More

    ನಾಲ್ಕನೇ ದೀರ್ಘಾವಧಿಯ ಪ್ರಧಾನಿ ನಮೋ: ನಾಳೆ ಏಳನೇ ಬಾರಿ ಕೆಂಪುಕೋಟೆಯಿಂದ ಭಾಷಣ

    ನವದೆಹಲಿ: ನಮ್ಮ ದೇಶದ ಆಡಳಿತ ಇತಿಹಾಸದಲ್ಲಿ ಜವಹರಲಾಲ್​ ನೆಹರು, ಇಂದಿರಾ ಗಾಂಧಿ, ಡಾ. ಮನಮೋಹನ್ ಸಿಂಗ್ ನಂತರದಲ್ಲಿ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದ ಕೀರ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಭಾಜನರಾಗಿದ್ದಾರೆ. ಅವರು ಪ್ರಧಾನಿಯಾಗಿ 2,268 ದಿನಗಳನ್ನು ಇಂದು ಪೂರೈಸಿದ್ದಾರೆ. ಅಷ್ಟೇ ಅಲ್ಲ, ಈ ರೀತಿ ಸಾಧನೆ ಮಾಡಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯೂ ಹೌದು. ಅಟಲ್​ ಬಿಹಾರಿ ವಾಜಪೇಯಿ ಅವರನ್ನೂ ಈ ವಿಷಯದಲ್ಲಿ ಮೋದಿ ಹಿಂದಿಕ್ಕಿದ್ದಾರೆ.

    ನರೇಂದ್ರ ಮೋದಿ ಅವರು ದೇಶದ 14ನೇ ಪ್ರಧಾನಮಂತ್ರಿಯಾಗಿ 2014ರ ಮೇ 26ರಂದು ಪ್ರಮಾಣ ವಚನ ಸ್ವೀಕರಿಸಿದರು. ಅದಾಗಿ ಎರಡನೇ ಅವಧಿಗೆ ಪ್ರಧಾನಿಯಾಗಿ 2019ರ ಮೇ 30ರಂದು ಪ್ರಮಾಣ ಸ್ವೀಕರಿಸಿದರು. ಗುರುವಾರ ನಾಲ್ಕನೆಯ ಸುದೀರ್ಘಾವಧಿ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾದ ಮೋದಿ ಅವರು ನಾಳೆ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಿಂದ ಏಳನೇ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ಶಿಲಾನ್ಯಾಸದ ನಂತರ ಪ್ರಧಾನಿ ಮೋದಿ ಜೈ ಶ್ರೀರಾಮ್​ ಹೇಳದೆ, ಜೈ ಸಿಯಾ ರಾಮ್​ ಎಂದೇ ಹೇಳಿದ್ದೇಕೆ? ಕಾರಣ ಇಲ್ಲಿದೆ ನೋಡಿ…

    ದೇಶದ ಆಡಳಿತ ಇತಿಹಾಸ ಗಮನಿಸಿದರೆ, ನೆಹರೂ ಅವರು ಸುದೀರ್ಘಾವಧಿಗೆ ಅಂದರೆ 17 ವರ್ಷ ಕಾಲ ಪ್ರಧಾನಿಯಾಗಿದ್ದರು. ನಂತರ ಎರಡು ಅವಧಿಗಿಂತ ಸ್ವಲ್ಪ ಹೆಚ್ಚು ಕಾಲ ಪ್ರಧಾನಿಯಾಗಿದ್ದ ಅವರ ಪುತ್ರಿ ಇಂದಿರಾ ಗಾಂಧಿ 16 ವರ್ಷ ಪ್ರಧಾನಿಯಾಗಿದ್ದರು. ಡಾ. ಮನಮೋಹನ್ ಸಿಂಗ್ ಅವರು ಎರಡು ಅವಧಿಯಲ್ಲಿ ಒಟ್ಟು 10 ವರ್ಷ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
    ಕಾಂಗ್ರೆಸ್ಸೇತರ ಪ್ರಧಾನಮಂತ್ರಿಗಳ ಅವಧಿಯನ್ನು ಗಮನಿಸಿದರೆ ಮೊರಾರ್ಜಿ ದೇಸಾಯಿ ಅವರು 1977ರ ಮಾರ್ಚ್ 24ರಿಂದ 1979ರ ಜುಲೈ 28ರ ತನಕ, ಚರಣ್ ಸಿಂಗ್ ಅವರು 1979ರ ಜುಲೈ 28ರಿಂದ 1980ರ ಜನವರಿ 14ರ ತನಕ, ವಿ.ಪಿ.ಸಿಂಗ್ ಅವರು 1989ರ ಡಿಸೆಂಬರ್ 2ರಿಂದ 1990ರ ಜುಲೈ 28ರ ತನಕ, ಚಂದ್ರ ಶೇಖರ್ ಅವರು 1990ರ ನವೆಂಬರ್ 10ರಿಂದ 1991ರ ಜೂನ್ 21ರ ತನಕ, ಎಚ್​.ಡಿ.ದೇವೇಗೌಡ ಅವರು 1996ರ ಜೂನ್ 1ರಿಂದ 1997ರ ಏಪ್ರಿಲ್ 21ರ ತನಕ, ಐ.ಕೆ.ಗುಜ್ರಾಲ್ ಅವರು 1997ರ ಏಪ್ರಿಲ್ 21ರಿಂದ 1998ರ ಮಾರ್ಚ್ 19ರ ತನಕ, ಅಟಲ್ ಬಿಹಾರಿ ವಾಜಪೇಯಿ ಅವರು 1996ರಲ್ಲಿ ಮೊದಲು 13 ದಿನ (1996ರ ಮೇ 13ರಿಂದ ಮೇ 31), ನಂತರದಲ್ಲಿ 1998-99ರಲ್ಲಿ 13 ತಿಂಗಳು, ಅದಾಗಿ 1999ರ ಅಕ್ಟೋಬರ್ 13ರಿಂದ 2004 ಮೇ ತಿಂಗಳ ತನಕ ಪ್ರಧಾನಿಯಾಗಿದ್ದರು. (ಏಜೆನ್ಸೀಸ್)

    ತೆರಿಗೆ ವ್ಯವಸ್ಥೆಯು ತಡೆರಹಿತ, ನೋವುರಹಿತ, ಮುಖರಹಿತವನ್ನಾಗಿಸಲು ಪ್ರಯತ್ನ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts