More

    ಗ್ರಾಮೀಣ ಭಾಗದಲ್ಲಿ ಹೋಳಿ ಸಂಭ್ರಮ

    ನರಗುಂದ: ಪಟ್ಟಣ ಹಾಗೂ ತಾಲೂಕಿನ ಕೊಣ್ಣೂರ, ಶಿರೋಳ, ಚಿಕ್ಕನರಗುಂದ, ಜಗಾಪೂರ, ಕುರ್ಲಗೇರಿ, ಹದಲಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಬುಧವಾರ ಸಾರ್ವಜನಿಕ ಸರ್ಕಾರಿ ಕಾಮದಹನ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಯುವಕರು ಹಲಗಿ ಬಾರಿಸುತ್ತಾ ಬಾಯಿ ಬಡೆದುಕೊಂಡು ಪರಸ್ಪರ ಬಣ್ಣ ದೋಕುಳಿಯಲ್ಲಿ ಭಾವೈಕ್ಯತೆಯಿಂದ ಮಿಂದೆದ್ದು ಸಂಭ್ರಮಿಸುವ ದೃಶ್ಯ ಏಲ್ಲೆಡೆ ಕಂಡು ಬಂತು.
    ಯುವಕರು, ಹಿರಿಯರು, ಮಕ್ಕಳು ಹೋಳಿಹಬ್ಬದ ಜಾನಪದ ಹಾಡುಗಳನ್ನು ಹಾಡುತ್ತ ಕಾಮಣ್ಣನಿಗೆ ಭಕ್ತಿಪೂರ್ವಕ ಪ್ರದಕ್ಷಿಣಿ ಹಾಕಿದರು. ಮಹಿಳೆಯರು ಕಾಮಣ್ಣನ ಬೆಂಕಿ ತೆಗೆದುಕೊಂಡು ಹೋಗಿ ಮನೆಯಲ್ಲಿ ಕಡಲೆ ಸುಟ್ಟು ಕುಟುಂಬಸ್ಥರೊಂದಿಗೆ ಸವಿದರು. ನರಗುಂದ ಅರಸ ಬಾಬಾಸಾಹೇಬರ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪಟ್ಟಣದ ದಂಡಾಪೂರ, ಕಸಭಾ, ಪೇಠ, ಅರ್ಭಾಣ, ಸೋಮಾಪೂರ ಪಂಚ ಬಣಗಳಲ್ಲಿ ಗುರು,ಹಿರಿಯರ ಸಮ್ಮುಖದಲ್ಲಿ ರತಿ, ಕಾಮಣ್ಣರಿಗೆ ಹೋಳಿಗೆ ನೈವೇದ್ಯ ಅರ್ಪಿಸಿ, ಸಾಂಪ್ರದಾಯಿಕ ವಿಧಿ,ವಿಧಾನದಂತೆ ಕಾಮದಹನ ಮಾಡಲಾಯಿತು.
    ಹಲಗೆ, ರಗ್ಗಲಿಗೆ, ಜಗ್ಗಲಿಗೆ, ತಮಟೆ, ಕರಡಿ ಮಜಲು ಹಾಗೂ ವಿವಿಧ ವಾಧ್ಯ ಮೇಳಗಳು ಹಬ್ಬದ ಕಳೆ ಹೆಚ್ಚಿಸಿದವು. ಮಕ್ಕಳು, ಯುವಕ, ಯುವತಿಯರು ಬಣ್ಣ,ಬಣ್ಣದ ಚಸ್ಮಾ, ಟೋಪಿಗಳನ್ನು ಧರಿಸಿ ಸಂಜೆಯವರೆಗೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂತು. ಪಟ್ಟಣ ಹಾಗೂ ತಾಲೂಕಿನ ಕೆಲವೆಡೆ ಕಾಮಣ್ಣನ ಕಲ್ಪಿತ ಶವಯಾತ್ರೆ ಮೆರವಣಿಗೆ ಮಾಡಲಾಯಿತು. ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರಿಂದ ಹೋಳಿ ಆಚರಣೆ ತಾಲೂಕಿನಾಧ್ಯಂತ ಶಾಂತಿಯುತವಾಗಿ ಜರುಗಿತು.

    ನರಗುಂದ ದಂಡಾಪೂರ ಬಡಾವಣೆಯಲ್ಲಿ ಮಾಡಿದ ಸರ್ಕಾರಿ ಕಾಮ ದಹನ ಬೆಂಕಿ ಪ್ರಕರತೆಯಿಂದ ಶ್ರೀಉಡಚಾ ಪರಮೇಶ್ವರಿ ದೇವಸ್ಥಾನದ ಮರದ ಮೇಲಿದ್ದ ಹೆಜ್ಜೇನು ಹುಳುಗಳ ದಾಳಿಯಿಂದ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ಹುಳುಗಳು ಅದೃಷ್ಟವಶಾತ್ ಯಾರೊಬ್ಬರನ್ನು ಕಚ್ಚಿಲ್ಲ. ಹೊರಕೇರಿ ಬಡಾವಣೆಯಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ಕಾಮದಹನ ಮಾಡಿದ್ದರಿಂದ ನಜೀರಸಾಬ ಎಂಬುವರ ಕಟ್ಟಿಗೆಯ ಪಾನ್‍ಶಾಪ್ ಅಂಗಡಿಗೆ ಬೆಂಕಿ ತಗುಲಿತ್ತು. ಖಾಜೇಸಾಬ ಅಡಗೋಡಿ ಎಂಬುವರ ಮನೆಯ ಗೋಡೆ ಹಾಗೂ ಕಸಬಾ ಬಡಾವಣೆಯ ಭವಾನಿ ಕಿರಾಣಿ ಸ್ಟೋರ್ ಅಂಗಡಿ ಗೋಡೆಗಳು ಬೆಂಕಿ ಕೆನ್ನಾಲಿಗೆಗೆ ಬಹಳಷ್ಟು ಕಾದು ಅಪಾಯಕ್ಕೆ ಸಿಲುಕಿದ್ದರಿಂದ ಬಡಾವಣೆಯ ಸಾರ್ವಜನಿಕರು ನಿರಂತರ ನೀರು ಹೊಡೆದು ಸಂಭವನೀಯ ಅಪಾಯ ನಿಯಂತ್ರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts