More

    ರೈಲ್ವೆ ಯೋಜನೆ ಭೂ ಸ್ವಾಧೀನಕ್ಕೆ ರಟ್ಟಿಹಳ್ಳಿ ರೈತರ ವಿರೋಧ

    ರಟ್ಟಿಹಳ್ಳಿ: ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರ ರೈಲ್ವೆ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ, ಯೋಜಿತ ಮಾರ್ಗ ಬದಲಾಯಿಸಿ ರಟ್ಟಿಹಳ್ಳಿ ಪಟ್ಟಣ ಉಳಿಸಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದೊಂದಿಗೆ ಸ್ಥಳೀಯ ನಿವಾಸಿಗಳೊಂದಿಗೆ ಪ್ರವಾಸಿ ಮಂದಿರದಲ್ಲಿ ಶಾಸಕ ಯು.ಬಿ. ಬಣಕಾರ ಮತ್ತು ತಹಸೀಲ್ದಾರ್ ಕೆ. ಗುರುಬಸವರಾಜ ಸಮ್ಮುಖದಲ್ಲಿ ಶನಿವಾರ ಸಭೆ ಜರುಗಿತು.

    ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರಾಮಣ್ಣ ಕೆಂಚಳ್ಳೇರ, ಉಜಿನೆಪ್ಪ ಕೋಡಿಹಳ್ಳಿ ಮಾತನಾಡಿ, ರಟ್ಟಿಹಳ್ಳಿ ಪಟ್ಟಣದಲ್ಲಿ ಪುರಾತತ್ವ ಇಲಾಖೆಯ ಕದಂಬೇಶ್ವರ ದೇವಸ್ಥಾನದ ಸುತ್ತಮುತ್ತ 300 ಮೀಟರ್ ಯಾವುದೇ ಮನೆಗಳನ್ನು ನಿರ್ಮಾಣ ಮಾಡುವಂತಿಲ್ಲ. ರೈಲ್ವೆ ಅಧಿಕಾರಿಗಳು ಈ ಮೊದಲು ಯೋಜಿತ ಮಾರ್ಗವನ್ನು ಬಿಟ್ಟು ಪಟ್ಟಣಕ್ಕೆ ಸಮೀಪದಲ್ಲಿ ಸರ್ವೆ ಕಾರ್ಯ ಮಾಡುತ್ತಿದ್ದಾರೆ. ರೈತರಿಗೆ ಯಾವುದೇ ಮಾಹಿತಿ ನೀಡದೇ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಮೀನಿನಲ್ಲಿ ಸರ್ವೆ ಮಾಡುತ್ತಿದ್ದಾರೆ. ರೈಲ್ವೆ ಯೋಜನೆಗೆ ನಮ್ಮ ವಿರೋಧವಿಲ್ಲ, ಆದರೆ, ಈ ಮಾರ್ಗವನ್ನು ಬದಲಾಯಿಸಿ ಪಟ್ಟಣದ ಬೆಳವಣಿಗೆಗೆ ಜಿಲ್ಲಾಡಳಿತ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

    ರೈತರ ಮಾಹಿತಿ ಆಲಿಸಿದ ಶಾಸಕ ಯು.ಬಿ. ಬಣಕಾರ, ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಶೀಘ್ರವೇ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳೀಯರಿಗೆ ಯೋಜನೆಯ ಸಂಪೂರ್ಣ ಮಾಹಿತಿ ನೀಡಬೇಕು. ಅಲ್ಲಿಯವರೆಗೆ ಸರ್ವೆ ಕಾರ್ಯ ಮಾಡಬಾರದು ಎಂದು ಸೂಚಿಸಿದರು.

    ಅನಿರ್ದಿಷ್ಟಾಧಿ ಪ್ರತಿಭಟನೆ ಇಂದಿನಿಂದ

    ರೈಲ್ವೆ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ಈಗಾಗಲೇ ಜ. 29ಕ್ಕೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಸ್ಥಳಕ್ಕೆ ರೈಲ್ವೆ ಯೋಜನೆಯ ಅಧಿಕಾರಿಗಳು ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಿ ಭಗತ್​ಸಿಂಗ್ ವೃತ್ತದಲ್ಲಿ ಬೆಳಗ್ಗೆ 10 ಗಂಟೆಯಿಂದ ಪ್ರತಿಭಟನೆ ಆರಂಭಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದರು.

    ತಹಸೀಲ್ದಾರ್ ಕೆ.ಗುರುಬಸವರಾಜ, ಪಿ.ಎಸ್.ಐ. ಜಗದೀಶ ಜೆ., ಹಾವೇರಿ ಹಾಲು ಒಕ್ಕೂಟ ಕಲ್ಯಾಣಿ ಸಂಘದ ಅಧ್ಯಕ್ಷ ಹನುಮಂತಗೌಡ ಭರಮಣ್ಣನವರ, ತಾ.ಪಂ. ಮಾಜಿ ಅಧ್ಯಕ್ಷ ಮಹೇಶ ಗುಬ್ಬಿ, ಶಂಕ್ರಗೌಡ ಚೆನ್ನಗೌಡ್ರ, ನಾಗನಗೌಡ ಕೋಣ್ತಿ, ಶಂಕ್ರಗೌಡ ಶಿರಗಂಬಿ, ಗುಡ್ಡನಗೌಡ್ರ ಪ್ಯಾಟಿಗೌಡ್ರ, ಬಸನಗೌಡ ಗಂಟೆಪ್ಪಗೌಡ್ರ, ಪ್ರಭು ಮುದಿವೀರಣ್ಣನವರ, ಶೇಖರಗೌಡ ಎಕ್ಕೆಗುಂದಿ, ನಾಗನಗೌಡ ಪಾಟೀಲ, ರಾಜು ಮಳಗೊಂಡರ, ಹನುಮಂತಪ್ಪ ಗಾಜೇರ, ರವೀಂದ್ರ ಮುದಿಯಪ್ಪನವರ, ರವಿ ಹದಡೇರ, ಎಸ್.ಜಿ.ಚೂರಿ, ಷಣ್ಮುಖ ಪ್ಯಾಟಿಗೌಡ್ರ, ವಿಜಯ ಅಂಗಡಿ, ಉಜ್ಜಪ್ಪ ದ್ಯಾವಕ್ಕಳವರ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts