More

    ಕೆಎಂಎಫ್ ಹಾಲಿನ ಉತ್ಪನ್ನ ಅಮುಲ್‌ನೊಂದಿಗೆ ವಿಲೀನ ಬೇಡ

    ಹಗರಿಬೊಮ್ಮನಹಳ್ಳಿ: ನಂದಿನಿ ಕೆಎಂಎಫ್ ಹಾಲಿನ ಉತ್ಪನ್ನಗಳನ್ನು ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ಕ್ರಮವನ್ನು ಸರ್ಕಾರ ಕೈಬಿಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ವಿಶ್ವೇಶ್ವರಯ್ಯ, ಅನ್ನದಾನೇಶ್ವರಗೆ ಶನಿವಾರ ಮನವಿ ಸಲ್ಲಿಸಿದರು.

    ನಂದಿನಿ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟ ಹೊಂದಿವೆ

    ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಿ.ಸಿದ್ದನಗೌಡ ಮಾತನಾಡಿ, ರಾಜ್ಯದಲ್ಲಿ ಕೆಎಂಎಫ್ ಒಕ್ಕೂಟದಿಂದ ನಂದಿನಿ ಉತ್ಪನ್ನಗಳು ತಮ್ಮದೇ ಆದ ಉತ್ಕೃಷ್ಟ ಗುಣಮಟ್ಟ ಹೊಂದಿವೆ. ರಾಜ್ಯದ ರೈತರ ಬಹುಪಾಲು ಕೊಡುಗೆಯಿಂದ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ.

    ಇದನ್ನೂ ಓದಿ: ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್​ನಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ

    ನಂದಿನಿ ಹಾಲಿನ ಉತ್ಪಾದನೆ ಹೆಚ್ಚಿಸಿ ಕರ್ನಾಟಕದ ಕೋಟ್ಯಂತರ ರೈತರ ಪಶು ಸಂಗೋಪನೆಗೆ ಸಹಾಯಕವಾಗಲು ಪ್ರೋತ್ಸಾಹ ನೀಡಬೇಕು. ಸರ್ಕಾರ ಯೋಚಿಸಿರುವ ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ಕ್ರಮ ಕೈಬಿಡಬೇಕೆಂದು ಒತ್ತಾಯಿಸಿದರು.

    ರೈತ ಸಂಘದ ಮಹೇಶ್ ಬನ್ನಿಗೋಳ, ಅಲ್ಲಂಬಾಷಾ, ತಂಬ್ರಹಳ್ಳಿ ವೀರಣ್ಣ, ಎಂ.ಜಿ.ಮೃತ್ಯುಂಜಯಗೌಡ, ಜೆ.ಎಂ.ರುದ್ರಮುನಿಸ್ವಾಮಿ, ಆರ್.ಸಿದ್ದರೆಡ್ಡಿ, ಪಿ.ಬಸವನಗೌಡ, ಬೆಳಗುಂದಿ ಯಮನೂರಪ್ಪ, ಎಸ್.ವಿರೇಶ್, ಕೆ.ನಿಂಗಪ್ಪ ಇದ್ದರು.

    15 ಎಚ್‌ಬಿಎಚ್ 01
    ಹಗರಿಬೊಮ್ಮನಹಳ್ಳಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಂದಿನಿಯೊಂದಿಗೆ ಅಮೂಲ್ ಉತ್ಪನ್ನಗಳನ್ನು ವಿಲೀನಗೊಳಿಸದಂತೆ ಆಗ್ರಹಿಸಿ ಉಪ ತಹಸೀಲ್ದಾರ್ ವಿಶ್ವೇಶ್ವರಯ್ಯ, ಅನ್ನದಾನೇಶ್ವರಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಬಿ.ಸಿದ್ದನಗೌಡ, ಎಂ.ಜಿ.ಮೃತ್ಯುಂಜಯಗೌಡ, ಜೆ.ಎಂ.ರುದ್ರಮುನಿಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts