More

    ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪ್ರೇರಿತ ‘ಚಾಯ್‌ವಾಲಾ’!

    ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿಯವರಿಂದ ಸ್ಫೂರ್ತಿ ಪಡೆದ ‘ಚಾಯ್ವಾಲಾ’ ಚಹಾ ಮಾರಾಟಗಾರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

    ಇದನ್ನೂ ಓದಿ: ಕಸದ ರಾಶಿಯಲ್ಲಿ ವೋಟರ್ ಐಡಿ.. ತನಿಖೆಗೆ ಆದೇಶ

    ಮೇ 25 ರಂದು ನಡೆಯಲಿರುವ ಚುನಾವಣೆಗೆ ಕಣದಲ್ಲಿರುವ ಕಡು ಬಡ ಅಭ್ಯರ್ಥಿಗಳಲ್ಲಿ ಒಬ್ಬರಾದ 26 ವರ್ಷದ ಸುಕಾಂತ ಘಡೈ ಅವರು ಒಡಿಶಾದ ಪುರಿ ಜಿಲ್ಲೆಯ ಬ್ರಹ್ಮಗಿರಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

    ವಿನಮ್ರ ವರ್ತನೆಯ ‘ಚಾಯ್‌ವಾಲಾ’ ಸುಕಾಂತ ಘಡಾಯಿ ಪುರಿ ಜಿಲ್ಲೆಯಲ್ಲಿ ಚಹಾ ಮಾರಾಟಗಾರರಾಗಿದ್ದಾರೆ. ಅವರು ಬಾಲ್ಯದಲ್ಲಿ ಪ್ರಧಾನಿ ಮೋದಿಯವರಂತೆ ಟೀ ಮಾರುವ ಮೂಲಕ ಸಾಧಾರಣ ಜೀವನ ನಡೆಸಿದ್ದರು. ಅವರಿಗೆ ದೇಶದ ಉನ್ನತ ಹುದ್ದೆ ಅಲಂಕರಿಸಿರುವ ಪ್ರಧಾನಿ ಮೋದಿಯವರೇ ರಾಜಕೀಯ ಯುದ್ಧಭೂಮಿಗೆ ಪ್ರವೇಶಿಸಲು ಸ್ಫೂರ್ತಿ.

    ಸ್ವತಂತ್ರ ಅಭ್ಯರ್ಥಿಯಾಗಿ ಸುಕಾಂತ ಘಡಾಯಿ “ನಾನು ಪ್ರಧಾನಿ ನರೇಂದ್ರ ಮೋದಿಯವರಿಂದ ಸ್ಫೂರ್ತಿ ಪಡೆದಿದ್ದೇನೆ. ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಬಹುದಾದರೆ, ನಾನು ಸಹ ಚಹಾ ಮಾರುವವನು ಏಕೆ ಶಾಸಕನಾಗಿ ಆಯ್ಕೆಯಾಗಬಾರದು? ನಾನು ನಾಮಪತ್ರ ಸಲ್ಲಿಸಿದ್ದೇನೆ ಮತ್ತು ಬ್ರಹ್ಮಗಿರಿಯನ್ನು (ಕ್ಷೇತ್ರ) ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಲು ಸಂಕಲ್ಪ ಮಾಡಿದ್ದೇನೆ ಎಂದು ಕರೀಂಪುರ ಗ್ರಾಮದ ನಿವಾಸಿ ಘಡಾಯಿ ತಿಳಿಸಿದ್ದಾರೆ.

    ‘ಪನ್ನೂನ್ ಹತ್ಯೆ ಯತ್ನ ಪ್ರಕರಣದಲ್ಲಿ ಭಾರತದ ಹೊಣೆಗಾರಿಕೆ ತೃಪ್ತಿ ತಂದಿದೆ’: ಅಮೆರಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts