More

    ತಾಯಿಯಲ್ಲಿ ದೇವತಾ ಸ್ವರೂಪ : ಕೊಲಕಾಡಿ ವಾದಿರಾಜ ಉಪಾಧ್ಯಾಯ

    ವಿಜಯವಾಣಿ ಸುದ್ದಿಜಾಲ ಕಾರ್ಕಳ

    ಈ ದೇಶದಲ್ಲಿ ಹುಟ್ಟಲು ನಾವು ಯಾವುದೋ ಜನ್ಮದ ಪುಣ್ಯ ಮಾಡಿರಬೇಕು. ಇಲ್ಲಿ ಕಲ್ಲು, ಮಣ್ಣು, ಗಾಳಿ ಹೀಗೆ ಪ್ರತಿಯೊಂದರಲ್ಲಿ ದೇವರನ್ನು ಕಾಣುತ್ತೇವೆ. ಹೆತ್ತ ತಾಯಿಯಲ್ಲೂ ದೇವರನ್ನು ಕಂಡ ನಾಡಿದು. ಯಾರಿಗೆ ಅಮ್ಮನಲ್ಲಿ ದೇವರನ್ನು ಕಾಣಲು ಸಾಧ್ಯವಿಲ್ಲವೋ ಅಂತವರಿಗೆ ಪ್ರಪಂಚ ಯಾವುದೇ ಮೂಲೆಗೆ ಹೋದರೂ ಎಲ್ಲೂ ದೇವರನ್ನು ಕಾಣಲು ಸಾಧ್ಯವಿಲ್ಲ ಎಂದು ಧಾರ್ಮಿಕ ವಿದ್ವಾಂಸ ಮೂಲ್ಕಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು.

    ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಗುರುವಾರ ಶ್ರೀ ಲಕ್ಷ್ಮೀ ಜನಾರ್ದನ ದೇವರ ಹಾಗೂ ಪರಿವಾರ ದೇವರ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

    ಕ್ಷೇತ್ರದ ನವೀಕರಣ, ಬ್ರಹ್ಮಕಲಶೋತ್ಸವಾದಿ ಪ್ರಕ್ರಿಯೆಗಳಿಗೆ ಸಹಕರಿಸಿದ ದಾನಿಗಳನ್ನು, ಸೇವೆ ಸಲ್ಲಿಸಿದವರನ್ನು, ಸ್ವಯಂಸೇವಕರನ್ನು ಸನ್ಮಾನಿಸಲಾಯಿತು. ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ, ಮುಂಬೈ ಉದ್ಯಮಿ ನಂದಳಿಕೆ ಕಾಪಿಕೆರೆ ಶ್ರೀಕೃಷ್ಣ ಧಾಮ ರತ್ನಾಕರ್ ವೈ.ಶೆಟ್ಟಿ, ನಂದಳಿಕೆ ಕೊರಂಗಬೆಟ್ಟು ನಾರಾಯಣ ಬಿ.ಶೆಟ್ಟಿ, ಉದ್ಯಮಿ ಕೆದಿಂಜೆ ಕೂಟಾಯಿ ಸೂರ್ಯಕಾಂತ್ ಶೆಟ್ಟಿ, ಉದ್ಯಮಿ ಶೋಧನ್ ಕುಮಾರ್ ಶೆಟ್ಟಿ, ವಿಕಾಸ್ ಶೆಟ್ಟಿ ಬೋಳ, ಉಮಾ ಕೃಷ್ಣ ವೈ.ಶೆಟ್ಟಿ, ವಾಸುದೇವ ಹೆಬ್ಬಾರ್ ಕೆದಿಂಜೆ, ಪ್ರಭಾಕರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ತುಕಾರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಎನ್.ಎಂ.ಹೆಗ್ಡೆ, ಸರ್ವಜ್ಞ ತಂತ್ರಿ ಬೆಳ್ಮಣ್, ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಶೆಟ್ಟಿ ವಂದಿಸಿದರು.

    ದೇವರ ನಾಮಸ್ಮರಣೆಗೆ ಮೈಲಿಗೆ ಇಲ್ಲ. ಮೈಲಿಗೆ ಇರುವುದು ದೇಹಕ್ಕೆ ಮಾತ್ರ. ಶುದ್ಧ ಮನದ ಭಕ್ತಿಗೆ ದೇವರು ಒಲಿಯುತ್ತಾನೆ. ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹೆಚ್ಚಾಗಿ, ಯುವ ಜನತೆ ಅದರ ಬಗ್ಗೆ ಒಲವು ತೋರಿಸುತ್ತಾರೆ. ಹೀಗಾಗಿ ಪ್ರತಿ ಮನೆಯಲ್ಲಿ ಮಕ್ಕಳಿಗೆ ನಮ್ಮ ನಾಡು, ನುಡಿ, ದೇವರು, ಧರ್ಮದ ಬಗ್ಗೆ ಸಂಸ್ಕಾರ ಕಲಿಸುವ ಕೆಲಸವಾಗಬೇಕು.
    ಮೂಲ್ಕಿ ಕೊಲಕಾಡಿ ವಾದಿರಾಜ ಉಪಾಧ್ಯಾಯ, ಧಾರ್ಮಿಕ ವಿದ್ವಾಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts