More

    ಬದಲಾವಣೆ ಮಾಡಿ ತಂದು ತೋರಿಸಿ … ‘ಪಠಾಣ್​’ ಚಿತ್ರಕ್ಕೆ ಸೆನ್ಸಾರ್​ ಬೋರ್ಡ್​ ಸೂಚನೆ

    ಮುಂಬೈ: ಶಾರೂಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್​’ ಚಿತ್ರದ ‘ಬೇಷರಮ್​ ರಂಗ್​’ ಹಾಡಿನ ಬಗ್ಗೆ ಸಾಕಷ್ಟು ವಿವಾದಗಳಾಗಿವೆ. ಆ ಹಾಡನ್ನು ಡಿಲೀಟ್​ ಮಾಡಬೇಕು, ಚಿತ್ರವನ್ನು ಬಾಯ್ಕಾಟ್​ ಮಾಡಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ, ಚಿತ್ರ ಮತ್ತು ಹಾಡು ನೋಡಿರುವ ಸೆನ್ಸಾರ್​ ಮಂಡಳಿಯು ಒಂದಿಷ್ಟು ಬದಲಾವಣೆಗಳನ್ನು ಸೂಚಿಸಿದ್ದು, ಆ ಬದಲಾಗವಣೆಗಳನ್ನು ಅಳವಡಿಸಿಕೊಂಡು, ತಂದು ಚಿತ್ರ ತೋರಿಸಬೇಕು ಎಂದು ಸೂಚಿಸಿದೆ.

    ಇದನ್ನೂ ಓದಿ: ಹಲವು ಜಾನರ್​ಗಳ ಮಿಶ್ರಣವಿರುವ ‘ಕಾಕ್ಟೈಲ್​’ ಚಿತ್ರದ ಟ್ರೈಲರ್​ ಬಿಡುಗಡೆ …

    ಇತ್ತೀಚೆಗೆ ಚಿತ್ರು ಸೆನ್ಸಾರ್​ ಅಂಗಳಕ್ಕೆ ಹೋಗಿದೆ. ಚಿತ್ರವನ್ನು ನೋಡಿರುವ ಸೆನ್ಸಾರ್​ ಮಂಡಳಿಯು ಒಂದಿಷ್ಟು ಬದಲಾವಣೆಗಳನ್ನು ಸೂಚಿಸಿದ್ದು, ಆ ಬದಲಾವಣೆಗಳನ್ನು ಮಾಡಿಕೊಂಡು ಬರಬೇಕು ಎಂದು ಚಿತ್ರತಂಡದವರಿಗೆ ಹೇಳಿದ್ದೇವೆ ಎಂದು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್​ ಜೋಷಿ ತಿಳಿಸಿದ್ದಾರೆ. ಆದರೆ, ಏನೆಲ್ಲಾ ಬದಲಾವಣೆಗಳನ್ನು ಸೂಚಿಸಿದೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

    ಈ ಕುರಿತು ಮಾತನಾಡಿರುವ ಅವರು, ‘ಸೆನ್ಸಾರ್ ನಿಯಮಗಳ ಪ್ರಕಾರವೇ ಸಮಿತಿಯು ಚಿತ್ರವನ್ನು ನೋಡಿದ್ದು, ಒಂದಿಷ್ಟು ಬದಲಾವಣೆಗಳನ್ನು ಹೇಳಿದೆ. ಚಿತ್ರತಂಡದವರು ಆ ಬದಲಾವಣೆಗಳನ್ನು ಅಳವಡಿಸಿ ತಂದು ಚಿತ್ರವನ್ನು ತೋರಿಸಬೇಕು ಎಂದು ಹೇಳಿದ್ದೇವೆ. ಚಿತ್ರತಂಡದವರು ಸೂಚಿಸದ ಬದಲಾವಣೆಗಳನ್ನು ಮಾಡಿಕೊಂಡು ಬರುವ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಫಿಕ್ಸ್​ ಆಯ್ತು ‘ಪೊನ್ನಿಯನ್​ ಸೆಲ್ವನ್​ 2’ ಬಿಡುಗಡೆ ದಿನಾಂಕ … ಯಾವಾಗ ಗೊತ್ತಾ?

    ಇದಕ್ಕೂ ಮುನ್ನ, ‘ಪಠಾಣ್​’ ಚಿತ್ರದ ‘ಬೇಷರಮ್​ ರಂಗ್​’ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ ಎಂಬ ಕಾರಣಕ್ಕೆ ವಿವಾದವೆದ್ದಿತ್ತು. ಬಹುಭಾಷಾ ನಟ ಪ್ರಕಾಶ್​ ರೈ, ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಪುರಸ್ಕೃತೆ ಆಶಾ ಪರೇಖ್​ ಸೇರಿದಂತೆ ಹಲವರು ಚಿತ್ರತಂಡಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸುವುದರ ಜತೆಗೆ, ಈ ರೀತಿ ಪ್ರತಿಯೊಂದು ವಿಷಯಕ್ಕೂ ತಗಾದೆ ತೆಗೆದರೆ, ಆಗ ಚಿತ್ರ ಮಾಡುವುದೇ ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಎದೆ ಮೇಲೆ ಸಲ್ಲು ಭಾಯ್​ ಹಚ್ಚೆ ಹಾಕಿಸಿದ್ದ ಮಹಿಳೆ! ಜನ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts