂಡಗಳು ಮೈದಾನದಲ್ಲಿ ಕ್ರಿಕೆಟ್ ಆಡುವಾಗ ಬದ್ಧವೈರಿಗಳಾಗಿಯೇ ಸೆಣಸುತ್ತವೆ. ಭಾರತ ವಿರುದ್ಧ ಯಾವುದೇ ತಂಡಗಳು ಆಡಿದರೂ ಆ ಪಂದ್ಯ ಪ್ರತಿಷ್ಠೆಯಾಗಿಯೇ ಇರುತ್ತದೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಮೈದಾನದಲ್ಲಿ ಭಾರತೀಯ ಆಟಗಾರರನ್ನು ಕೆಲವೊಮ್ಮೆ ಕೆಣಕುತ್ತಿದ್ದರು. 2002ರ ನಾಟ್‌ವೆಸ್ಟ್ ಸರಣಿ ವೇಳೆ ಭಾರತ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಹಾಗೂ ಇಂಗ್ಲೆಂಡ್ ನಾಯಕನಾಗಿದ್ದ ನಾಸೀರ್ ಹುಸೇನ್ ನಡುವೆ ಮಾತಿನ ಚಕಮಕಿಯೇ ನಡೆದಿತ್ತು. ‘ಮೈದಾನದಲ್ಲಿ ನಾನು ಕೂಡ ಗಂಗೂಲಿ ಜತೆಗೆ ಸಮರವೇ ನಡೆದಿತ್ತು. ಅವರ ನಾಯಕತ್ವದ ಬಗ್ಗೆ ನನಗೆ ಗೌರವವಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ ಆಟಗಾರ ಗಂಗೂಲಿ ಎಂದಿದ್ದಾರೆ.

    ಇದನ್ನೂ ಓದಿ: ಚೀನಾ ವಸ್ತು ಬಹಿಷ್ಕಾರಕ್ಕೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಸಿದ್ಧ

    ಇಂದಿನ ನಾಯಕ ವಿರಾಟ್ ಕೊಹ್ಲಿ ಕೂಡ ಸೌರವ್ ಗಂಗೂಲಿ ಮಾದರಿಯಲ್ಲೇ ನಾಯಕತ್ವ ಗುಣ ಹೊಂದಿದ್ದಾರೆ. ಮೈದಾನದಲ್ಲಿದ್ದಾಗ ಆಟದತ್ತ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದು ಕೊಹ್ಲಿ ಗುಣಗಾನ ಮಾಡಿದ್ದಾರೆ. ಪ್ರತಿ ಪಂದ್ಯವನ್ನೂ ಗೆಲ್ಲಬೇಕೆಂದು ಕೊಹ್ಲಿ ಲೆಕ್ಕಾಚಾರ ಹಾಕುತ್ತಾರೆ ಎಂದು ನಾಸೀರ್ ಹೇಳಿದ್ದಾರೆ. ಇಂಗ್ಲೆಂಡ್ ಪರ 96 ಟೆಸ್ಟ್, 88 ಏಕದಿನ ಪಂದ್ಯಗಳನ್ನಾಡಿದ್ದಾರೆ.

    ಮುಂಬೈನಲ್ಲಿ ಮೊದಲ ಮಾನ್ಸೂನ್ ಖುಷ್‌ಯಲ್ಲಿರುವ ಕೊಹ್ಲಿಗೆ ವಾರ್ನರ್ ಸ್ಟ್ರೈಟ್‌ಹಿಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts