More

    ರೈತರ ಪಾಲಿನ 7 ಗಂಟೆ ವಿದ್ಯುತ್ ಬೆಳಗ್ಗೆಯೇ ನೀಡಿ

    ಬೀರೂರು: ಮಳೆ ಇಲ್ಲದೆ ಅಡಕೆ, ತೆಂಗು ಇತರ ಬೆಳೆಗಳು ನಾಶವಾಗುತ್ತಿವೆ. ರೈತರಿಗಾಗಿ ಸರ್ಕಾರ ನಿಗದಿಪಡಿಸಿದ ವಿದ್ಯುತ್ ನೀಡಿದರೆ ಕೊಳವೆಬಾವಿಯಿಂದ ನೀರುಹಾಯಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ನೆರವಾಗುತ್ತದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿ ಬಾಸೂರು ಹೇಳಿದರು.

    ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶುಕ್ರವಾರ ಮೆರವಣಿಗೆ ನಡೆಸಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಬರ ಆವರಿಸಿದ್ದು ರೈತರು ಕಂಗಾಲಾಗಿದ್ದಾರೆ. ಸರ್ಕಾರ ನಿಗದಿಪಡಿಸಿದ 7 ಗಂಟೆ ವಿದ್ಯುತ್ ಸಮರ್ಪಕವಾಗಿ ನೀಡುತ್ತಿಲ್ಲ. ರೈತರ ಪಾಲಿನ ವಿದ್ಯುತ್‌ನ್ನು ಬೆಳಗಿನ ಸಮಯದಲ್ಲೇ ನೀಡಬೇಕೆಂದು ಒತ್ತಾಯಿಸಿದರು.
    ಜಮೀನುಗಳಲ್ಲಿ ಹಾದು ಹೋಗಿರುವ ಹಳೆಯ ಪರಿವರ್ತಕ ಹಾಗೂ ವಿದ್ಯುತ್ ಲೈನ್ ಬದಲಿಸಬೇಕು. ಹಳೇ ಅಕ್ರಮ ಸಕ್ರಮ ಪದ್ಧತಿ ಮರು ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.
    ಮೈಸೂರಿನ ಯುವ ಘಟಕ ಅಧ್ಯಕ್ಷ ಫಯಾಜ್ ಮಾತನಾಡಿ, ಬೇಕಾಬಿಟ್ಟಿ ನೀಡುತ್ತಿರುವ ಕರೆಂಟ್‌ನಿಂದ ಕೃಷಿಮೋಟರ್‌ಗಳು ಸುಟ್ಟು ಹೋಗುತ್ತಿವೆ. ಸರ್ಕಾರ ನಿಗದಿಪಡಿಸಿದ 7 ಗಂಟೆ ಕಾಲ ಬೆಳಗಿನ ಸಮಯದಲ್ಲಿ ವಿದ್ಯುತ್ ನೀಡಿ. ರಾತ್ರಿ ಸಮಯದಲ್ಲಿ ಕಾಡುಪ್ರಾಣಿಗಳ ಸಂಚಾರ ಇರುವುದರಿಂದ ಜೀವ ಭಯದಲ್ಲಿ ತೋಟಗಳ ಉಳಿವಿಗೆ ಹೋರಾಟ ನಡೆಸುವಂತಾಗಿದೆ ಎಂದರು.
    ಮೆಸ್ಕಾಂ ಎಇಇ ನಂದೀಶ್ ಮಾತನಾಡಿ, ಬಳ್ಳಿಗನೂರು ಗ್ರಾಮದ ಬಳಿ ವಿತರಣ ಕೇಂದ್ರಕ್ಕೆ ಸ್ಥಳ ಗುರುತಿಸಲಾಗಿದೆ. ಜಾಗ ಮಂಜೂರಾತಿ ಬಳಿಕ ಆ ಭಾಗದ ರೈತರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಶಾಶ್ವತ ಪರಿಹಾರ ಸಿಗಲಿದೆ. ಸದ್ಯಕ್ಕೆ ಎಫ್ 10 ಇದ್ದ ಅತಿಯಾದ ಲೋಡ್‌ನ್ನು ಎಫ್ 9 ಮೇಲೆ ಹಾಕಿ ವೈ ಆಪರೇಷನ್ ಮೂಲಕ ವಿದ್ಯುತ್ ಸರಬರಾಜು ಮಾಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಲಾಗಿದೆ ಎಂದು ತಿಳಿಸಿದರು.
    ಬೀರೂರು ಹೋಬಳಿ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಬಿ.ಎಚ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ಸಿ.ಎಂ.ಸೋಮಶೇಖರ್, ಗೌರವಾಧ್ಯಕ್ಷ ಕುಮಾರಸ್ವಾಮಿ, ಕಡೂರು ಹೋಬಳಿ ಅಧ್ಯಕ್ಷ ಭರತ್.ಟಿ.ಎಸ್.ತುರುವನಹಳ್ಳಿ, ದೋಗಿಹಳ್ಳಿ ಗೋವಿಂದಪ್ಪ, ಮಾರ್ಗದ ದಿನೇಶ್, ಹರೀಶ್ ಹಾಗೂ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts