More

    ಶೈಕ್ಷಣಿಕ ಅಭಿವೃದ್ಧಿಗೆ ಸಮಿತಿ ಅವಶ್ಯ

    ಕೊಡೇಕಲ್: ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಸಮುದಾಯದವರ ಸಹಾಯ-ಸಹಕಾರ ಅಗತ್ಯ ಎಂದು ಪ್ರಾಚಾರ್ಯ ಜಿ.ಎಂ ಗಾಣಿಗೇರ ಹೇಳಿದರು.

    ನಾರಾಯಣಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ‍್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗೆ ನಾಮ ನಿರ್ದೇಶಿತಗೊಂಡ ಉಪಾಧ್ಯಕ್ಷ, ಶಿಕ್ಷಣ ಪ್ರೇಮಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಸರ್ಕಾರಿ ಶಾಲಾ ಕಾಲೇಜುಗಳು ಸಾರ್ವಜನಿಕರ ಆಸ್ತಿಗಳಾಗಿವೆ. ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.

    ಪ್ರೌಢಶಾಲೆ ಮುಖ್ಯಗುರು ಶಂಕರ ಲಮಾಣಿ, ಪ್ರಮುಖರಾದ ಸಂಗಣ್ಣ ಬಿರಾದಾರ, ಉಪನ್ಯಾಸಕಿಯರಾದ ಶೋಭಾ ಪಾಟೀಲ್, ಸುರೇಖಾ, ಗದ್ದೆಮ್ಮ ಇತರರಿದ್ದರು. ಬಿ.ಕಿರಣ ವಂದಿಸಿದರು. ಡಿ.ಎಲ್.ಕೊಡೇಕಲ್ ನಿರೂಪಣೆ ಮಾಡಿ ಸ್ವಾಗತಿಸಿದರು.

    ಸಮಿತಿ ಪದಾಧಿಕಾರಿಗಳು: ಚಿದಂಬರ ದೇಸಾಯಿ (ನಾಮನಿರ್ದೇಶಿತ ನೂತನ ಉಪಾಧ್ಯಕ್ಷ), ಯಮನಪ್ಪ ಜಂಗಿನಗಡ್ಡಿ (ಶಿಕ್ಷಣ ಪ್ರೇಮಿ), ಮಾಳಪ್ಪ ವಾಲೀಕಾರ, ಯಲಗುರೇಶ ದೊರಿ, ಮರೆಪ್ಪ ಬಂಡಿವಡ್ಡರ, ನೀಲಮ್ಮ ಹಿರೇಮಠ (ಪಾಲಕ ವರ್ಗದ ಸದಸ್ಯರು) ನಿರ್ಮಲಾ ಮಹೇಶ, ಮುತ್ತು ಕರಿಯಾಳ (ವಿದ್ಯಾರ್ಥಿ ಪ್ರತಿನಿಧಿಗಳು).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts