More

    ‘ಕೆಜಿಎಫ್​ ತಾತ’ನ ಅನುಪಸ್ಥಿತಿಯಲ್ಲೇ ಬಿಡುಗಡೆಯಾಗಲಿದೆ ‘ನ್ಯಾನೋ ನಾರಾಯಣಪ್ಪ’ …

    ಬೆಂಗಳೂರು: ತಾವು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ‘ನ್ಯಾನೋ ನಾರಾಯಣಪ್ಪ’ ಬಗ್ಗೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು ‘ಕೆಜಿಎಫ್​ ತಾತ’. ಆದರೆ, ಚಿತ್ರ ಬಿಡುಗಡೆಯಾಗುವುದನ್ನು ನೋಡುವುದಕ್ಕೆ ಅವರೇ ಬದುಕುಳಿದಿಲ್ಲ. ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಅವರು ನಿಧನರಾಗಿದ್ದು, ಅವರ ಅನುಪಸ್ಥಿತಿಯಲ್ಲೇ ಸದ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಒಂದೇ ದಿನ ಬಿಡುಗಡೆಯಾಗಲಿದೆ ಅದಿತಿ ಅಭಿನಯದ ಎರಡು ಚಿತ್ರಗಳು …

    ‘ನ್ಯಾನೋ ನಾರಾಯಣಪ್ಪ’ ಚಿತ್ರವನ್ನು ಇತ್ತೀಚೆಗೆ ಸೆನ್ಸಾರ್​ ಮಂಡಳಿಯ ಸದಸ್ಯರು ಇತ್ತೀಚೆಗೆ ನೋಡಿ, ‘ಯು’ ಪ್ರಮಾಣಪತ್ರ ನೀಡಿದೆ. ಪ್ರಮಾಣ ಪತ್ರ ಸಿಕ್ಕ ಖುಷಿಯಲ್ಲಿ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಆದರೆ, ತಮ್ಮ ಚಿತ್ರದ ಜೀವಾಳವಾಗಿದ್ದ ಕೃಷ್ಣಾಜಿ ರಾವ್ ಅವರ ಅನುಪಸ್ಥಿತಿಯ ನಡುವೆಯೇ ಚಿತ್ರ ಬಿಡುಗಡೆ ಮಾಡಬೇಕಾದ ಬೇಸರದಲ್ಲಿದೆ.

    ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮತ್ತು ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳನ್ನು ನಿರ್ದೇಶಿಸಿರುವ ಕುಮಾರ್​, ಈ ಚಿತ್ರವನ್ನೂ ನಿರ್ದೇಶಿಸಿ-ನಿರ್ಮಿಸಿದ್ದಾರೆ. ಕೃಷ್ಣಾಜಿ ರಾವ್​ ಕುರಿತು ಮಾತನಾಡುವ ಅವರು, ‘ಲವಲವಿಕೆಯಿಂದ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಕೃಷ್ಣಾಜಿ ರಾವ್​. ಚಿತ್ರದಲ್ಲಿ ಅವರ ನಟನೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಪ್ರತಿಬಾರಿ ಕರೆ ಮಾಡಿದಾಗಲೂ, ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂದು ಕೇಳುತ್ತಿದ್ದರು. ಆದರೆ, ಬಿಡುಗಡೆಯ ಹೊತ್ತಿಗೆ ಅವರೇ ನಮ್ಮ ನಡುವೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

    ಇದನ್ನೂ ಓದಿ: ಸಾವಿರುಪಾಯಿಗೆ ಸ್ವರ್ಗ’ ತೋರಿಸ್ತಾರಂತೆ ಅಲ್ಲು ರಘು …

    ‘ನ್ಯಾನೋ ನಾರಾಯಣಪ್ಪ’ ಚಿತ್ರದಲ್ಲಿ ಕೃಷ್ಣಾಜಿ ರಾವ್​ ಜತೆಗೆ ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅಕ್ಷತ ಕುಕ್ಕಿ, ಅಪೂರ್ವ ಮುಂತಅದವರು ನಟಿಸಿದ್ದಾರೆ. ಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ ಈ ಚಿತ್ರಕ್ಕಿದೆ.

    ಬದಲಾವಣೆ ಮಾಡಿ ತಂದು ತೋರಿಸಿ … ‘ಪಠಾಣ್​’ ಚಿತ್ರಕ್ಕೆ ಸೆನ್ಸಾರ್​ ಬೋರ್ಡ್​ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts