More

    ನಿಗೂಢ ಕ್ಷುದ್ರಗ್ರಹದತ್ತ ನಾಸಾದ ಬಾಹ್ಯಾಕಾಶ ನೌಕೆ

    ಕೇಪ್​ ಕೆನವರಾಲ್​ (ಅಮೆರಿಕ): ಅಪರೂಪದ ಲೋಹದಿಂದ ಆವೃತ್ತವಾದ ನಿಗೂಢ ಕ್ಷುದ್ರಗ್ರಹವೊಂದಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ​’ಸೈಕ್​’ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿತು. ಈ ನೌಕೆ ಆರು ವರ್ಷ ಪ್ರಯಾಣಿಸಿ ಕ್ಷುದ್ರಗ್ರಹವನ್ನು ತಲುಪಲಿದೆ.

    ಬಹುತೇಕ ಕ್ಷುದ್ರಗ್ರಹಗಳು ಬಂಡೆಗಳಿಂದ ಕೂಡಿರುತ್ತವೆ ಅಥವಾ ಹಿಮಾಚ್ಛಾದಿತವಾಗಿರುತ್ತವೆ. ಆದರೆ ಇದೇ ಮೊದಲ ಬಾರಿಗೆ ಲೋಹದಿಂದ ಕೂಡಿರುವ ಕ್ಷುದ್ರಗ್ರಹ ಪತ್ತೆಯಾಗಿದ್ದು, ಅದರ ಅನ್ವೇಷಣೆಗೆ ಹೊರಟ ಪ್ರಥಮ ಮಿಷನ್​ ಇದಾಗಿದೆ. ಇದು ಹಿಂದಿನ ಗ್ರಹವೊಂದರ ಮಧ್ಯಭಾಗದ ಉಳಿಕೆಯಾಗಿರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.

    ಅದರ ಅನ್ವೇಷಣೆಯಿಂದ ಭೂಮಿಯ ಸಮೀಪಿಸಲಾಗದ ಮಧ್ಯ ಪದರ ಮತ್ತು ಇತರ ಕಲ್ಲುಬಂಡೆಗಳ ಗ್ರಹಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಬಹುದೆಂದು ನಿರೀಸಲಾಗಿದೆ. ​’ಸೈಕ್​’ ನೌಕೆಯನ್ನು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್​ ಎಕ್ಸ್​ನ ರಾಕೆಟ್​ ನಭೋಮಂಡಲಕ್ಕೆ ಉಡಾಯಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts